ಅರ್ಜುನ ವೀರ ಮರಣಹೊಂದಿ ಇಂದಿಗೆ 1 ವರ್ಷ: ಸರ್ಕಾರದ ನಡೆಗೆ ಅಭಿಮಾನಿಗಳು ಬೇಸರ

ಅರ್ಜುನ, ಆನೆ ಸೆರೆ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿ ಒಂದು ವರ್ಷ ಕಳೆದಿದೆ. ಅದರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಭರವಸೆ ನೀಡಿದ್ದರೂ, ಇನ್ನೂ ಪೂರ್ಣಗೊಳಿಸಿಲ್ಲ. ಅಭಿಮಾನಿಗಳು ನಿರಾಶರಾಗಿದ್ದಾರೆ. ಅರ್ಜುನನ ಪುತ್ಥಳಿ ಮತ್ತು ಸ್ಮಾರಕದ ಕಾಮಗಾರಿಯ ವಿಳಂಬಕ್ಕೆ ಕಾರಣವೇನು ಎಂಬುದು ಪ್ರಶ್ನೆ ಉದ್ಬವಿಸಿದೆ.

ಅರ್ಜುನ ವೀರ ಮರಣಹೊಂದಿ ಇಂದಿಗೆ 1 ವರ್ಷ: ಸರ್ಕಾರದ ನಡೆಗೆ ಅಭಿಮಾನಿಗಳು ಬೇಸರ
ಅರ್ಜುನ ವೀರ ಮರಣಹೊಂದಿ ಇಂದಿಗೆ 1 ವರ್ಷ: ಸರ್ಕಾರದ ನಡೆಗೆ ಅಭಿಮಾನಿಗಳು ಬೇಸರ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 04, 2024 | 10:27 PM

ಹಾಸನ, ಡಿಸೆಂಬರ್​ 04: ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಜುನ (Arjuna) ವೀರ ಮರಣಹೊಂದಿ ಇಂದಿಗೆ ಒಂದು ವರ್ಷ ಕಳೆದಿದೆ. ತನ್ನ ಜೀವನದುದ್ದಕ್ಕೂ ವೀರನಂತೆ ಬದುಕಿದ್ದ ಅರ್ಜುನ ಅಂಬಾರಿ ಹೊತ್ತು ವಿಶ್ವ ವಿಖ್ಯಾತನಾಗಿದ್ದ. ಆದರೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆದ ಅನಾಹುತ ಅರ್ಜುನನ್ನ ರಣ ರಂಗದಲ್ಲೇ ಮಡಿಯುವಂತೆ ಮಾಡಿತ್ತು. ವೀರ ಅರ್ಜುನನ ಸಾವಿಗೆ ಕರುನಾಡೆ ಕಂಬನಿ ಮಿಡಿದಿತ್ತು. ಅರ್ಜುನ ಹೆಸರಿನಲ್ಲಿ‌ಸ್ಮಾರಕ ನಿರ್ಮಾಣ ಆಗಬೇಕು ಎಂದು ಕೋಟಿ ಕೋಟಿ ಜನರ ಕೂಗಿಗೆ ಸ್ಪಂದಿಸಿದ್ದ ಸರ್ಕಾರ ಅರ್ಜುನ ಮಡಿದ ಸ್ಥಳ ಹಾಗೂ ಅರ್ಜುನ ನೆಲೆಸಿದ್ದ ಶಿಬಿರ ಎರಡು ಕಡೆ ಸ್ಮಾರಕ ನಿರ್ಮಾಣದ ಭರವಸೆ ನೀಡಿತ್ತು. ಆದರೆ ಅರ್ಜುನ ಸತ್ತು ಒಂದು ವರ್ಷವಾದ್ರೂ ಇಲ್ಲಿಯವರೆಗೆ ಅರ್ಜುನನ ಪುತ್ಥಳಿ ಕಾರ್ಯ ಪೂರ್ಣ ಗೊಂಡಿಲ್ಲ. ಸ್ಮಾಕರದ ಕಾಮಗಾರಿ ಅಂತಿಮಗೊಂಡಿಲ್ಲ ಎನ್ನುವುದು ಅರ್ಜುನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ಅರ್ಜುನ

ಅಂಬಾರಿ ಹೊತ್ತೇ ಖ್ಯಾತಿಗೆ ಪಾತ್ರವಾಗಿದ್ದ ಅರ್ಜುನನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಬರೋಬ್ಬರಿ ಒಂಭತ್ತು ಭಾರಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಕೊಂಚವೂ ತೊಂದರೆಯಾಗದಂತೆ ನಡೆದುಕೊಂಡು ಸಂಪನ್ನಗೊಳಿಸಿದ್ದ ಅರ್ಜುನ ಕಳೆದ ವರ್ಷ ಇದೇ ದಿನ ಅಂದರೆ ಡಿ.4ರಂದು ಕಾಡಾನೆ ಸರೆ ಕಾರ್ಯಾಚರಣೆ ವೇಳೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಕಾಡಾನೆಯೊಂದಿಗೆ ಕಾದಾಟದಲ್ಲಿ ವೀರ ಮರಣವನ್ನಪ್ಪಿತ್ತು.

ಇದನ್ನೂ ಓದಿ: ಹಾಸನ: ಅರ್ಜುನ ಆನೆ ಸಮಾಧಿ ಮೇಲೆ ಕಾಡಾನೆಗಳ ದಾಂಧಲೆ

ಅಂದೇ ಅರ್ಜುನನ ಮೃತ ದೇಹವನ್ನ ಬಳ್ಳೆ ಆನೆ ಶಿಬಿರದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಅದು ಸಾಧ್ಯವಾಗದೇ ಇದ್ದಾಗ ಸಾವನ್ನಪ್ಪಿದ ಸ್ಥಳದಲ್ಲಾದರೂ ಅಂತ್ಯಕ್ರಿಯೆ ನಡೆಸಿ ಅದೇ ಸ್ಥಳದಲ್ಲಿ ಅರ್ಜುನನ ಪುತ್ಥಳಿ‌ ನಿರ್ಮಿಸಿ ಸ್ಮಾರಕ ಮಾಡಿ ಕ್ಯಾಪ್ಟನ್ ಅರ್ಜುನನಿಗೆ ಗೌರವ ಸಲ್ಲಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಕೂಡ ಅರ್ಜುನ ಮೃತಪಟ್ಟ ಸ್ಥಳ ಹಾಗೂ ಅರ್ಜುನ ನೆಲೆಸಿದ್ದ ಬಳ್ಳೆ ಕ್ಯಾಂಪ್ ಎರಡೂ ಕಡೆ ಅರ್ಜುನನ ಪುತ್ಥಳಿ ಹಾಗೂ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅರ್ಜುನ ಮಡಿದು ವರ್ಷ ಉರುಳಿದ್ದು, ಇನ್ನೂ ಅರ್ಜುನನ ಅಭಿಮಾನಿಗಳ ಕೋರಿಕೆ ನೆರವೇರಿಲ್ಲ.

ಅರ್ಜುನನ ಸಮಾಧಿ ಸ್ಥಳದಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿರೋದು ಒಂದೆಡೆಯಾದ್ರೆ, ಅರ್ಜುನ ಪುತ್ಥಳಿ ನಿರ್ಮಾಣ ಕಾರ್ಯ ಕೂಡ ಮುಗಿದಿಲ್ಲ. ಇಂದೇ ಅರ್ಜುನನ ಪುತ್ಥಳಿ ನಿರ್ಮಾಣ ಕಾರ್ಯ ನಿಗದಿಗೊಳಿಸಿಕೊಂಡಿದ್ದ ಅರಣ್ಯ ಇಲಾಖೆ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿದ್ದು, ಶೀಘ್ರವಾಗಿ ಕಾಮಗಾರಿ ಮುಗಿಸಲಿ ಎಂದು ಅರ್ಜುನನ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ವರ್ಷವಾದರೂ ಪುತ್ಥಳಿ ನಿರ್ಮಾಣವಾಗಿಲ್ಲ

ಅರ್ಜುನನ ಪುತ್ಥಳಿಗಳ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿ ಆದಷ್ಟು ಬೇಗ ಪುತ್ಥಳಿ ನಿರ್ಮಾಣ ಮಾಡೋದಾಗಿ ಭರವಸೆ ನೀಡಿಹೋಗಿ ತಿಂಗಳುಗಳೇ ಕಳೆದಿದೆ. ಆದರೆ ಅರ್ಜುನ ಸಾವನ್ನಪ್ಪಿ ಇಲ್ಲಿಗೆ ಒಂದು ವರ್ಷವಾದರೂ ಪುತ್ಥಳಿ ನಿರ್ಮಾಣವಾಗಿಲ್ಲ. ಅರ್ಜುನ ಸಾವನ್ನಪ್ಪಿದ ಸ್ಥಳದಲ್ಲಿ‌ ಪುತ್ಥಳಿ ಪ್ರತಿಷ್ಠಾಪನೆಗೆ ಕಟ್ಟಡ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ. ಅಲ್ಲದೇ ಅರ್ಜುನನ ಪುತ್ಥಳಿಗಳನ್ನು ಬಳ್ಳೆ ಆನೆ ಶಿಬಿರದಲ್ಲಿ ಶಿಲ್ಪಿಗಳು ಅರ್ಜುನ ಪುತ್ಥಳಿ ನಿರ್ಮಾಣ ಮಾಡುತ್ತಿದ್ದಾರೆ.

ಈ ನಡುವೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಸ್ಮರಣೆ ಕಾರ್ಯಮಾಡಿದ್ದಾರೆ, ಆದರೆ ಸರ್ಕಾರ ಒಂದು ಸ್ಮಾರಕ ನಿರ್ಮಾಣಕ್ಕೆ ಇಷ್ಟು ಸಮಯ ಬೇಕಾ ಎನ್ನೋ ಪ್ರಶ್ನೆ ಅಭಿಮಾನಿಗಳದ್ದು.

ಇದನ್ನೂ ಓದಿ: ಹಾಸನ: ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಗೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭ

ಅಂಬಾರಿ ಹೊತ್ತು ವಿಶ್ವ ವಿಖ್ಯಾತಿಗಳಿಸಿದ್ದ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ತನ್ನ ಶೌರ್ಯ ತೋರಿ ದೇಶದಲ್ಲೇ ಮೆಚ್ಚುಗೆ ಗಳಿಸಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆಯೇ ವೀರಮರಣಹೊಂದಿದ್ದ ಅರ್ಜುನನ ಸ್ಮಾರಕ ನಿರ್ಮಾಣ ಬೇಗನೆ ಆಗಲಿ ಅರ್ಜುನನ ಶೌರ್ಯ ಎಲ್ಲೆಡೆ ಬೆಳಗಲಿ ಎನ್ನೋದು ಅಭಿಮಾನಿಗಳ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:00 pm, Wed, 4 December 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ