ಹಾಸನ: ಹಣಕಾಸು ವಿಷಯಕ್ಕೆ ಯುವಕನ ಕಿಡ್ನಾಪ್; ನಾಲ್ಕು ದಿನದ ಬಳಿಕ ಶವವಾಗಿ ಪತ್ತೆ
ಹಣಕಾಸು ವಿಚಾರಕ್ಕೆ ಮೃತ ಯುವಕ ಲಿಖಿತ್‌ಗೌಡ(26) ಹಾಗೂ ನವೀನ್ ಎಂಬಿಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ತಾಲೂಕಿನಲ್ಲಿ ನಡೆದಿದೆ.
ಹಾಸನ: ಹಣಕಾಸು ವಿಷಯಕ್ಕೆ ಮೃತ ಯುವಕ ಲಿಖಿತ್‌ಗೌಡ(26)ನನ್ನ ನವೀನ್ ಹಾಗೂ ಸಾಗರ ಎಂಬಿಬ್ಬರು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದಲೂ ತೀವ್ರ ಶೋಧಕಾರ್ಯ ನಡೆಸಿದ್ದ ನೂರಕ್ಕೂ ಹೆಚ್ಚು ಪೊಲೀಸರಿಗೆ ಇದೀಗ ಆತನ ಶವ ನಾಲ್ಕು ದಿನದ ಬಳಿಕ ಹಾಸನ ತಾಲ್ಲೂಕಿನ ಯೋಗೀಹಳ್ಳಿ ಫಾರೆಸ್ಟ್‌ನಲ್ಲಿ ಪತ್ತೆಯಾಗಿದೆ. ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ಗೌಡ, ನವೀನ್ ಎಂಬಾತನಿಗೆ 2.5 ಲಕ್ಷ ರೂ ಸಾಲವನ್ನ ಕೊಟ್ಟಿದ್ದಾನೆ. ಕೊಟ್ಟ ಹಣ ವಾಪಾಸ್ ಕೊಡುವಂತೆ ನವೀನ್ ಬೆನ್ನುಬಿದ್ದಿದ್ದ ಲಿಖಿತ್. ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ನವೀನ್ನ ಆ್ಯಕ್ವಿವ್ ಹೋಂಡಾ ಬೈಕ್ ಸೀಜ಼್ ಮಾಡಿಕೊಂಡು ಬಂದಿದ್ದಾನೆ.
ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ನವೀನ್ ಜೊತೆ ಪುನಃ ಜಗಳ ನಡೆದಿದೆ. ಫೆ.5 ರಂದು ಸಂಜೆ 6.30 ಸುಮಾರಿನಲ್ಲಿ ಹಣ ಕೊಡುವುದಾಗಿ ಕೆಎ-41-ಎಂಎ-9231 ನಂಬರ್‌ನ ಓಮಿನಿ ಕಾರಿನಲ್ಲಿ ಕರೆದುಕೊಂಡು ಹೋಗಿರುವ ನವೀನ್ ಹಾಗೂ ಸಾಗರ್ ಲಿಖಿತ್‌ಗೌಡನನ್ನು ಕೊಲೆ ಮಾಡಿದ್ದಾರೆ. ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಡ ಬಂದೂಕಿನಿಂದ ಗುಂಡಿಕ್ಕಿ ಗೋವುಗಳ ಬರ್ಬರ ಹತ್ಯೆ
ಚಿಕ್ಕಮಗಳೂರು: ನಾಡ ಬಂದೂಕಿನಿಂದ ಗುಂಡಿಕ್ಕಿ ಮೂರು ದಿನದಲ್ಲಿ 7 ಗೋವುಗಳ ಹತ್ಯೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಉಗೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಯಲು ಗದ್ದೆಗಳಿಗೆ ತೆರಳಿದ್ದ ಹಸುಗಳನ್ನ ಉಗೇಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ನಾಡ ಬಂದೂಕಿನಿಂದ ಗುಂಡು ಹೊಡೆದು ಹತ್ಯೆ ಮಾಡಲಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದಿದೆ. ಗೋವುಗಳ ಹತ್ಯೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Wed, 8 February 23