ಹೇಮಾವತಿ ನದಿಗೆ ಹಾರಿ ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ: ಕಾರಣವೇನು?

ಹಾಸನ ಜಿಲ್ಲೆ ಹೊಳೆನರಸೀಪುರದ ಪ್ರಥಮ ದರ್ಜೆ ಗುತ್ತಿಗೆದಾರ ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ದಿನ ಕಳೆದರೂ ಸಹ ಇನ್ನೂ ಮೃತದೇಹ ಸಿಕ್ಕಿಲ್ಲ. ಇದರಿಂದ ಕುಂದಾಪುರದ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದಾರೆ.

ಹೇಮಾವತಿ ನದಿಗೆ ಹಾರಿ ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ: ಕಾರಣವೇನು?
ಸತ್ತಾರ್, ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ
Updated By: ರಮೇಶ್ ಬಿ. ಜವಳಗೇರಾ

Updated on: Oct 06, 2023 | 10:57 AM

ಹಾಸನ, (ಅಕ್ಟೋಬರ್ 06): ಹೇಮಾವತಿ ನದಿಗೆ ಜಿಗಿದು ಗುತ್ತಿಗೆದಾರರೊಬ್ಬರು(contractor) ಆತ್ಮಹತ್ಯೆ(suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ (Hassan) ಜಿಲ್ಲೆ ಹೊಳೆನರಸೀಪುರದ ಪ್ರಥಮ ದರ್ಜೆ ಗುತ್ತಿಗೆದಾರ ಕೆ ಸತ್ತಾರ್(79) ಹೇಮಾವತಿ ನದಿಗೆ(hemavathi river) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನದಿಗೆ ಜಿಗಿಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಳೆನರಸೀಪುರ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ಕೆ ಸತ್ತಾರ್(79) ವೈಯಕ್ತಿಕ ಸಮಸ್ಯೆಗಳಿಂದ‌ ನೊಂದಿದ್ದರು. ಬೇರೆಯವರಿಗೆ ಕೊಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ವಾಪಸ್​ ಬಂದಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ(ಅಕ್ಟೋಬರ್ 05) ಬೆಳಗ್ಗೆ 9 ಗಂಟೆ ಸಮಯದಲ್ಲಿ ನದಿಗೆ ಹಾರಿದ್ದಾರೆ. ಆದ್ರೆ, ಶವ ಪತ್ತೆಯಾಗದ ಹಿನ್ನಲೆ ಇನ್ನೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ಕುಂದಾಪುರದ ಮುಳುಗು ತಜ್ಞರು ಸತ್ತಾರ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.