ಹಾಸನ: ಇಲ್ಲಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಒಂದು ನಾಲ್ಕು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಎರಡು ಪುಟ್ಟ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕುಡಿದ ಮತ್ತಿನಲ್ಲಿ ಲಾರಿ ಚಾಲಕ ಮನಬಂದಂತೆ ವಾಹನ ಚಲಾಯಿಸಿದ್ದಾನೆ. ಸುಮಾರು ಎರಡು ಕಿಲೋಮೀಟರ್ ಬೈಕ್ ಎಳೆದುಕೊಂಡು ಹೋಗಿರುವ ಲಾರಿಗೆ ಸಿಲುಕಿ ಪ್ರಣತಿ (3) ಪ್ರಣವ್ (3) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಹಾಸನದ ಗವೇನಹಳ್ಲಿಯ ಶಿವಾನಂದ್ ಪತ್ನಿ ಜ್ಯೋತಿಗೆ ಗಂಭೀರ ಗಾಯವಾಗಿದೆ. ಮೃತ ಮಕ್ಕಳ ಮಕ್ಕಳ ಪೋಷಕರ ಸ್ಥಿತಿ ಗಂಭೀರವಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ ಹೊರ ವಲಯದ ಬೂವನಹಳ್ಳಿ ಬಳಿ ಬೈಕ್ಗೆ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಲಾರಿ ನಿಲ್ಲಿಸದೆ ಲಾರಿ ಚಾಲಕ ಪರಾರಿ ಆಗಿದ್ದ. ಅಪಘಾತ ಸ್ಥಳದಿಂದ ಮೂರು ಕಿಲೋಮೀಟರ್ ಮುಂದೆ ಹೋಗುವಾಗ ಮತ್ತೆ ಮೂರು ಬೈಕ್ಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ರಿಂಗ್ ರಸ್ತೆಯ ಬೂವನಹಳ್ಳಿಯಿಂದ ಹೊಸಕೊಪ್ಪಲು ನಡುವೆ ಅದೇ ಲಾರಿ ನಾಲ್ಕು ಬೈಕ್ಗಳಿಗೆ ಡಿಕ್ಕಿ ಆಗಿದೆ. ಲಾರಿ ಹಿಂಬಾಲಿಸಿದ ಜನರು ಮೈಸೂರು ರಸ್ತೆಯ ಹೊಸಕೊಪ್ಪಲು ಬಳಿ ಲಾರಿ ತಡೆದು ನಿಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆ ಅಳಿಯನಿಂದಲೇ ಮಾವನ ಹತ್ಯೆ
ಕೌಟುಂಬಿಕ ಕಲಹ ಹಿನ್ನೆಲೆ ಅಳಿಯನಿಂದಲೇ ಮಾವನ ಹತ್ಯೆಯಾದ ದುರ್ಘಟನೆ ತುಮಕೂರು ನಗರದ ಎನ್.ಆರ್.ಕಾಲೋನಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಚಂದ್ರಯ್ಯ(36) ಬರ್ಬರ ಕೊಲೆ ಮಾಡಲಾಗಿದೆ. ಅಳಿಯ ನಕುಲ್ ಮಾವನನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಜಗಳ ನಡೆದು ಬರ್ಬರ ಹತ್ಯೆ ಆಗಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಂಗಳೂರು: ನೇಣುಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
ನೇಣುಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಗಳೂರು ಬಳಿ ಕುತ್ತಾರು ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಬೀದರ್ ಮೂಲದ ವೈಶಾಲಿ ಗಾಯಕ್ವಾಡ್ (25) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಫಲ್ಯದಿಂದ ನೊಂದು ಆತ್ಮಹತ್ಯೆಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಯುವತಿ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಳ್ಳಾರಿ: ಶಾರ್ಟ್ ಸರ್ಕ್ಯೂಟ್ನಿಂದ ರಸ್ತೆಯಲ್ಲಿ ಹೊತ್ತಿ ಉರಿದ ಕಾರು
ಶಾರ್ಟ್ ಸರ್ಕ್ಯೂಟ್ನಿಂದ ಕಾರೊಂದು ರಸ್ತೆಯಲ್ಲಿ ಹೊತ್ತಿ ಉರಿದ ದುರ್ಘಟನೆ ನಡೆದಿದೆ. ಬಳ್ಳಾರಿಯ ಮೋತಿ ಸರ್ಕಲ್ನಲ್ಲಿ ಕಾರು ಹೊತ್ತಿಉರಿದಿದೆ. ಹೊಸಪೇಟೆಯಿಂದ ಆಂಧ್ರಕ್ಕೆ ತೆರಳ್ತಿದ್ದ ಸ್ಕಾರ್ಪಿಯೋ ಕಾರು ಬೆಂಕಿಗೆ ಆಹುತಿ ಆಗಿದೆ. ಅದೃಷ್ಟವಶಾತ್ ಕಾರಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ದಾವಣಗೆರೆ: ಗಾಯಾಳುಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ ಶಾಸಕ ರಾಮಪ್ಪ
ಅಪಘಾತಗೊಂಡ ಗಾಯಾಳನ್ನು ಹರಿಹರ ಶಾಸಕ ಎಸ್ ರಾಮಪ್ಪ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಬೆಳ್ಳೂಡಿ ಕ್ರಾಸ್ ಬಳಿ ಕಾರು – ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಆಗಿತ್ತು. ಹರಿಹರ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಚಿಕಿಕ್ಸೆ ನೀಡುವಂತೆ ವೈದ್ಯರಿಗೆ ಶಾಸಕರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ; ಮೂವರ ಸ್ಥಿತಿ ಗಂಭೀರ, ಬಾಲಕ ಸಾವು
ಇದನ್ನೂ ಓದಿ: ಚಾಮರಾಜನಗರ: ಗ್ರಾಮ ವಾಸ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಅಧಿಕಾರಿ ಸಾವು
Published On - 11:23 pm, Sun, 19 December 21