ಹಾಸನ ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ರೇವಣ್ಣ ಭರ್ಜರಿ ಗಿಫ್ಟ್: ಪ್ರತೀ ಲೀಟರ್ ಗೆ 1.25 ರೂ ದರ ಹೆಚ್ಚಳ

ರೈತರಿಗೆ ಲೀಟರ್ ಗೆ ಒಂದುಕಾಲು ರೂಪಾಯಿ ಖರೀದಿ ದರ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ ರೇವಣ್ಣ ಸೆಪ್ಟೆಂಬರ್ 1ರಿಂದಲೇ ಈ ಹಚ್ಚುವರಿ ದರ ರೈತರಿಗೆ ಸಿಗಲಿದೆ ಎಂದು ಹೇಳೋ ಮೂಲಕ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ರೈತರಿಗೆ ಗೌರಿ ಹಬ್ಬದ ಗಿಫ್ಟ್ ನೀಡಿದ್ರು.

ಹಾಸನ ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ರೇವಣ್ಣ ಭರ್ಜರಿ ಗಿಫ್ಟ್: ಪ್ರತೀ ಲೀಟರ್ ಗೆ 1.25 ರೂ ದರ ಹೆಚ್ಚಳ
ಸಾಮಾನ್ಯ ಸಭೆ ವೇದಿಕೆಯಲ್ಲಿ ಹೆಚ್​ಡಿ ರೇವಣ್ಣ
Follow us
TV9 Web
| Updated By: ಆಯೇಷಾ ಬಾನು

Updated on: Aug 25, 2022 | 5:52 PM

ಹಾಸನ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಕೊರೊನಾ ಆತಂಕದ ನಡುವೆ ಎರಡು ವರ್ಷಗಳು ಮಂಕಾಗಿದ್ದ ಸಾರ್ವಜನಿಕ ಗಣೇಶೋತ್ಸವ ಈ ವರ್ಷ ಭರ್ಜರಿ ರಂಗು ಪಡೆದುಕೊಳ್ಳುತ್ತಿದೆ. ಈ ವೇಳೆ ಹಾಸನ ಹಾಲು ಒಕ್ಕೂಟ ತನ್ನ ಸದಸ್ಯರಿಗೆ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ. ಒಕ್ಕೂಟದ ಅಧ್ಯಕ್ಷರಾದ ಮಾಜಿ ಸಚಿವ ಹೆಚ್ಡಿ ರೇವಣ್ಣ(HD Revanna) ಇಂದು ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಹಾಲು ಉತ್ಪಾದಕರಿಗೆ ಬಂಪರ್ ಉಡುಗೊರೆ ಘೋಷಣೆ ಮಾಡಿದ್ರು.

ರೈತರಿಗೆ ಲೀಟರ್ ಗೆ ಒಂದುಕಾಲು ರೂಪಾಯಿ ಖರೀದಿ ದರ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ ರೇವಣ್ಣ ಸೆಪ್ಟೆಂಬರ್ 1ರಿಂದಲೇ ಈ ಹಚ್ಚುವರಿ ದರ ರೈತರಿಗೆ ಸಿಗಲಿದೆ ಎಂದು ಹೇಳೋ ಮೂಲಕ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ರೈತರಿಗೆ ಗೌರಿ ಹಬ್ಬದ ಗಿಫ್ಟ್ ನೀಡಿದ್ರು. ಹಾಸನ ಹಾಲು ಒಕ್ಕೂಟ 2021-2022 ರ ಸಾಲಿನಲ್ಲಿ ಬರೋಬ್ಬರಿ 1700 ಕೋಟಿ ವ್ಯವಹಾರ ನಡೆಸಿದ್ದು, 22.77 ಕೋಟಿ ಲಾಭ ಗಳಿಸಿದೆ. ಹೆಚ್ಚುವರಿ ಲಾಭವನ್ನು ರೈತರಿಗೆ ನೀಡೋ ಸಲುವಾಗಿ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದ್ದು ರಾಜ್ಯದ 15 ಹಾಲು ಒಕ್ಕೂಟಗಳಲ್ಲಿಯೇ ಹಾಸನ ಹಾಲು ಒಕ್ಕೂಟ ರೈತರಿಗೆ ಹೆಚ್ಚಿನ ದರ ನೀಡಿ ಹಾಲು ಖರೀದಿಸೋ ಸಂಸ್ಥೆ ಎಂಬ ತನ್ನ ಹೆಗ್ಗಳೆಯನ್ನು ಮತ್ತೆ ಉಳಿಸಿಕೊಂಡಿದೆ.

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾಗಿರೋ ಹೆಚ್.ಡಿ.ರೇವಣ್ಣ 10 ಕೋಟಿ ವ್ಯವಹಾರ ನಡೆಸುತ್ತಿದ್ದ ಹಾಸನ ಹಾಲು ಒಕ್ಕೂಟ ಇದೀಗ 1700 ಕೋಟಿ ವ್ಯವಹಾರ ನಡೆಸೋ ಹಂತಕ್ಕೆ ಅವರ ಅವಧಿಯಲ್ಲಿ ಬೆಳೆಯುವಂತೆ ಮಾಡಿದ್ದಾರೆ. ಹಾಸನ ಹಾಲು ಒಕ್ಕೂಟದ ಅಡಿಯಲ್ಲಿ 2000ಕ್ಕೂ ಅಧಿಕ ಸಂಘಗಳು ನೊಂದಾಯಿಸಿಕೊಂಡಿದ್ದು, ನೂರಾರು ಸಂಖ್ಯೆಯ ಮಹಿಳಾ ಸಂಘಗಳು ಕೂಡ ಹಾಸನ ಹಾಲು ಒಕ್ಕೂಟದ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತ ಆದಾಯ ಗಳಿಸುತ್ತಿವೆ. ಈ ವರ್ಷ ವಿಶೇಷವಾಗಿ 28.75 ರೂನಂತೆ ಲೀಟರ್ ಗೆ ಖರೀದಿ ಹಣ ಕೊಡುತ್ತಿದ್ದ ಒಕ್ಕೂಟ ಇದನ್ನು 1.25 ರೂ ಏರಿಕೆ ಮಾಡಿ ಲೀಟರ್ ಗೆ 30 ರೂನಂತೆ ಖರೀದಿಮಾಡಲು ನಿರ್ಧಾರ ಮಾಡಿರೋದು ಲಕ್ಷಾಂತರ ರೈತರ ಮೊಗದಲ್ಲಿ ಖುಷಿ ಹೆಚ್ಚಿಸಿದೆ. ಜೊತೆಗೆ ಹಬ್ಬದ ವೇಳೆಯಲ್ಲಿ ಒಕ್ಕೂಟ ರೈತರಿಗೆ ಕೊಡುಗೆ ಘೋಷಣೆ ಮಾಡಿರೋದು ಕೂಡ ಹಬ್ಬದ ಸಂಭ್ರಮ ಹೆಚ್ಚಿಸಿದೆ. 500 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಪ್ರಸ್ತುತ ಹಾಸನದ ಬಿಎಂ ರಸ್ತೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರೋ ಹಾಸನ ಹಾಲು ಒಕ್ಕೂಟ ನಿತ್ಯವೂ 13 ಲಕ್ಷ ಹಾಲನ್ನು ಸಂಗ್ರಹ ಮಾಡುತ್ತಾ ರಾಜ್ಯವಲ್ಲದೆ ಹೊರ ರಾಜ್ಯಗದಲ್ಲಿಯೂ ತನ್ನ ಮಾರುಕಟ್ಟೆ ಹೊಂದಿದೆ. ಪ್ರತೀ ವರ್ಷ ಕೂಡ ಹೆಚ್ಚಿನ ಲಾಭ ಗಳಿಸುತ್ತಾ ಮೇಲಕ್ಕೇರುತ್ತಿದೆ, 2022 -23ನೇ ಸಾಲಿನಲ್ಲಿ 2000 ಕೋಟಿ ವಹಿವಾಟು ನಡೆಸೋ ಗುರಿ ಹೊಂದಿರೋ ಒಕ್ಕೂಟ ಎರಡು ವರ್ಷಗಳ ಹಿಂದೆಯೇ ಬೃಹತ್ ಯೋಜನೆಯನ್ನು ಹಾಕಿಕೊಂಡಿದ್ದು 2024ರ ವೇಳೆಗೆ ಹಾಸನದಲ್ಲಿ ನಿತ್ಯವೂ 16 ಲಕ್ಷ ಲೀಟರ್ ಹಾಲು ಬಳಕೆ ಮಾಡೋ ಸಾಮರ್ಥ್ಯದ ಮೆಗಾ ಡೇರಿ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ, ಹಾಸನ ನಗರ ಹೊರವಲಯದ ಕೌಶಿಕ ಗ್ರಾಮದ ಬಳಿಕ ಕೈಗಾರಿಕಾ ಪ್ರದೇಶದಲ್ಲಿ 540 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಕಾರ್ಯನಡೆಯುತ್ತಿದೆ. ಈಗಾಗಲೇ ಕಟ್ಟಡಗಳ ನಿರ್ಮಾಣ ಕಾರ್ಯ ಸಾಕಷ್ಟು ಪ್ರಗತಿಯಾಗಿದ್ದು 2024ರ ವೇಳೆಗೆ ಈ ಡೈರಿ ಕೂಡ ಕಾರ್ಯಾರಂಭ ಮಾಡೋ ಸಾದ್ಯತೆ ಹೆಚ್ಚಾಗಿದೆ.

ಸುವಾಸಿತ ಹಾಲಿನ ಘಟಕ, ಐಸ್ ಕ್ರೀಂ ಘಟಕಗಳಿಂದ ಹೆಚ್ಚಿನ ಲಾಭ

ಹಾಸನ ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯವೂ ಕೂಡ 13 ಲಕ್ಷ ಹಾಲು ಸಂಗ್ರಹವಾಗುತ್ತಿದ್ದು ಮಾರುಕಟ್ಟೆಗೆ ಮಾರಾಟಮಾಡಿ ಉಳಿಯೋ ಹೆಚ್ಚುವರಿ ಹಾಲನ್ನು ಮೌಲ್ಯವರ್ದಿತ ಉತ್ಪನ್ನಗಳ ತಯಾರಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ, ದಕ್ಷಿಣ ಭಾತರದಲ್ಲಿಯೋ ಅತ್ಯಾಧುನಿಕ ಸುವಾಸಿತ ಹಾಲು ಉತ್ಪಾಧನ ಘಟಕ ನಿರ್ಮಾಣವಾಗಿ ಕಳೆದ ಫೆಬ್ರವರಿಯಿಂದ ಕಾರ್ಯಾರಂಭ ಮಾಡಿದೆ. ಹತ್ತಾರು ಬಗೆಯ ಫ್ಲೇವರ್ ಗಳ ಸುವಾಸಿತ ಹಾಲು ರಾಜ್ಯವಲ್ಲದೆ ದೇಶದ ಹಲವು ಕಡೆ ತನ್ನ ಮಾರುಕಟ್ಟೆ ಹೊಂದಿ ಹೆಚ್ಚಿನ ಲಾಭ ಗಳಿಸುತ್ತಿದೆ. ಇನ್ನೂ ಹಾಸನ ಹಾಲು ಒಕ್ಕೂಟದಲ್ಲಿಯೇ ಐಸ್ ಕ್ರೀಂ ಉತ್ಪಾದನ ಘಟಕ ಕೂಡ ಕಾರ್ಯನಿರ್ವಹಣೆ ಮಾಡುತ್ತಿದ್ದು ಸಾಕಷ್ಟು ಮಾರುಕಟ್ಟೆ ಹೊಂದಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗಿದೆ.

ಹೈದರಾಬಾದ್ ಗೂ ವಿಸ್ತರಣೆ ಮಾಡಿದ ಹಾಸನ ಹಾಲು ಒಕ್ಕೂಟ

ಹಾಸನ ಹಾಲು ಒಕ್ಕೂಟ ಕೇವಲ ಹಾಸನ ಕೊಡಗು ಹಾಗು ರಾಜ್ಯವಲ್ಲದೆ ಹೈದರಾಬಾದ್ ನಲ್ಲಿ ತನ್ನ ದೊಡ್ಡ ಮಾರುಕಟ್ಟೆ ಹೊಂದಿದೆ. ನಿತ್ಯವೂ ಹೈದರಾಬಾದ್ ವ್ಯಾಪ್ತಿಯಲ್ಲಿ 1.40 ಲಕ್ಷಲೀಟರ್ ಹಾಲು ಮಾರಾಟವಾಗುತ್ತಿದ್ದು ಇದರಿಂದಲೇ ಕಳೆದ ಸಾಲಿನಲ್ಲಿ 14 ಕೋಟಿಯಷ್ಟು ಲಾಭ ಒಕ್ಕೂಟಕ್ಕೆ ಸಿಕ್ಕಿದೆ. ಹಾಗಾಗಿಯೇ ಒಕ್ಕೂಟದ ವತಿಯಿಂದ ಹೈದರಾಬಾದ್ ಸಮೀಪವೇ 3 ಲಕ್ಷ ಲೀಟರ್ ಸಾಮರ್ಥ್ಯದ ನೂತನ ಡೈರಿ ಸ್ಥಾಪನೆ ಯೋಜನೆ ಕೂಡ ಸಿದ್ದಗೊಂಡಿದ್ದು ರಾಜ್ಯದಲ್ಲಿಯೇ ದೊಡ್ಡ ವಹಿವಾಟು ಹೊಂದಿರೋ ಹಾಲು ಒಕ್ಕೂಟ ಎಂಬ ಹೆಗ್ಗಳಿಕೆಗೆ ಹಾಸನ ಹಾಲು ಒಕ್ಕೂಟಕ್ಕೆ ಲಭಿಸಲಿದೆ. ಒಕ್ಕೂಟ ಪ್ರಗತಿ ಹೊಂದಿದಂತೆಲ್ಲಾ. ತನ್ನ ವ್ಯಾಪ್ತಿಯ ಸಂಘಟನೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ, ಅನುದಾನ, ಜಾನುವಾರುಗಳಿಗೆ ವಿಮೆ, ಮೇವು, ಕಟಾವು ಯಂತ್ರ ಖರೀದಿಗೆ ಸಬ್ಸಿಡಿ, ಸೇರಿದಂತೆ ರೈತರಿಗೆ ಹಲವು ಬಗೆಯ ನೆರವುಗಳು ಕೂಡ ಲಭಿಸುತ್ತಿದ್ದು ರೈತರು ಪ್ರಗತಿ ಕೂಡ ಕಾಣುತ್ತಿದ್ದಾರೆ

ವರದಿ: ಮಂಜುನಾಥ್-ಕೆ.ಬಿ, ಟಿವಿ9 ಹಾಸನ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ