ಚಾಮರಾಜನಗರ: ಗ್ರಾಮ ವಾಸ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಅಧಿಕಾರಿ ಸಾವು

ಚಾಮರಾಜನಗರ: ಗ್ರಾಮ ವಾಸ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಅಧಿಕಾರಿ ಸಾವು
ಸಾಂಕೇತಿಕ ಚಿತ್ರ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಆಹಾರ ನಿರೀಕ್ಷಕ ನಿನ್ನೆ ಗೋಪಿನಾಥಂ ಗ್ರಾಮದಲ್ಲಿ ಡಿಸಿ ಜೊತೆಗೆ ಗ್ರಾಮ ವಾಸ್ತವ್ಯ ಮಾಡಿದ್ದರು. ಗ್ರಾಮ ವಾಸ್ತವ್ಯ ಮುಗಿಸಿ ಹಿಂದಿರುಗುತ್ತಿದ್ದಾಗ ಅಧಿಕಾರಿಗೆ ಹೃದಯಾಘಾತ ಆಗಿದೆ.

TV9kannada Web Team

| Edited By: ganapathi bhat

Dec 19, 2021 | 6:15 PM

ಚಾಮರಾಜನಗರ: ಗ್ರಾಮ ವಾಸ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಅಧಿಕಾರಿ ಸಾವನ್ನಪ್ಪಿದ ದುರ್ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹೃದಯಾಘಾತದಿಂದ ಆಹಾರ ನಿರೀಕ್ಷಕ ಚಂದ್ರುನಾಯ್ಕ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಆಹಾರ ನಿರೀಕ್ಷಕ ನಿನ್ನೆ ಗೋಪಿನಾಥಂ ಗ್ರಾಮದಲ್ಲಿ ಡಿಸಿ ಜೊತೆಗೆ ಗ್ರಾಮ ವಾಸ್ತವ್ಯ ಮಾಡಿದ್ದರು. ಗ್ರಾಮ ವಾಸ್ತವ್ಯ ಮುಗಿಸಿ ಹಿಂದಿರುಗುತ್ತಿದ್ದಾಗ ಅಧಿಕಾರಿಗೆ ಹೃದಯಾಘಾತ ಆಗಿದೆ. ಆಸ್ಪತ್ರೆಗೆ ದಾಖಲಾಸಿದ್ರೂ ಚಿಕಿತ್ಸೆ ಫಲಿಸದೇ ಅಧಿಕಾರಿ ಸಾವನ್ನಪ್ಪಿದ್ದಾರೆ.

ಯಾದಗಿರಿ: ರಸ್ತೆ ಬದಿ ಕಸಕ್ಕೆ ಹಚ್ಚಿದ್ದ ಬೆಂಕಿ ಕಿಡಿ ತಾಗಿ ಟ್ರ್ಯಾಕ್ಟರ್​ ಭಸ್ಮ ರಸ್ತೆ ಬದಿ ಕಸಕ್ಕೆ ಹಚ್ಚಿದ್ದ ಬೆಂಕಿ ಕಿಡಿ ತಾಗಿ ಟ್ರ್ಯಾಕ್ಟರ್​ ಭಸ್ಮವಾದ ಅವಘಡ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ವಾಲ್ಮೀಕಿ ಸರ್ಕಲ್​ನಲ್ಲಿ ನಡೆದಿದೆ. ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಅಗ್ನಿಗಾಹುತಿ ಆಗಿದೆ. ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅರಕೇರಾ ಗ್ರಾಮ ಬಳಿ ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಬೆಂಕಿ ತಗುಲಿದ ಮತ್ತೊಂದು ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಟ್ರಾಕ್ಟರ್ ಹೊತ್ತಿ ಉರಿದಿದೆ. ಬೆಂಕಿ ತಗುಲ್ತಿದ್ದಂತೆ ಕೆಳಗೆ ಹಾರಿ‌ ಚಾಲಕ ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಟ್ರೇಲರ್‌ನಿಂದ ಇಂಜಿನ್‌ ಬೇರ್ಪಡಿಸಿದ್ದಾರೆ. ಆದರೆ, ಟ್ರ್ಯಾಕ್ಟರ್‌ನಲ್ಲಿ ತುಂಬಿದ್ದ ಹುಲ್ಲು ಸಂಪೂರ್ಣ ಬೆಂಕಿಗಾಹುತಿ ಆಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು: ಮಾಲೀಕನ ಮೇಲಿನ ಸಿಟ್ಟಿಗೆ ಅಂಗಡಿಯಲ್ಲಿ ಕಳ್ಳತನ ಮಾಲೀಕನ ಮೇಲಿನ ಸಿಟ್ಟಿಗೆ ಅಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಸ್ಥಾನದಿಂದ ಫ್ಲೈಟ್​ನಲ್ಲಿ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಲಾಗಿದೆ. ರಾಮ್ ದೇವ್ ಎಂಬುವರ ಅಂಗಡಿಯಲ್ಲಿ ಕಳ್ಳನ ಕೈಚಳಕ ಕಂಡುಬಂದಿದೆ. 5 ವರ್ಷದ ಹಿಂದೆ ಇದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಹಿನ್ನೆಲೆ ಕೆಲಸ ಬಿಟ್ಟು ಹೋಗಿದ್ದ. ಅದಾದ ಬಳಿಕ ಅಂಗಡಿಯ ಮಾಲೀಕನ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಆಗಾಗ ಅಂಗಡಿ ಬಳಿ ಬಂದು ಚಲನವಲನ ಗಮನಿಸುತ್ತಿದ್ದ. ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನ ಕಂಡು ಕೃತ್ಯ ಎಸಗಿದ್ದಾನೆ. ಅಂಗಡಿಯಲ್ಲಿದ್ದ 2 ಲಕ್ಷ ಕದ್ದು ಎಸ್ಕೇಪ್​ ಆಗಿರುವ ಆರೋಪ ಕೇಳಿಬಂದಿದೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ ಮಾಡಿದ ಘಟನೆ ಧಾರವಾಡ ಮೆಹಬೂಬ ನಗರದಲ್ಲಿ ನಡೆದಿದೆ. ಕಳ್ಳರು ಟ್ರ್ಯಾಕ್ಟರ್ ಕದ್ದು ಚಲಾಯಿಸಿಕೊಂಡು ಹೋಗಿದ್ದಾರೆ. ರಾಜು ಜಾಧವ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಕದ್ದೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ನಾಲ್ಕು ದಿನಗಳ ಹಿಂದೆ ನಡೆದಿರೋ ಪ್ರಕರಣ ಇದೀಗ ಬಯಲಾಗಿದೆ. ಮೂವರು ಕಳ್ಳರಿಂದ ನಡೆದಿರೋ ಕೃತ್ಯ ಸೆರೆಯಾಗಿದೆ. ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ; ಮೂವರ ಸ್ಥಿತಿ ಗಂಭೀರ, ಬಾಲಕ ಸಾವು

ಇದನ್ನೂ ಓದಿ: ಕಾರು-ಬೈಕ್​ ನಡುವೆ ಡಿಕ್ಕಿ: ಶಿಕ್ಷಕ ಮತ್ತು ವಿದ್ಯಾರ್ಥಿ ಸ್ಥಳದಲ್ಲೇ ಸಾವು

Follow us on

Related Stories

Most Read Stories

Click on your DTH Provider to Add TV9 Kannada