Hassan: ತಿರುಪತಿ ಮಾದರಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಚಿಂತನೆ: ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿಕೆ

Hassan: ತಿರುಪತಿ ಮಾದರಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಚಿಂತನೆ ನಡೆಸಲಾಗಿದೆ. ಅಂದರೆ, ಅದರ ಅನ್ವಯ ವೈಟಿಂಗ್ ರೂಂ ಮಾಡಿ ತಂಡ ತಂಡವಾಗಿ ಭಕ್ತರನ್ನು ಬಿಡಲು ತಯಾರಿ ನಡೆಸಲಾಗಿದೆ. ಕೊವಿಡ್ ಕಾರಣದಿಂದ ಸಾಮಾಜಿಕ ಅಂತರ ಕಾಪಾಡಲು ತಿರುಪತಿ ಮಾದರಿ ಅನುಸರಿಸಲು ಚಿಂತನೆ ನಡೆಸಲಾಗಿದೆ.

Hassan: ತಿರುಪತಿ ಮಾದರಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಚಿಂತನೆ: ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿಕೆ
ಹಾಸನಾಂಬೆ ದೇವಾಲಯ (ಸಂಗ್ರಹ ಚಿತ್ರ)
TV9kannada Web Team

| Edited By: ganapathi bhat

Sep 28, 2021 | 8:13 PM

ಹಾಸನ: ತಿರುಪತಿ ಮಾದರಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹಾಸನದಲ್ಲಿ ಜಿಲ್ಲಾಧಿಕಾರಿ ಆರ್.‌ ಗಿರೀಶ್ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 28 ರಂದು ಹಾಸನಾಂಬೆ ಜಾತ್ರಾ ಮಹೋತ್ಸವ ಆರಂಭ ಆಗಲಿರುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಬಗ್ಗೆ ಮಾಹಿತಿ ಲಭಿಸಿದೆ. ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಉಸ್ತುವಾರಿ ಸಚಿವರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಕೊವಿಡ್ ಕಡಿಮೆ ಇದ್ದರೆ ಹಿಂದಿನ‌ ವರ್ಷಗಳಂತೆ ಉತ್ಸವ ನಡೆಯಲಿದೆ ಎಂದು ಹಾಸನದಲ್ಲಿ ಜಿಲ್ಲಾಧಿಕಾರಿ ಆರ್.‌ಗಿರೀಶ್ ಹೇಳಿಕೆ ನೀಡಿದ್ದಾರೆ.

ತಿರುಪತಿ ಮಾದರಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಚಿಂತನೆ ನಡೆಸಲಾಗಿದೆ. ಅಂದರೆ, ಅದರ ಅನ್ವಯ ವೈಟಿಂಗ್ ರೂಂ ಮಾಡಿ ತಂಡ ತಂಡವಾಗಿ ಭಕ್ತರನ್ನು ಬಿಡಲು ತಯಾರಿ ನಡೆಸಲಾಗಿದೆ. ಕೊವಿಡ್ ಕಾರಣದಿಂದ ಸಾಮಾಜಿಕ ಅಂತರ ಕಾಪಾಡಲು ತಿರುಪತಿ ಮಾದರಿ ಅನುಸರಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸಂಬಂಧಪಟ್ಟ ವಿವಿಧ ಇಲಾಖೆಯ ಸಭೆಯನ್ನು ಕರೆದು ಚರ್ಚಿಸಲಾಗಿದೆ. ಏನೇನು ಕೆಲಸವಾಗಬೇಕು ಹಾಗೂ ಕೆಲಸ ಟೆಂಡರ್ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಕೊವಿಡ್ ಕಡಿಮೆ ಇದ್ದರೆ ಹಿಂದಿನ‌ ವರ್ಷಗಳಂತೆ ಹಾಸನಾಂಬೆ ಉತ್ಸವ ನಡೆಯಲಿದೆ. ಕೊವಿಡ್ ಸ್ವರೂಪವನ್ನು ನೋಡಿ ಸಿದ್ದತೆಗಳನ್ನ ನಡೆಸಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಕಡಿಮೆಯಾದ್ರೆ ಪ್ರತೀ ವರ್ಷದಂತೆ ಆಚರಣೆಯಾಗುತ್ತದೆ . ಕೊವಿಡ್ ಕಾರಣದಿಂದ ಬೇರೆ ಬೇರೆ ಮಾದರಿಯಲ್ಲಿ ದರ್ಶನಕ್ಕೆ ಚಿಂತಿಸಲಾಗುತ್ತದೆ. ಸದ್ಯ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ. ಎಂದಿನಂತೆ ಜಾತ್ರೆ ಆಚರಿಸುವ ಆಶಾಭಾವನೆ ನಮ್ಮಲ್ಲಿದೆ ಎಂದು ಡಿಸಿ ಆರ್. ಗಿರೀಶ್ ಹೇಳಿದ್ದಾರೆ.

ಇದನ್ನೂ ಓದಿ: Bengaluru: ಒಂದೇ ಕಾಲೇಜಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಇದನ್ನೂ ಓದಿ: ಕೊರೊನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಮ್ಮೆ ಸಾಧನೆ; ಸೋಮವಾರವೂ 1 ಕೋಟಿ ಡೋಸ್ ಲಸಿಕೆ ನೀಡಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada