ನಾವು ಇಲ್ಲೇ ನಿಂತಿರುತ್ತೇವೆ, ನೀವು ಮಾತ್ರ ದರ್ಶನ ಪಡೆಯಿರಿ: ಶಾಸಕ ಕುಮಾರಸ್ವಾಮಿ ವಿರುದ್ಧ ಹಾಸನಾಂಬೆ ಭಕ್ತರ ಆಕ್ರೋಶ
ಶಾಸಕ ಎಂ.ಪಿ.ಕುಮಾರಸ್ವಾಮಿ ದೇಗುಲ ಪ್ರವೇಶ ವೇಳೆ ಭಕ್ತರ ಧಿಕ್ಕಾರ ಕೂಗಿದ್ದಾರೆ. ನಾವು ನಿಂತಲ್ಲೇ ನಿಂತಿರುತ್ತೇವೆ ನೀವು ಮಾತ್ರ ದರ್ಶನ ಪಡೆಯಿರಿ ಎಂದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ನೂರಾರು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ: ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ (devotees) ಹರಿದು ಬರುತ್ತಿದೆ. ಒಂಬತ್ತನೇ ದಿನ ಕೂಡ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದು ವೀಕೆಂಡ್ ಆಗಿರೋ ಹಿನ್ನೆಲೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರೊಂದಿಗೆ ಬೆಳಿಗ್ಗೆ ಸರತಿ ಸಾಲಿನಲ್ಲಿ ದರ್ಶನ ಪಡೆಯುತ್ತಿದ್ದಾರೆ. ಸಹಸ್ರಾರು ಭಕ್ತರ ಜೊತೆಗೆ ಗಣ್ಯಾತಿ ಗಣ್ಯರಿಂದಲೂ ಹಾಸನಾಂಬೆ (Hassanambe) ದರ್ಶನ ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಅಗರ್ವಲ್, ನಟ ಅನಿರುದ್ ಸೇರಿ ಹಲವು ಸೆಲೆಬ್ರೆಟಿಗಳಿಂದಲೂ ದೇವಿ ದರ್ಶನ ಪಡೆಯಲಾಗಿದೆ. ಅದೇ ರೀತಿಯಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ದೇಗುಲ ಪ್ರವೇಶ ವೇಳೆ ಭಕ್ತರ ಧಿಕ್ಕಾರ ಕೂಗಿದ್ದಾರೆ. ನಾವು ನಿಂತಲ್ಲೇ ನಿಂತಿರುತ್ತೇವೆ ನೀವು ಮಾತ್ರ ದರ್ಶನ ಪಡೆಯಿರಿ ಎಂದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ನೂರಾರು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ದರ್ಶನಕ್ಕೆ ವಿಳಂಬವಾಗಿದ್ದು, ತಾಳ್ಮೆ ಕಳೆದುಕೊಂಡ ಭಕ್ತರು ಗಣ್ಯರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಮತ್ತೆ ಮುಖಾಮುಖಿಯಾದ ಹೆಚ್.ಡಿ.ರೇವಣ್ಣ, ಪ್ರೀತಂಗೌಡ
ಇಂದು ಮತ್ತೆ ಶಾಸಕ ಪ್ರೀತಂಗೌಡ ಹಾಗೂ ಮಾಜಿಸಚಿವ ಎಚ್.ಡಿ.ರೇವಣ್ಣ ಮುಖಾಮುಖಿಯಾಗಿದ್ದಾರೆ. ಹೈಕೋರ್ಟ್ ವಕೀಲರ ಕುಟುಂಬವನ್ನು ದೇವಿ ದರ್ಶನಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕರೆತಂದಿದ್ದರು. ಈ ವೇಳೆ ಗರ್ಭಗುಡಿ ಬಳಿ ನಿಂತಿದ್ದ ಶಾಸಕ ಪ್ರೀತಂಗೌಡ, ರೇವಣ್ಣ ಬರುತ್ತಿರುವುದನ್ನು ಕಂಡರು ಮಾತನಾಡಿಸದರು. ರೇವಣ್ಣ ಹಿಂದೆ ಬರುತ್ತಿದ್ದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ಪ್ರೀತಂಗೌಡ ಕೈಮುಗಿದರು. ವಕೀಲರನ್ಜು ಗರ್ಭಗುಡಿಗೆ ಕರೆದೊಯ್ದು ರೇವಣ್ಣ ಪೂಜೆ ಸಲ್ಲಿಸಿದರು. ಸುಮಾರು ಹದಿನೈದು ನಿಮಿಷ ಪೂಜೆ ಸಲ್ಲಿಸಿ ಹೊರಬಂದರು. ಗರ್ಭಗುಡಿಯ ಎಡಭಾಗದಲ್ಲಿ ಶಾಸಕ ಪ್ರೀತಂಗೌಡ ನಿಂತಿದ್ದು, ಬಲಭಾಗಕ್ಕೆ ಎಚ್.ಡಿ.ರೇವಣ್ಣ ತೆರಳಿದರು. ನಿನ್ನೆಯು ಹಾಸನಾಂಬೆ ದೇವಾಲಯದಲ್ಲಿ ರೇವಣ್ಣ, ಪ್ರೀತಂಗೌಡ ಮುಖಾಮುಖಿಯಾಗಿದ್ದರು.
ಹಾಸನಾಂಬೆ ದೇಗುದಲ್ಲಿ ಶಾಸಕ ಪ್ರೀತಂಗೌಡ ಠಿಕಾಣಿ
ಇನ್ನು ಹಾಸನಾಂಬೆ ದೇಗುದಲ್ಲಿ ಶಾಸಕ ಪ್ರೀತಂಗೌಡ ಠಿಕಾಣಿ ಹೊಡಿದ್ದು, ನೆನ್ನೆಯಿಂದಲೂ ಹಾಸನಾಂಬೆ ಗರ್ಭಗುಡಿ ಬಳಿ ನಿಂತ್ತಿದ್ದಾರೆ. ಶಾಸಕರ ಅನುಮತಿ ಇದ್ದವರಿಗಷ್ಟೇ ಗರ್ಭಗುಡಿ ಎಂಟ್ರಿಗೆ ಅವಕಾಶ ನೀಡಲಾಗಿದೆ. ಯಾರೇ ಬಂದರೂ ಶಾಸಕರ ಅನುಮತಿ ಪಡೆದು ಪೊಲೀಸರು ಗರ್ಭಗುಡಿಗೆ ಕಳಿಸುತ್ತಿದ್ದಾರೆ. ನಟಿ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾಗೆ ಗರ್ಭಗುಡಿ ಪ್ರವೇಶಕ್ಕೆ ಶಾಸಕ ಪ್ರೀತಂಗೌಡ ನಿಕಾಕರಣೆ ಮಾಡಿದ್ದು, ಕೈ ಮುಗಿದು ಆಯ್ತಲ್ಲ ಹೊರಡಿ ಎಂದರು. ಆದರೆ ಒಳ ಹೋಗಲು ಅನುಮತಿಗಾಗಿ ಗರ್ಭಗುಡಿ ಬಳಿಯೇ ನಟಿ ತಾರಾ ನಿಂತಿದ್ದರು. ಕಡೆಗೆ ಎಸ್ಪಿ ಹರಿರಾಮ್ ಶಂಕರ್ ಮನವಿ ಮೇರೆಗೆ ನಟಿ ತಾರಾಗೆ ಗರ್ಭಗುಡಿಗೆ ಒಳಹೋಗಲು ಬಿಟ್ಟರು.
ಎರಡು ದಿನಗಳ ಹಿಂದೆ ಶಾಸಕರ ಸಂಬಂಧಿಕರಿಗೆ ಗರ್ಭಗುಡಿ ಪ್ರವೇಶಕ್ಕೆ ಪೊಲೀರು ಅಡ್ಡಿ ಪಡಿಸಿದ್ದರು. ಪೊಲೀಸರ ಕ್ರಮದಿಂದ ಸಿಟ್ಟಿಗೆದ್ದು ಎರಡು ದಿನಗಳಿಂದ ತಾವೇ ಖುದ್ದು ಗರ್ಭಗುಡಿ ಬಳಿ ಶಾಸಕ ಪ್ರೀತಂಗೌಡ ನಿಲ್ಲುತ್ತಿದ್ದಾರೆ. ಯಾರನ್ನೆ ಒಳ ಬಿಡಬೇಕಾದರೂ ಶಾಸಕರ ಅನುಮತಿಗಾಗಿ ಪೊಲೀಸರು ಪರದಾಡುವಂತಾಗಿದೆ. ಗರ್ಭಗುಡಿಗೆ ಪ್ರವೇಶ ನಿರಾಕರಣೆಯಿಂದ ಯಾವುದೇ ಅಡ್ಡಿಯಿಲ್ಲದೆ ಸಾಮಾನ್ಯ ಭಕ್ತರು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.