ಹೊಸ ವರ್ಷಾಚರಣೆ ವೇಳೆ ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ, ಚಾಕು ಇರಿತ

ಹೊಸ ವರ್ಷಾಚರಣೆ ವೇಳೆ ವೈದ್ಯಕೀಯ ವಿದ್ಯಾರ್ಥಿಗಳ ಗಲಾಟೆ, ಚಾಕು ಇರಿತ

ಹಾಸನ: ಹೊಸ ವರ್ಷಾಚರಣೆ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡು ಓರ್ವ ವಿದ್ಯಾರ್ಥಿ ಮತ್ತೋರ್ವ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನದ ಹಿಮ್ಸ್ ಹಾಸ್ಟೆಲ್​ನಲ್ಲಿ ನಡೆದಿದೆ.
ನಿನ್ನೆ ತಡ ರಾತ್ರಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಈ ರೀತಿಯ ಎಡವಟ್ಟನ್ನ ಮಾಡಿಕೊಂಡಿದ್ದಾರೆ.

ಅಂತಿಮ ವರ್ಷದ MBBS ಓದುತ್ತಿದ್ದ ವಿದ್ಯಾರ್ಥಿಗಳು ತಮ್ಮ ಕೊನೆಯ ವರ್ಷದ ಆಚರಣೆ ವೇಳೆ ಮಾರಾಮಾರಿ ಮಾಡಿಕೊಂಡು ಶಿವಮೊಗ್ಗ ಮೂಲದ ಮಾರುತಿ ಎಂಬ ಯುವಕನಿಗೆ ಪಾಂಡವಪುರ ಮೂಲದ ಶ್ರೀಕಾಂತ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇರಿತಕ್ಕೊಳಗಾದ ಮಾರುತಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Click on your DTH Provider to Add TV9 Kannada