ಹಾಸನ, ಅ.11: ಹಾಸನದಲ್ಲಿ ಮಾಜಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್ಡಿ ರೇವಣ್ಣ (HD Revanna) ಅವರ ಆಪ್ತ ಹಾಗೂ ಗುತ್ತಿಗೆದಾರ ಅಶ್ವತ್ಥ್ ಮೇಲೆ ದಾಳಿಗೆ ಯತ್ನ ನಡೆದಿದೆ. ರೇವಣ್ಣರ ನಿವಾಸದಿಂದ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಹೊರಟ್ಟಿದ್ದ ಅಶ್ವತ್ಥ್ ಮೇಲೆ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ್ದರು (Murder Attempt). ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷೆನ್ 307, 341, 427 ಅಡಿ ಕೇಸ್ ದಾಖಲಾಗಿದೆ.
ರಾತ್ರಿ ಸುಮಾರು 8.30ರ ಸಮಯದಲ್ಲಿ ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ಕಡೆಗೆ ಹೋಗುವ ಮಾರ್ಗಮಧ್ಯೆ ಸೂರನಹಳ್ಳಿ ಗ್ರಾಮದ ಬಳಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಕೆಲ ಕಿಡಿಗೇಡಿಗಳು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಫಾರ್ಚ್ಯೂನರ್ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರು. ಈ ವೇಳೆ ಸಮಯ ಪ್ರಜ್ಞೆಯಿಂದ ಕಾರು ಚಲಾಯಿಸಿಕೊಂಡು ಗುತ್ತಿಗೆದಾರ ಅಶ್ವತ್ಥ್ ಅವರು ಎಸ್ಕೇಪ್ ಆಗಿದ್ದರು. ಕಳೆದ ಆಗಸ್ಟ್ 9 ರಂದು ರೇವಣ್ಣ ಆಪ್ತ ಕೃಷ್ಣೇಗೌಡನನ್ನ ಕೊಲೆ ಮಾಡಲಾಗಿತ್ತು. ಹೀಗಾಗಿ ಹಲ್ಲೆ ಯತ್ನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆದ ಆರೋಪಿ ಸೆರೆ, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ಜಡ್ಜ್
ನಿನ್ನೆ ಸಂಜೆ ಹಾಸನದಿಂದ ರೇವಣ್ಣ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದ ಅಶ್ವತ್ಥ್‌ಗೌಡ, ಕೆಲಕಾಲ ರೇವಣ್ಣ ಜೊತೆ ಇದ್ದು ಚನ್ನರಾಯಪಟ್ಟಣ ನಿವಾಸಕ್ಕೆ ವಾಪಸಾಗ್ತಿದ್ರು. ಮನೆಗೆ ಹೊರಟ ಬಗ್ಗೆ ಮಾಹಿತಿ ಪಡೆದು ಕೆಲ ಕಿಡಿಗೇಡಿಗಳು ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾರೆ. ಆಗ ಕೂಡಲೇ ಕಾರು ರಿವರ್ಸ್ ತೆಗೆದುಕೊಂಡು 150 ಕಿಲೋ ಮೀಟರ್ ವೇಗದಲ್ಲಿ ಕಾರು ಓಡಿಸಿಕೊಂಡು ಅಶ್ವತ್ಥ್ ಎಸ್ಕೇಪ್ ಆಗಿದ್ದಾರೆ. ಚನ್ನರಾಯಪಟ್ಟಣಕ್ಕೆ ಎಸ್‌ಪಿ ಮೊಹಮ್ಮದ್ ಸುಜಿತಾ ಅಶ್ವತ್ಥ್‌ಗೌಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೊತೆ ಚರ್ಚೆ ನಡೆಸಿದ್ದಾರೆ.
ಕಳೆದ ಆಗಸ್ಟ್ 9ರಂದು H.D.ರೇವಣ್ಣ ಆಪ್ತ ಗ್ರಾನೈಟ್ ಉದ್ಯಮಿ ಮತ್ತು ಗುತ್ತಿಗೆದಾರರಾಗಿದ್ದ ಕೃಷ್ಣೇಗೌಡ ಕೊಲೆಯಾಗಿತ್ತು. ಈಗ H.D.ರೇವಣ್ಣ ಆಪ್ತ ಹಾಗೂ ಗುತ್ತಿಗೆದಾರನ ಮೇಲೆ ಅಟ್ಯಾಕ್ ಆಗಿದೆ.
ಈ ಬಗ್ಗೆ ಹೆಚ್ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ನಾನು ಆತ ಹಾಸನದಿಂದ ಒಟ್ಟಿಗೆ ಬಂದೆವು. ಮಧ್ಯಾಹ್ನದಿಂದ ಒಂದು ಕಾರಿನಲ್ಲಿ ಕಾಯುತ್ತಿದ್ದರು ಎಂದು ನಮ್ಮ ಹುಡುಗರು ಹೇಳಿದರು. ನಮ್ಮ ಮನೆಯಿಂದ ಕಾರಿನಲ್ಲಿ ಹೊರಟಾಗ ಈತನನ್ನು ನೋಡಿದ್ದಾರೆ. ಅವರ ಮೇಲೆ ಅನುಮಾನ ಬಂದರು ಹೋಗಿದ್ದಾರೆ. ಕೂಡಲೇ ಅವರು ಮೆಸೇಜ್ ಕೊಟ್ಟಿದ್ದಾರೆ. ಸೂರನಹಳ್ಳಿ ಗೇಟ್ ಬಳಿ ಕಾರು ಓವರ್ ಟೆಕ್ ಮಾಡಿ ಹಾಕಿ ಸ್ಟಿಕ್, ರಾಡ್‌ಗಳನ್ನು ಹಿಡಿದುಕೊಂಡು ಅಟ್ಯಾಕ್ ಮಾಡಿ ಕಾರಿನ ಗ್ಲಾಸ್ ಒಡೆದಿದ್ದಾರೆ. ಕೂಡಲೇ ರಿವರ್ಸ್ ಬಂದು 150 ಕಿಲೋ ಮೀಟರ್ ಸ್ಪೀಡ್‌ನಲ್ಲಿ ಹೋಗಿದ್ದಾರೆ. ಮೂಡಲಹಿಪ್ಪೆ ಗ್ರಾಮದವರೆಗೂ ಫಾಲೋ ಮಾಡಿದ್ದಾರೆ. ಆಗ ಅಶ್ವಥ್ ನನಗೆ ಫೋನ್ ಮಾಡಿದರು. ನಾನು, ಹೊಳೆನರಸೀಪುರ ನಗರ ಠಾಣೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹೋದೆವು. ಹೊಸದಾಗಿ ಎಸ್ಪಿಯವರು ಬಂದಿದ್ದಾರೆ. ತನಿಖೆ ಮಾಡುವಾಗ ಮಧ್ಯಪ್ರವೇಶ ಮಾಡಲ್ಲ. ಸಿಸಿಟಿವಿಯಲ್ಲಿ ಕಾರುಗಳ ದೃಶ್ಯ ಸೆರೆಯಾಗಿದೆ ಅಂತ ಪೊಲೀಸರು ಹೇಳ್ತಿದ್ದಾರೆ. ನಮ್ಮ ಎಂಎಲ್‌ಸಿ ಅವರಿಗೆ ಭದ್ರತೆ ಕೊಡಿ ಎಂದು ಹೇಳಿದ್ದೇನೆ. ಏಕೆಂದರೆ ಅವರು ಅಲ್ಲೇ ತೋಟದಲ್ಲಿ ಇರ್ತಾರೆ ಎಂದರು.
ಹಾಸನ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:02 am, Wed, 11 October 23