ಪ್ರಶಾಂತ್ ಹತ್ಯೆ ಪ್ರಕರಣ: ಕೊಲೆ ಪ್ರಕರಣದ ತನಿಖೆಗೆ ಕ್ಷೇತ್ರದ ಶಾಸಕನಾಗಿ ಸಹಕಾರ ನೀಡುತ್ತೇನೆ: ಬಿಜೆಪಿ ಶಾಸಕ ಪ್ರೀತಂಗೌಡ

TV9kannada Web Team

TV9kannada Web Team | Edited By: ಗಂಗಾಧರ್​ ಬ. ಸಾಬೋಜಿ

Updated on: Jun 03, 2022 | 1:29 PM

ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಒಂದು ದುರದೃಷ್ಟಕರ. ಮೃತ ಪ್ರಶಾಂತ್ ನಿವಾಸಕ್ಕೆ ಹೋಗಿ ಸಾಂತ್ವನ ಹೇಳುತ್ತೇನೆ. ಕೊಲೆ ಪ್ರಕರಣದ ತನಿಖೆಗೆ ಕ್ಷೇತ್ರದ ಶಾಸಕನಾಗಿ ಸಹಕಾರ ನೀಡುತ್ತೇನೆ ಎಂದು ಟಿವಿ 9ಗೆ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆ ನೀಡಿದ್ದಾರೆ.

ಪ್ರಶಾಂತ್ ಹತ್ಯೆ ಪ್ರಕರಣ: ಕೊಲೆ ಪ್ರಕರಣದ ತನಿಖೆಗೆ ಕ್ಷೇತ್ರದ ಶಾಸಕನಾಗಿ ಸಹಕಾರ ನೀಡುತ್ತೇನೆ: ಬಿಜೆಪಿ ಶಾಸಕ ಪ್ರೀತಂಗೌಡ
ಬಿಜೆಪಿ ಶಾಸಕ ಪ್ರೀತಂಗೌಡ

ಹಾಸನ: ನಗರಸಭೆ ಜೆಡಿಎಸ್​ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣ ಹಿನ್ನೆಲೆ ನಗರದಲ್ಲಿ ಟಿವಿ 9ಗೆ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆ ನೀಡಿದ್ದು, ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಒಂದು ದುರದೃಷ್ಟಕರ. ಮೃತ ಪ್ರಶಾಂತ್ ನಿವಾಸಕ್ಕೆ ಹೋಗಿ ಸಾಂತ್ವನ ಹೇಳುತ್ತೇನೆ. ಕೊಲೆ ಪ್ರಕರಣದ ತನಿಖೆಗೆ ಕ್ಷೇತ್ರದ ಶಾಸಕನಾಗಿ ಸಹಕಾರ ನೀಡುತ್ತೇನೆ. ಈ ರೀತಿಯ ಘಟನೆ ಇಡೀ ರಾಜ್ಯದಲ್ಲಿ ಎಲ್ಲೂ ಆಗಬಾರದು. ನನ್ನ ಮತ್ತು ಪ್ರಶಾಂತ್ ನಾಗರಾಜ್ ನಡುವೆ ಆತ್ಮೀಯತೆ ಇತ್ತು. ಪಕ್ಷ ಯಾವುದೇ ಇರಲಿ ನಮ್ಮ ಜತೆ ಉತ್ತಮ ಸಂಬಂಧವಿತ್ತು ಎಂದು ಹೇಳಿದರು. ನಾನು ವಿರೋಧ ಪಕ್ಷದ ಶಾಸಕನಾದರು ನನ್ನ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರು. ನಾನೊಬ್ಬ ಶಾಸಕನಾಗಿ ಯಾರನ್ನ ಆದರೂ ನಮ್ಮ ಪಾರ್ಟಿಗೆ ಸಹಕಾರ ಕೊಡಿ ಅಂತ ಹೇಳೋದು ಸಹಜ. ಎಲ್ಲಾ ನಗರಸಬೆ ಸದಸ್ಯರನ್ನು ನಮ್ಮ ಪಾರ್ಟಿ ಗೆ ಸಹಕಾರ ಕೊಡಿ ಎಂದು ಕೇಳಿದ್ದೆ ಅದರಲ್ಲಿ ತಪ್ಪೆನಿದೆ. ಕೊಲೆಯಾದ ಪ್ರಶಾಂತ್​ರನ್ನ ಬಿಜೆಪಿಗೆ ಸೆಳೆಯಲು ಒತ್ತಡ ಹೇರಲಾಗಿತ್ತು ಎಂಬ ಜೆಡಿಎಸ್ ಆರೋಪಕ್ಕೆ ತಿರುಗೇಟು ನೀಡಿದರು.

ಇದನ್ನೂ ಓದಿ: Literature : ನೆರೆನಾಡ ನುಡಿಯೊಳಗಾಡಿ; ಈ ರಾಗವನ್ನು ಕಂಠಪಾಠ ಮಾಡಲೆಂದು ಬಹುಕಾಲ ನಾನು ಹುಡುಕಿ ಅಲೆದೆ

ತಾಜಾ ಸುದ್ದಿ

ಈ ಘಟನೆ ಸಂಬಂಧ ಇಬ್ಬರು ಆರೋಪಗಳನ್ನ ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಂಧನದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾಹಿತಿ ನೀಡಿದರು. ಘಟನೆ ನಡೆದ ಮಾರನೇ ದಿನ ಇಬ್ಬರು ಆರೋಪಿಗಳ ಬಂಧನವಾಗಿದೆ. ಈ ಕೊಲೆಹಿಂದೆ ಯಾವುದೇ ರಾಜಕೀಯ ಶಡ್ಯಂತ್ರ ಇಲ್ಲಾ. ಎರಡು ಕುಟುಂಬಗಳ ನಡುವಿನ ಗಲಾಟೆಯಿಂದ ಕೊಲೆ ನಡೆದಿದೆ ಎನ್ನೋ ಮಾಹಿತಿ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.

ಪ್ರಕರಣ ಏನು?

ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಪ್ರಶಾಂತ್ನನ್ನು ಹಿಂಬಾಲಿಸಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಹಾಸನ ನಗರದ ಲಕ್ಣ್ಮಿಪುರ ಬಡಾವಣೆಯಲ್ಲಿ ಹತ್ಯೆ ನಡೆದಿದೆ. ಹಾಸನ ನಗರದ 16ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಶಾಂತ್ ಆಯ್ಕೆಯಾಗಿದ್ದರು. ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳೋ ವೇಳೆ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ. ಭೀಕರವಾಗಿ ಕೊಚ್ಚಿ ಹಂತಕರು ಕೊಲೆ ಮಾಡಿದ್ದಾರೆ. ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada