ಹಾಸನ: ಮಹಿಳಾ ಕಂಡಕ್ಟರೊಬ್ಬರು (Conductor) ಬಸ್‌ನಲ್ಲಿಯೇ ಗರ್ಭಿಣಿಗೆ (Pregnant) ಹೆರಿಗೆ ಮಾಡಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಚಿಕ್ಕಮಗಳೂರು ಡಿಪೋದ ಕೆಎ 18 ಎಫ್ 0865 ಕೆಎಸ್‌ಆರ್‌ಟಿಸಿ ಬಸ್ (KSRTC Bus) ಬೆಂಗಳೂರಿನಿಂದ (Bengaluru) ಚಿಕ್ಕಮಗಳೂರಿಗೆ (Chikkamagaluru) ತೆರಳುತ್ತಿತ್ತು. ಬಸ್‌ನಲ್ಲಿ (BUS) ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಮಧ್ಯಾಹ್ನ 1.25ರ ಸುಮಾರಿಗೆ ಹಾಸನದ ಉದಯಪುರ ಕೃಷಿ ಕಾಲೇಜು ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲದ ಕಾರಣ, ಮಹಿಳಾ ಕಂಡಕ್ಟರ್ ಎಸ್ ವಸಂತಮ್ಮ ಬಸ್ ನಿಲ್ಲಿಸಿ, ಎಲ್ಲಾ 45 ಪ್ರಯಾಣಿಕರನ್ನು ಕೆಳಗಿಳಿಸಿದರು. ನಂತರ ಗರ್ಭಿಣಿಗೆ ಹೆರಿಗೆ ಮಾಡಿಸಿದರು.
ನಂತರ ಮಹಿಳೆಯನ್ನು ಶಾಂತಗ್ರಾಮ ಆಸ್ಪತ್ರೆಗೆ ರವಾನಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಈಗ ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ. ನಂತರ, ಬಸ್ ಸಿಬ್ಬಂದಿಗೆ ಮಹಿಳೆಯು ಆರ್ಥಿಕವಾಗಿ ಕಷ್ಟದಲ್ಲಿದ್ದಾಳೆಂದು ತಿಳಿದಿದ್ದು, ಪ್ರಯಾಣಿಕರಿಂದ 1,500 ರೂ. ಗ್ರಹಿಸಿ ಮಹಿಳೆಗೆ ನೀಡಿದ್ದಾರೆ. ಎಸ್ ವಸಂತಮ್ಮ ಅವರ ಕಾರ್ಯಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿಯವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: 500ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಖ್ಯಾತಿ, ಆದರೂ ಸೂರಿಲ್ಲದೇ ಗುಡಿಸಲಲ್ಲೇ ವಾಸಿಸುತ್ತಿರುವ ಸೂಲಗಿತ್ತಿ ಕಮಲಮ್ಮ
ಯಾದಗಿರಿ: ಮಾ.16 ರಂದು ಹೆರಿಗೆಗಾಗಿ ಸಂಗೀತ ಎಂಬ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲು 10 ಸಾವಿರ ಹಣವನ್ನ ವೈದ್ಯೆ ಡಾ.ಪಲ್ಲವಿ ಪೂಜಾರಿ ಕೇಳಿದ್ದರು. ಅಷ್ಟೊಂದು ಹಣ ಅವರ ಬಳಿ ಇರದ ಕಾರಣ, ಬೇರೆ ಕಡೆ ಅಲ್ಲಿ ಇಲ್ಲಿ ಕೇಳಿ ಹಣವನ್ನ ತರಲು ತಡವಾಗಿತ್ತು. ಅಲ್ಲಿಯವರೆಗೆ ಈ ವೈದ್ಯೆ ಹೆರಿಗೆ ಮಾಡಿಲ್ಲ.
ಬಳಿಕ ಹಣ ಕೊಟ್ಟ ಮೇಲೆ ಹೆರಿಗೆ ಮಾಡಿದ್ದರು. ಆದರೆ ಹೆರಿಗೆಗೆ ತಡವಾಗಿದ್ದಕ್ಕೆ ಮಗು ಗರ್ಭದಲ್ಲೇ ಸಾವನ್ನಪ್ಪಿತ್ತು. ಬಳಿಕ ಮಗುವಿನ ಸಾವಿಗೆ ವೈದ್ಯೆ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಜಿಲ್ಲಾಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿ ಅಮಾನತಿಗೆ ಆಗ್ರಹಿಸಿದ್ದರು. ಹೀಗಾಗಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ತೋರಿದ್ದಕ್ಕೆ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ಸಸ್ಪೆಂಡ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ