ಹಾಸನ: ಮದುವೆಗೆ ಒಪ್ಪದ ಹಿನ್ನೆಲೆ ಶಾಲಾ ಶಿಕ್ಷಕಿಯ ಅಪಹರಣ ಪ್ರಕರಣ; ಕಿಡ್ನಾಪರ್ಸ್‌ ಅರೆಸ್ಟ್​

ಇಂದು(ನ.30) ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ  ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳ ಬೆನ್ನುಬಿದ್ದ ಪೊಲೀಸರು, ಇದೀಗ ಕಿಡ್ನಾಪರ್ಸ್​ಗಳನ್ನು ಬಂಧಿಸಿ, ಶಿಕ್ಷಕಿಯನ್ನು ರಕ್ಷಿಸಿ ಹಾಸನಕ್ಕೆ ಕರೆ ತರುತ್ತಿದ್ದಾರೆ.

ಹಾಸನ: ಮದುವೆಗೆ ಒಪ್ಪದ ಹಿನ್ನೆಲೆ ಶಾಲಾ ಶಿಕ್ಷಕಿಯ ಅಪಹರಣ ಪ್ರಕರಣ; ಕಿಡ್ನಾಪರ್ಸ್‌ ಅರೆಸ್ಟ್​
ಆರೋಪಿ ರಾಮು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2023 | 7:07 PM

ಹಾಸನ, ನ.30: ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ (Teacher) ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡ್ನಾಪರ್ಸ್‌(Kidnapers)ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದಕ್ಷಿಣ ಕನ್ನಡ(Dakshina Kannada) ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು, ಶಿಕ್ಷಕಿ ಅರ್ಪಿತ ಅವರನ್ನು ರಕ್ಷಿಸಿದ್ದಾರೆ. ಇದೀಗ ಪೊಲೀಸರಿಗೆ ಸಿಗದ ರೀತಿ ಪ್ಲಾನ್ ಮಾಡಿ ಸಿಕ್ಕಿಬಿದ್ದ ರಾಮು ಮತ್ತು ತಂಡದವರನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿದ್ದಾರೆ.

ಘಟನೆ ವಿವರ

ಇಂದು(ನ.30) ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ  ಘಟನೆ ನಡೆದಿತ್ತು. 15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಅರ್ಪಿತಾ ಮನೆಗೆ, ಅವರ ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ನಿಮ್ಮ ಮಗಳನ್ನು ಮದವೆ ಮಾಡಿಕೊಡಿ ಎಂದು ಕೇಳಿದ್ದರು. ಆದರೆ, ಈ ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಹಾಗೂ ಪೋಷಕರು ಒಪ್ಪಿರಲಿಲ್ಲ.

ಇದನ್ನೂ ಓದಿ:ಹಾಸನ: ಮದುವೆಗೆ ಒಪ್ಪದ ಹಿನ್ನೆಲೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ

ಮದುವೆಗೆ ಒಪ್ಪದ ಹಿನ್ನಲೆ ಕಿಡ್ನಾಫ್​

ಮದುವೆ ಒಪ್ಪದ ಹಿನ್ನೆಲೆಯಲ್ಲಿ ಅರ್ಪಿತಾ ಅವರನ್ನು ರಾಮು ಎಂಬಾತ ಅಪಹರಿಸಿರುವ ಆರೋಪ ಕೇಳಿಬಂದಿತ್ತು. ಮದುವೆಗೆ ಒಪ್ಪದಿದ್ದಕ್ಕೆ ನನ್ನ ಮಗಳನ್ನು ಅಪರಣ ಮಾಡಿದ್ದಾರೆ ಎಂದು ಅರ್ಪಿತಾ ತಾಯಿ ಆರೋಪ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಾಸನ ಎಸ್​ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿ ಪತ್ತೆಗಾಗಿ ಮೂರು ತಂಡ ರಚನೆ ಮಾಡಿ ತನಿಖೆ ನಡೆಸಿದ್ದೇವೆ ಎಂದಿದ್ದರು. ಇದೀಗ ಆರೋಪಿಗಳು ಅಂದರ್​ ಆಗಿದ್ದು, ಶಿಕ್ಷಕಿಯನ್ನು ರಕ್ಷಿಸಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ