ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಅಂತ್ಯ: ಕೋಟಿ-ಕೋಟಿ ಆದಾಯ ಸಂಗ್ರಹ

| Updated By: ರಮೇಶ್ ಬಿ. ಜವಳಗೇರಾ

Updated on: Oct 28, 2022 | 10:43 PM

ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದ್ದು, ಒಟ್ಟು 15 ದಿನಗಳು ನಡೆದಿದ್ದ ಹಾಸನಾಂಬೆ ದರ್ಶನೋತ್ಸವದಲ್ಲಿ ಈ ವರ್ಷವೂ ಸಹ ಕೋಟಿ-ಕೊಟಿ ರೂಪಾಯಿ ಆದಾಯ ಹರಿದುಬಂದಿದೆ.

ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಅಂತ್ಯ: ಕೋಟಿ-ಕೋಟಿ ಆದಾಯ ಸಂಗ್ರಹ
Hasanamba
Follow us on

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಭೆ ಉತ್ಸವ ಈ ಬಾರಿ ಅದ್ಧೂರಿಯಾಗಿ ಸಂಪನ್ನಗೊಂಡಿದ್ದು, ಈ ವರ್ಷ ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವ ಸಂದರ್ಭದಲ್ಲಿ ಕೋಟಿ ಕೊಟಿ ಆದಾಯ ಹರಿದುಬಂದಿದೆ.  ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷದ 51 ಸಾವಿರದ 251 ರೂ ಆದಾಯ ಸಂಗ್ರಹವಾಗಿದೆ.

ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವದಲ್ಲಿ ಆರು ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದುಕೊಂಡಿದ್ದು, ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂ. ಸಂಗ್ರಹವಾಗಿದ್ರೆ, ವಿಶೇಷ ದರ್ಶನದ ಪಾಸ್ ಮಾರಾಟದಿಂದ 1 ಕೋಟಿ 48 ಲಕ್ಷದ,27 ಸಾವಿರದ 600 ರೂ ಸಂಗ್ರಹವಾಗಿದೆ. ಇನ್ನು ಲಡ್ಡು ಪ್ರಸಾದ ಮಾರಾಟ ದಿಂದ 32 ಲಕ್ಷದ 82 ಸಾವಿರದ 716 ರೂ ಆದಾಯ ಬಂದಿದೆ. ಎಲ್ಲಾ ಮೂಲಗಳೂ ಸೇರಿ ಒಟ್ಟು 3,69,51,251 ರೂ ಸಂಗ್ರಹವಾದಂತಾಗಿದೆ.

ಹಾಸನಾಂಭೆ ಉತ್ಸವ ಸಂಪನ್ನ: ಪುನೀತ್ ರಾಜಕುಮಾರ್ ಪುತ್ಥಳಿ ಜೊತೆ ಬಂದು ದೇವಿಯ ದರ್ಶನ ಮಾಡಿದ ಅಪ್ಪು ಅಭಿಮಾನಿಗಳು!

ಈ ಮೂಲಕ ಹಾಸನಾಂಬೆ ದರ್ನದ ವೇಳೆ ಸಂಗ್ರಹದಲ್ಲಿ ಎರಡನೇ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಕೋವಿಡ್ ಸಂದರ್ಭ ದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದೆ ಆದಾಯ ಕುಸಿದಿತ್ತು. ಈ ಬಾರಿ ಮತ್ತೆ ಕೋಟಿ ಕೋಟಿ ಆದಾಯ ಸಂಗ್ರಹವಾಗಿದೆ.

ಇಂದು(ಅ.28) ಬೆಳಗ್ಗೆ 9 ಗಂಟೆಯಿಂದ ನಡೆದ ಹುಂಡಿ ಎಣಿಕೆ ಪ್ರಕ್ರಿಯೆ ಶುರುವಾಗಿ ರಾತ್ರಿ 9 ಗಂಟೆಗೆ ಅಂತ್ಯವಾಗಿದೆ. ಉಪ ವಿಭಾಗಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಮುಜರಾಯಿ ಇಲಾಖೆ ಸಿಬ್ಬಂದಿ, ಸ್ಕೌಟ್ಸ್​ & ಗೈಡ್ಸ್​ ಸ್ವಯಂಸೇವಕರಿಂದ ಹುಂಡಿ ಎಣಿಕೆ ಕಾರ್ಯ ನಡೆದಿತ್ತು.

ಈ ಹಿಂದೆ 2017 ರಲ್ಲಿ ಅತಿ ಹೆಚ್ಚು 4.14 ಕೋಟಿ ಹಣ ಸಂಗ್ರಹವಾಗಿತ್ತು. 2017ರ ಹೊರತುಪಡಿಸಿ ಈ ವರ್ಷ ಅತಿ ಹೆಚ್ಚು ಆದಾಯ ಹರಿದುಬಂದಿದೆ.

ತಡ ರಾತ್ರಿ ಅದ್ಧೂರಿಯಾಗಿ ನಡೆದ ಹಾಸನಾಂಬೆ, ಸಿದ್ದೇಶ್ವರ ಜಾತ್ರಾ ಮಹೋತ್ಸವ: ಮಧ್ಯಾಹ್ನ 12ಗೆ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಬಂದ್