ಚರ್ಮಗಂಟು ರೋಗ: ರದ್ದುಗೊಂಡ ಹಾಸನದ ಐತಿಹಾಸಿಕ ಬೂಕನಬೆಟ್ಟದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ

| Updated By: Rakesh Nayak Manchi

Updated on: Jan 08, 2023 | 12:51 PM

ರಾಜ್ಯಾದ್ಯಂತ ಚರ್ಮಗಂಟು ರೋಗ ಹರಡುತ್ತಿದೆ. ಇದೀಗ ಹಾಸನದಲ್ಲೂ ಕಂಡುಬರುತ್ತಿರವ ಹಿನ್ನೆಲೆ ಐತಿಹಾಸಿಕ ಬೂಕನಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ.

ಚರ್ಮಗಂಟು ರೋಗ: ರದ್ದುಗೊಂಡ ಹಾಸನದ ಐತಿಹಾಸಿಕ ಬೂಕನಬೆಟ್ಟದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ
ಚರ್ಮಗಂಟು ರೋಗ ಹಿನ್ನಲೆ ಹಾಸನದ ಐತಿಹಾಸಿಕ ಬೂಕನಬೆಟ್ಟ ರಂಗನಾಥಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ರದ್ದು
Follow us on

ಹಾಸನ: ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy Skin Disease) ಕಾಣಿಸಿಕೊಂಡ ಹಿನ್ನಲೆ ಐತಿಹಾಸಿಕ ಬೂಕನಬೆಟ್ಟ (Bukanabetta)ದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ (Ranganatha swamy Cattle Jatra Mahotsava) ರದ್ದುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಆದೇಶ ಹೊರಡಿಸಿದ್ದಾರೆ. ಜನವರಿ 6 ರಿಂದ ಜನವರಿ 22 ರವರೆಗೆ ಜಿಲ್ಲೆಯಾದ್ಯಂತ ರಾಸುಗಳ ಜಾತ್ರೆ, ಸಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಬೂಕನಬೆಟ್ಟದ ಪ್ರವೇಶ ದ್ವಾರದಲ್ಲಿ ಜಾನುವಾರುಗಳ ಜಾತ್ರೆ ರದ್ದು ಎಂದು ಮುಜರಾಯಿ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕಳೆದ ವಾರ ರೈತರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮೂರು ದಿನಗಳ ಕಾಲ ರಾಸುಗಳ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ದಿಢೀರ್ ಜಾತ್ರೆ ನಿಷೇಧ ಮಾಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂರು ದಿನಗಳ ಕಾಲ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: Siddeshwara Swamiji: ಕೃಷ್ಣ, ಮಲಪ್ರಭಾ ಹಾಗೂ ಘಟಪ್ರಭಾ ಮಡಿಲಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲೀನ

ಈಗಾಗಲೇ ರೈತರು ಜಾನುವಾರುಗಳನ್ನು ಕಟ್ಟಲು ಸಿದ್ದತೆ ಮಾಡಿಕೊಂಡಿದ್ದು, ಅನೇಕ ಮಾಲೀಕರು ಸಿಹಿ ತಿಂಡಿ, ಕೃಷಿ ಉಪಕರಣದ ಅಂಗಡಿಗಳು, ಹೋಟೆಲ್‌ಗಳನ್ನು ತೆರೆದಿದ್ದಾರೆ. ಮಾತ್ರವಲ್ಲದೆ ತಾಲ್ಲೂಕು ಆಡಳಿತವು ಬೂಕನಬೆಟ್ಟಕ್ಕೆ ಬರುವ ಎರಡು ಕಡೆಗಳಲ್ಲೂ ಫ್ಲೆಕ್ಸ್ ಅಳವಡಿಸಿ ಪೊಲೀಸರನ್ನು ನಿಯೋಜಿಸಿದೆ.

ಸುಮಾರು 20 ಸಾವಿರ ರಾಸುಗಳು ಸೇರುವ ಬೃಹತ್ ಜಾತ್ರೆಯಿಂದ ರಾಸುಗಳನ್ನು ಖರೀದಿಸಲು ಹೊರ ಜಿಲ್ಲೆಗಳಿಂದ ನೂರಾರು ಮಂದಿ ಆಗಮಿಸುತ್ತಾರೆ. ಸದ್ಯ ಜಾನುವಾರುಗಳಲ್ಲಿ ಹರಡುವ ಚರ್ಮಗಂಟು ರೋಗ ಹಿನ್ನಲೆ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ. ಆದರೆ ಜಾತ್ರೆಗೆ ಅವಕಾಶ ನೀಡುವಂತೆ ಜನರು ಪಟ್ಟು ಹಿಡಿಯುತ್ತಿದ್ದಾರೆ. ಜಾನುವಾರುಗಳಿಗೆ ರೋಗ ಬಂದರೆ ನಮಗೆ ಸರ್ಕಾರದ ಪರಿಹಾರ ಬೇಡ. ಮೂರು ದಿನ ಜಾತ್ರೆ ನಡೆಸಲು ಅವಕಾಶ ನೀಡುವಂತೆ ಸ್ಥಳೀಯರು ಹಾಗೂ ರೈತರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ಟ್ರೆಂಡ್ ಸೃಷ್ಠಿಸಿದ ಮಂಡ್ಯದ ಮನ್ಮೂಲ್: ಮಂಡ್ಯದ ಬೆಲ್ಲದ ಬರ್ಫಿಗೆ ಭಾರಿ ಡಿಮ್ಯಾಂಡ್ ಮಾರಾಯ್ರೆ

ನಾಳೆಯಿಂದ ನಡೆಯಬೇಕಿದ್ದ 92ನೇ ಬೂಕನಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ಚರ್ಮಗಂಟು ರೋಗ ಹಿನ್ನಲೆ ನಿಷೇಧಗೊಂಡಿದ್ದು, ಇದರಿಂದಾಗಿ ರೈತರು, ಅಂಗಡಿ ಮಾಲೀಕರು ಕಂಗಾಲಾಗಿರುವುದಂತು ಸತ್ಯ. ರೈತರು ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದು, ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 am, Sun, 8 January 23