ಪ್ರಜ್ವಲ್ ರೇವಣ್ಣ ಅಸಿಂಧು ಪ್ರಕರಣ; ವಕೀಲ ದೇವರಾಜೇಗೌಡ ವಿರುದ್ದ ವಂಚನೆ ಆರೋಪ ಮಾಡಿದ ಮೊದಲ ಪತ್ನಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2023 | 3:52 PM

ನನಗೆ ಮಾನಸಿಕ, ದೈಹಿಕ ಹಾಗೂ ವರದಕ್ಷಿಣೆ ಕಿರುಕುಳ ಕೊಟ್ಟು ಜೀವನ ಹಾಳು ಮಾಡಿದ್ದರು. ಇವರ ಹಿಂಸೆ ತಾಳದೇ ಆತನಿಂದ ವಿಚ್ಚೇಧನ ಪಡೆದುಕೊಂಡಿದ್ದೇನೆ. ನನ್ನೊಟ್ಟಿಗೆ ಸಂಬಂಧ ಕಡಿದುಕೊಂಡ ಬಳಿಕ ಈಗ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ, ಮಹಿಳಾ ಆಯೋಗಕ್ಕೆ ದೂರು ನೀಡೋದಾಗಿ ವಕೀಲ ದೇವರಾಜೇಗೌಡ ವಿರುದ್ದ ಮೊದಲ ಪತ್ನಿ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಅಸಿಂಧು ಪ್ರಕರಣ;  ವಕೀಲ ದೇವರಾಜೇಗೌಡ ವಿರುದ್ದ ವಂಚನೆ ಆರೋಪ ಮಾಡಿದ ಮೊದಲ ಪತ್ನಿ
ವಕೀಲ ​ದೇವರಾಜೇಗೌಡ ಮೊದಲ ಪತ್ನಿ ಆರೋಪ
Follow us on

ಹಾಸನ, ಸೆ.08: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಸದಸ್ಯತ್ವ ಅಸಿಂಧು ಪ್ರಕರಣದ ದೂರುದಾರ ವಕೀಲ ದೇವರಾಜೇಗೌಡ (Devarajegowda)ವಿರುದ್ದ ಇದೀಗ ಮೊದಲ ಪತ್ನಿ ಭಾಗ್ಯ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಹೌದು, ದೇವರಾಜೇಗೌಡ ಹಾಸನ, ಬೆಂಗಳೂರಿನಲ್ಲಿ ಹಲವರಿಗೆ ವಂಚನೆ ಮಾಡಿದ್ದು, 2016 ರಲ್ಲಿ ಯಾವುದೇ ಆಸ್ತಿ ಇಲ್ಲದ ವ್ಯಕ್ತಿಯು 2023 ರ ವೇಳೆಗೆ 80 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಸನದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ದೇವರಾಜೇಗೌಡ ಅವರ ಮೊದಲ ಪತ್ನಿ ಭಾಗ್ಯ ಅವರು ‘ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರ ಗ್ರಾಮದವರಾದ ದೇವರಾಜೇಗೌಡರನ್ನ 26 ವರ್ಷಗಳ ಹಿಂದೆ ಮದುವೆ ಆಗಿದ್ದು, ಬಳಿಕ 13 ವರ್ಷ ಸಂಸಾರ ಮಾಡಿದ್ದೆವು. ಬಳಿಕ ತನ್ನೊಟ್ಟಿಗೆ ವಿಚ್ಛೇದನ ಪಡೆದುಕೊಂಡ ನನ್ನ ಚಾರಿತ್ರ ಹರಣ ಮಾಡಿದ್ದಾರೆ. ಪ್ರಭಾವಿ ರಾಜಕಾರಣಿ ಜೊತೆಗೆ ತನಗೆ ಸಂಬಂಧ ಇರುವ ಬಗ್ಗೆ ಆರೋಪ ಮಾಡಿ, ಗೌರವಕ್ಕೆ ಧಕ್ಕೆ ತಂದಿದ್ದಾರೆ‌ ಎಂದು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ; ತಾತ ದೇವೇಗೌಡರ ಜೊತೆ ಚರ್ಚಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ತಯಾರಿ

ಕಿರುಕುಳ ಕೊಟ್ಟು ಜೀವನ ಹಾಳು ಮಾಡಿದ ಆರೋಪ

‘ನನಗೆ ಮಾನಸಿಕ, ದೈಹಿಕ ಹಾಗೂ ವರದಕ್ಷಿಣೆ ಕಿರುಕುಳ ಕೊಟ್ಟು ಜೀವನ ಹಾಳು ಮಾಡಿದ್ದರು. ಇವರ ಹಿಂಸೆ ತಾಳದೆ ಆತನಿಂದ ವಿಚ್ಚೇಧನ ಪಡೆದುಕೊಂಡಿದ್ದೇನೆ. ನನ್ನೊಟ್ಟಿಗೆ ಸಂಬಂಧ ಕಡಿದುಕೊಂಡ ಬಳಿಕ ಈಗ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ, ಮಹಿಳಾ ಆಯೋಗಕ್ಕೆ ದೂರು ನೀಡೋದಾಗಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಅಳಲು ತೋಡಿಕೊಂಡಿದ್ದು, ಈ ಕುರಿತು ಕುಟುಂಬ ಸದಸ್ಯರ ಜೊತೆಗೆ ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಮಾಜಿ ಪತಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ