Updated on: May 16, 2023 | 7:56 PM
ಹಾಸನದಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಯಶಸ್ವಿಯಾಗಿದೆ. ನಿನ್ನೆಯಿಂದ ನಡೆದ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಕಾರ್ಯಾಚರಣೆ ಅಂತ್ಯಗೊಂಡಿದೆ. ಓಲ್ಡ್ ಬೆಲ್ಟ್, ಭುವನೇಶ್ವರಿ ಹೆಣ್ಣಾನೆಗಳಿಗೆ ನಿನ್ನೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಇಂದು ಕಾಂತಿ ಎಂಬ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದ ಒಸ್ಸೂರು ಎಸ್ಟೇಟ್‌ನಲ್ಲಿ ಇಂದು ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಬಾರಿ ಇಂಜೆಕ್ಷನ್ ನೀಡಿದರೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಐದನೇ ಬಾರಿಗೆ ಕಾಲಿಗೆ ಇಂಜೆಕ್ಷನ್ ಡಾಟ್ ಮಾಡಿದ ವೇಳೆ ಹೆಣ್ಣಾನೆ ನಿಯಂತ್ರಣಕ್ಕೆ ಬಂತು.
ಕಾಂತಿ ನಿಯಂತ್ರಣಕ್ಕೆ ಸಿಗುತ್ತಿದ್ದಂತೆ ಸಾಕಾನೆಗಳು ಅದನ್ನು ಸುತ್ತುವರೆದವು. ಈ ವೇಳೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ನಿನ್ನೆಯಿಂದ ಅಭಿಮನ್ಯು, ಪ್ರಶಾಂತ, ಅಜೇಯ, ವಿಕ್ರಂ ಸೇರಿದಂತೆ ಐದು ಸಾಕಾನೆಗಳ ಮೂಲಕ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು.
ಮೂರು ಕಾಡಾನೆಗಳ ಗುಂಪಿನ ನಾಯಕನಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದ್ದು, ಇದರಿಂದ ಕಾಡಾನೆಗಳ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ರವಾನೆಯಾಗಲಿದೆ.