ಸ್ಮಶಾನ ಭೂಮಿ ಕಬಳಿಕೆ ಆರೋಪ: ಫಸಲಿಗೆ ಬಂದ ನೂರಾರು ಕಾಫಿ, ಮೆಣಸು ಗಿಡಗಳನ್ನ ಕಡಿದು ನೆಲಕ್ಕುರುಳಿಸಿದ ಕಿಡಿಗೇಡಿಗಳು
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕುಡಿದೆಲೆ ಗ್ರಾಮದಲ್ಲಿ ಭೂ ವ್ಯಾಜ್ಯ ಹಿನ್ನೆಲೆಯಲ್ಲಿ ಮೂರು ಎಕರೆ ಕಾಫಿಗಿಡಗಳನ್ನ ಕಿಡಿಗೇಡಿಗಳು ಕಡಿದ ಆರೋಪ ಕೇಳಿಬಂದಿದೆ.
ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಕುಡಿದೆಲೆ ಗ್ರಾಮದಲ್ಲಿ ಭೂ ವ್ಯಾಜ್ಯ ಹಿನ್ನೆಲೆಯಲ್ಲಿ ಫಸಲಿಗೆ ಬಂದಿದ್ದ ಮೂರು ಎಕರೆ ಕಾಫಿಗಿಡಗಳನ್ನ (Coffee Plantations) ಕಡಿದು ನಾಶಗೊಳಿಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಪ್ರವೀಣ್ ಎಂಬುವವರು ಸ್ಮಶಾನ ಭೂಮಿಯನ್ನು (Graveyard land) ಒತ್ತುವರಿಮಾಡಿ ತೋಟ ಮಾಡಿಕೊಂಡಿದ್ದಾರೆಂದು ಆರೋಪವಿದೆ. ಅದೇ ಜಾಗದಲ್ಲಿ ಪ್ರವೀಣ್ ಕಾಫಿ, ಅಡಿಕೆ, ಕಾಳು ಮೆಣಸು ಗಿಡಗಳನ್ನು ಬೆಳೆಸಿದ್ದು, ಇದೀಗ ಅವುಗಳನ್ನು ಕಿಡಿಗೇಡಿಗಳು ಕಡಿದಿದ್ದಾರೆ. ಗಿಡ ಕಡಿದಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಸಂತ್ರಸ್ಥ ರೈತ ಪ್ರವೀಣ್ ಆಗ್ರಹಿಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮ್ಯಾಂಡಾಸ್ ಚಂಡಮಾರುತದಿಂದ ಬೆಳೆ ನಾಶ: ರಾಜ್ಯದ ರೈತರು ತತ್ತರ
ಜಿಲ್ಲೆಯಲ್ಲಿ ಮ್ಯಾಂಡಾಸ್ ಚಂಡಮಾರುತದಿಂದ ಹೂಗಳ ಬೆಲೆಯಲ್ಲಿ ಭಾರಿ ಕುಸಿತ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೂ ಬೆಳೆದ ಬೆಳೆಗಾರರು ಆತಂಕದಲ್ಲಿದ್ದಾರೆ. ಹೂಗಳಲ್ಲಿ ಮಳೆ ಹನಿ ಸೇರಿರುವ ಹಿನ್ನಲೆ ಬೆಲೆ ಕುಸಿತವಾಗಿದ್ದು, ಹೂ ಒದ್ದೆಯಾಗಿರುವ ಕಾರಣಕ್ಕೆ ಹೂ ಕೊಂಡುಕೊಳ್ಳಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ತರೇವಾರಿ ಹೂ ಬೆಳೆ ಹಾಗೂ ಮಾರುಕಟ್ಟೆಗೆ ಖ್ಯಾತಿಯಾಗಿದ್ದ ಚಿಕ್ಕಬಳ್ಳಾಪುರ, ಸಾವಿರಾರು ಹೆಕ್ಟರ್ ಪ್ರದೇಶಗಳಲ್ಲಿ ಹೂ ಬೆಳೆಯಲಾಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಹೂ ಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಕೆ.ಜಿ ರೋಜ್ ಹೂ ಗೆ 40 ರೂಪಾಯಿ, ಸೇವಂತಿಗೆ 20 ರೂಪಾಯಿ, ಚೆಂಡೂ ಹೂ ಗೆ 10 ರೂ ಸೇರಿದಂತೆ ಬಹುತೇಕ ಎಲ್ಲಾ ಹೂಗಳ ಬೆಲೆ ಕುಸಿತವಾಗಿದ್ದು, ರೈತ ಕಣ್ಣೀರು ಹಾಕುತ್ತಿದ್ದಾನೆ.
ಇದನ್ನೂ ಓದಿ: ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ ಕಳ್ಳ ಚಿರತೆ
ರಾಮನಗರ ಜಿಲ್ಲೆಯಲ್ಲಿ ನಿರಂತರ ಮಳೆಗೆ ನೆಲಕಚ್ಚಿದ ರಾಗಿಬೆಳೆ
ರಾಮನಗರ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ರಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ರಾಗಿಬೆಳೆ ನೆಲಕಚ್ಚಿದ್ದು, ತೆನೆಯಲ್ಲಿ ಮೊಳಕೆ ಬರಲು ಆರಂಭಿಸಿದೆ. ಜಿಲ್ಲೆಯಲ್ಲಿ ಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗುತ್ತಿದೆ. ಇದರ ಜೊತೆ ಮಾವು, ರೇಷ್ಮೆ ಹೆಚ್ಚಾಗಿ ಬೆಳೆಯುತ್ತಾರೆ. ಇದೀಗ ನಿರಂತರ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಮಳೆ ಮುಂದುವರೆದರೆ ರಾಗಿ ಬೆಳೆ ಸಂಪೂರ್ಣ ನಾಶವಾಗಲಿದೆ.
ನೆರೆ ರಾಜ್ಯಗಳಲ್ಲಿ ಮ್ಯಾಂಡಾಸ್ ಅಬ್ಬರದಿಂದ ರಾಯಚೂರಿನ ರೈತರು ತತ್ತರ
ರಾಯಚೂರು: ಮ್ಯಾಂಡಾಸ್ ಹೊಡೆತಕ್ಕೆ ರಾಯಚೂರಿನ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ಭತ್ತ ಬೆಳೆಯುವ ರಾಯಚೂರು ಜಿಲ್ಲೆ, ಕಟಾವಿನ ಹಂತದಲ್ಲಿದ್ದ ಭತ್ತ ಹಾಗೂ ರಾಶಿ ಮಾಡಲಾಗಿರುವ ಭತ್ತದಿಂದ ನಷ್ಟವಾಗುವ ಆತಂಕದಲ್ಲಿದ್ದಾನೆ. ಅಪಾರ ಪ್ರಮಾಣದ ಬೆಳೆ ಕಟಾವು ಮಾಡಿದ್ದ ರೈತರಲ್ಲಿ ಸಂಕಷ್ಟ ಶುರುವಾಗಿದೆ. ಏಕಾಏಕಿ ಸುರಿದ ಮಳೆಗೆ ರೈತರು ಹೈರಾಣಾಗಿದ್ದಾರೆ. ಬೆಳೆ ಕಟಾವು ಮಾಡಿ ರಾಶಿ ಮಾಡಿದ್ದ ರೈತರು ನಿರಂತರ ಮಳೆಯಿಂದ ಹತ್ತಿ ಬಿಡಿಸಲಾಗುತ್ತಿಲ್ಲ.
ಇದನ್ನೂ ಓದಿ: ಟಿವಿ9 ವರದಿ ಬೆನ್ನಲ್ಲೆ ಬಿಎಂಟಿಸಿಯ 10 ಭ್ರಷ್ಟ ಅಧಿಕಾರಿಗಳ ಅಮಾನತು, ಇಬ್ಬರು ವರ್ಗಾವಣೆ
ಮ್ಯಾಂಡಾಸ್ ಚಂಡಮಾರುತದ ಮಳೆಗೆ ಭತ್ತ, ಹತ್ತಿ ನಾಶವಾಗುವ ಲಕ್ಷಣ ಕಾಣುತ್ತಿದೆ. ರಾಶಿ ಮಾಡಲಾಗುತ್ತಿದ್ದ ಸ್ಥಳಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಟಾವಿನ ಹಂತಕ್ಕೆ ಬಂದಿದ್ದ ಹತ್ತಿ ಬೆಳೆಗೂ ಹಾನಿಯಾಗಿದೆ. ಹೀಗೆ ಮಳೆ ಮುಂದುವರೆದರೆ ಹತ್ತಿ, ಭತ್ತದ ಬೆಲೆ ನೆಲಕಚ್ಚುವ ಸಾಧ್ಯತೆಯಿದೆ. ಇರುವ ಭತ್ತ, ಹತ್ತಿ ರಕ್ಷಣೆಗೆ ಹರಸಾಹಸ ಪಡುತ್ತಿರುವ ರೈತರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Mon, 12 December 22