ಮಂಗಗಳ ಮಾರಣಹೋಮ ಪ್ರಕರಣ; ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಹಾಸನ ಜಿಲ್ಲಾಧಿಕಾರಿ

| Updated By: ಆಯೇಷಾ ಬಾನು

Updated on: Aug 05, 2021 | 11:19 AM

ಕೋರ್ಟ್, ಘಟನೆ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ ನೊಟೀಸ್ ನೀಡಿತ್ತು. ಪ್ರಕರಣದ ತನಿಖೆಗೆ ಎಸ್.ಐ.ಟಿ ರಚಿಸಿರೋದಾಗಿ ಜಿಲ್ಲಾದಿಕಾರಿ ಮಾಹಿತಿ ನೀಡಿದ್ದಾರೆ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿರೋದಾಗಿ ವರದಿ ಸಲ್ಲಿಸಿದ್ದಾರೆ.

ಮಂಗಗಳ ಮಾರಣಹೋಮ ಪ್ರಕರಣ; ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಹಾಸನ ಜಿಲ್ಲಾಧಿಕಾರಿ
ಕರ್ನಾಟಕ ಹೈಕೋರ್ಟ್
Follow us on

ಹಾಸನ: ಜಿಲ್ಲೆಯಲ್ಲಿ 38 ಮಂಗಗಳ ಮಾರಣಹೋಮ(Monkeys) ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲಾಧಿಕಾರಿ ಹೈಕೋರ್ಟ್‌ಗೆ(Karnataka High Court) ವರದಿ ಸಲ್ಲಿಸಿದ್ದಾರೆ. ಕೋರ್ಟ್, ಘಟನೆ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ ನೊಟೀಸ್ ನೀಡಿತ್ತು. ಪ್ರಕರಣದ ತನಿಖೆಗೆ ಎಸ್.ಐ.ಟಿ ರಚಿಸಿರೋದಾಗಿ ಜಿಲ್ಲಾದಿಕಾರಿ ಮಾಹಿತಿ ನೀಡಿದ್ದಾರೆ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿರೋದಾಗಿ ವರದಿ ಸಲ್ಲಿಸಿದ್ದಾರೆ.

ತನಿಖಾ ತಂಡ ಈಗಾಗಲೇ ಪ್ರಕರಣದಲ್ಲಿ ಏಳು ಜನರನ್ನ ಬಂಧಿಸಿದ್ದಾರೆ. ಬೆಳೆಗೆ ಹಾನಿಮಾಡುತ್ತಿವೆ ಎಂದು 55 ಕ್ಕೂ ಹೆಚ್ಚು ಮಂಗಗಳ ಸೆರೆ ಹಿಡಿದು ಸಾಗಾಟ ಮಾಡುವಾಗ ಉಸಿರುಗಟ್ಟಿ 38 ಮಂಗಗಳು ಮೃತಪಟ್ಟಿವೆ. ವಿಷ ಪ್ರಾಶಾನ ಮಾಡಿಸಿ ಮಂಗಗಳ ಸೆರೆಹಿಡಿದು ಹತ್ಯೆ ಆರೋಪ ವಿಚಾರದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಡಿಸಿ ಆರ್.ಗಿರೀಶ್ ಕಾಯುತ್ತಿರೋದಾಗಿ ಮಾಹಿತಿ ನೀಡಿದ್ದಾರೆ.

ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಆಹಾರದ ಆಸೆ ತೋರಿಸಿ ಜುಲೈ 28 ರಂದು 50 ಕ್ಕೂ ಹೆಚ್ಚು ಕೋತಿಗಳನ್ನು ಚೀಲದಲ್ಲಿ ಬಂಧಿಸಿಟ್ಟಿದ್ದ ಯಶೋಧ ಹಾಗೂ ರಾಮು, ಅವುಗಳನ್ನು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.

ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 38 ಕೋತಿಗಳನ್ನು ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಮನವಿ ಮಾಡಿದ್ದ ಜಮೀನಿನ ಮಾಲೀಕರು, ಕೋತಿ ಸೆರೆಹಿಡಿದ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ ಸೇರಿ, ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು; ಐವರನ್ನು ವಶಕ್ಕೆ ಪಡೆದ ಪೊಲೀಸರು

Published On - 11:18 am, Thu, 5 August 21