ಬೆಂಗಳೂರು: ಮಹಿಳೆಯ ಅಸ್ತಿಪಂಜರ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಅನುಮಾನದಲ್ಲಿ ಹುಳಿಮಾವು ಪೊಲೀಸರು
2022 ರ ಜುಲೈ 13 ರಂದು ನಾಪತ್ತೆಯಾಗಿದ್ದ ಪುಷ್ಪದಾಮಿ ಎಂಬ ಮಹಿಳೆಯ ಅಸ್ತಿಪಂಜರ ಇದೀಗ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: 2022 ರ ಜುಲೈ 13 ರಂದು ಪುಷ್ಪದಾಮಿ ಎಂಬ ಮಹಿಳೆಯ ಮೇಲೆ ಹುಳಿಮಾವು ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲು ಮಾಡಲಾಗಿತ್ತು. ಆದರೆ ಇದೀಗ ಪುಷ್ಪದಾಮಿ ಎಂಬ ಮಹಿಳೆಯ ಅಸ್ತಿಪಂಜರ ಪತ್ತೆಯಾಗಿದ್ದು, ಕುಟುಂಬಸ್ಥರು ಇದನ್ನ ಕೊಲೆ ಎಂದು ಆರೋಪ ಮಾಡಿದ್ದಾರೆ. ಇದರಿಂದ ಪುಷ್ಪದಾಮಿ ಡೆತ್ ಸೀಕ್ರೇಟ್ ಭೇಧಿಸಲು ಇದೀಗ ಪೊಲೀಸರು ಬೆನ್ನತ್ತಿದ್ದಾರೆ. ಪುಷ್ಪದಾಮಿ ಕೇಸ್ ತನಿಖೆ ಮಾಡುತ್ತಿರುವ ಪೊಲೀಸರು ಹೇಳುವ ಪ್ರಕಾರ ಪುಷ್ಪದಾಮಿ ನಾಪತ್ತೆಯಾಗಿದ್ದು 13 ನೇ ತಾರೀಖು ಅಲ್ಲ, ಬದಲಾಗಿ ಆಕೆ ಜುಲೈ 8 ರಂದು ನಾಪತ್ತೆಯಾಗಿದ್ದಾಳೆ. ಆದರೆ ಐದು ದಿನಗಳ ಬಳಿಕ ಗಂಡ ಅಮರ್ ದಾಮಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಗಂಡ ಯಾಕೆ ಐದು ದಿನಗಳ ಬಳಿಕ ಬಂದು ದೂರು ಕೊಟ್ಟ ಎಂದು ಗಂಡ ಅಮರ್ ದಾಮಿಯನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದು, ಆಕೆ ಊರಿಗೆ ಹೋಗಿರಬಹುದು ಅಂತ ಸುಮ್ಮನಿದ್ದೆ ಎಂದು ಅಂತಿರೋ ಅಮರ್ ದಾಮಿಯ ಅನುಮಾನದ ಹೇಳಿಕೆಯಿಂದ ಆತನನ್ನು ವಿಚಾರಣೆ ಮಾಡುತ್ತಿದ್ದಾರೆ.
ಇನ್ನು ಅಪಾರ್ಟ್ಮೆಂಟ್ನಲ್ಲಿರೋ ಸಿಸಿ ಕ್ಯಾಮರಾ ಪರಿಶೀಲನೆಗೆ ಮುಂದಾಗಿದ್ದು, ಆದರೆ ಘಟನೆ ನಡೆದು ಆರು ತಿಂಗಳಾಗಿರೋ ಕಾರಣಕ್ಕೆ ಡೇಟಾ ಡಿಲೀಟ್ ಆಗಿದೆ. ಇದರಿಂದ ಡಿವಿಆರ್ ವಶಕ್ಕೆ ಪಡೆದು ಹಳೇ ಪೂಟೇಜ್ ರಿಟ್ರೀವ್ಗೆ ಕಳುಹಿಸಿದ್ದಾರೆ. ಆದ್ರೆ ಇದುವರೆಗೂ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಪೊಲೀಸರಿಗೆ ಸಿಕ್ಕಿಲ್ಲ. ಇನ್ನು ಪುಷ್ಪದಾಮಿ ಮೊಬೈಲ್ ಕಾಲ್ ಲೀಸ್ಟ್ ಮೋರೆ ಹೋದ ಪೊಲೀಸರು. 2022 ರ ಜುಲೈ ತಿಂಗಳಲ್ಲಿ ಪುಷ್ಪದಾಮಿ ಅವರಿಗೆ ಬಂದಿದ್ದ ಇನ್ಕಮಿಂಗ್ ಹಾಗೂ ಔಟ್ ಗೋಯಿಂಗ್ ಕಾಲ್ಗಳ ಪರಿಶೀಲನೆ ನಡೆಸಿದ್ದಾರೆ.
ನಾಪತ್ತೆಯಾದ ದಿನದ ಕಾಲ್ ಲೀಸ್ಟ್ ಪ್ರಕಾರ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ, ಸೆಕ್ಯೂರಿಟಿ ಸೇರಿ 20 ಜನರನ್ನು ಪೊಲೀಸರು ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಗಂಡನ ಕಿರುಕುಳ ಹಾಗೂ ಕಾಟಕ್ಕೆ ಬೇಸತ್ತಿದ್ದಳು ಎಂಬ ಮಾತು ಕೇಳಿಬಂದಿದೆ. ಇನ್ನು ಕೋರ್ಟ್ಗೆ ಡಿಎನ್ಎ ಪರೀಕ್ಷೆಗೆ ಅನುಮತಿ ಕೋರಿರೋ ಪೊಲೀಸರು, ಅನುಮತಿ ಸಿಕ್ಕ ತಕ್ಷಣವೇ ಕುಟುಂಬಸ್ಥರ ಡಿಎನ್ಎ ಸ್ಯಾಂಪಲ್ ಪಡೆಯಲಿದ್ದಾರೆ. ಇದರ ಜೊತೆಗೆ ಆಕೆಯ ಕುಟುಂಬದವರು ನೇಪಾಳದಲ್ಲಿದ್ದು, ಮಂಗಳವಾರ ಬರೋದಾಗಿ ಹೇಳಿದ್ದಾರಂತೆ.
ಇದನ್ನೂ ಓದಿ:ವಾಣಿ ಜಯರಾಮ್ ಅವರದ್ದು ಆಕಸ್ಮಿಕ ಸಾವಲ್ಲ, ಕೊಲೆ? ಅನುಮಾನ ಮೂಡಿಸಿದ ಗಾಯಗಳು
ಮೈಸೂರು: ಚೆಕ್ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಸಾವು
ಮೈಸೂರು: ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನರಸಿಂಹ(40) ಎನ್ನುವವರ ಮೇಲೆ ಚೆಕ್ಬೌನ್ಸ್ ಕೇಸ್ ದಾಖಲಾಗಿತ್ತು. ಬಳಿಕ ಜ.4ರಂದು ಚೆಕ್ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಆತ ಸಾವನ್ನಪ್ಪಿದ್ದಾನೆ. ಮೈಸೂರು ಸೆಂಟ್ರಲ್ ಜೈಲು ಸೇರಿದ್ದ ನರಸಿಂಹ ಅನಾರೋಗ್ಯದಿಂದ ಬಳಲುತ್ತಿದ್ದ, ಕೂಡಲೇ ಆತನನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು(ಫೆ.6) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದು, ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Mon, 6 February 23