AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರೆಗಾಗಿ‌ ಸಾವಿರಾರು ಮಹಿಳೆಯರ ನೂಕು ನುಗ್ಗಲು: ನನ್ನ ಮಗು ಕಾಪಾಡಿ ಎಂದು ಬಾಯಿ ಬಡೆದುಕೊಂಡ ತಾಯಿ

ನೂರಾರು ಮಹಿಳೆಯರ ಮಧ್ಯೆ ತಾಯಿ ಮಗು ಸಿಲುಕಿಕೊಂಡಿದ್ದು, ಉಸಿರುಗಟ್ಟಿದ ವಾತಾವರಣದಲ್ಲಿ ಮಗು ಮೇಲೆತ್ತಿ ಗೋಳಾಡಿದ್ದಾರೆ. ಮಹಿಳೆಯರ ಮಧ್ಯೆ ಸಿಲುಕಿಕೊಂಡ ಮಗು ರಕ್ಷಿಸಲು ತಾಯಿ ಪರದಾಡಿದ್ದು, ಕಾಪಾಡಿ ಎಂದು ಬಾಯಿ ಬಡೆದುಕೊಂಡಿದ್ದಾಳೆ.

ಸೀರೆಗಾಗಿ‌ ಸಾವಿರಾರು ಮಹಿಳೆಯರ ನೂಕು ನುಗ್ಗಲು: ನನ್ನ ಮಗು ಕಾಪಾಡಿ ಎಂದು ಬಾಯಿ ಬಡೆದುಕೊಂಡ ತಾಯಿ
ಸೀರೆಗಾಗಿ‌ ಸಾವಿರಾರು ಮಹಿಳೆಯರ ನೂಕು ನುಗ್ಗಲು: ನನ್ನ ಮಗು ಕಾಪಾಡಿ ಎಂದು ಬಾಯಿ ಬಡೆದುಕೊಂಡ ತಾಯಿ
TV9 Web
| Edited By: |

Updated on:May 08, 2022 | 6:08 PM

Share

ಹಾಸನ: ಸೀರೆಗಾಗಿ‌ (Saree) ಸಾವಿರಾರು ಮಹಿಳೆಯರ ನೂಕು ನುಗ್ಗಲಾಗಿರುವಂತಹ ಘಟನೆ ವಿಶ್ವ ತಾಯಂದಿರ ದಿನದ ಅಂಗವಾಗಿ ಅರಕಲಗೂಡು‌ ಪಟ್ಟಣದಲ್ಲಿ‌ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ನಡೆದಿದೆ. ಮಾಜಿ‌ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಅಭಿಮಾನಿ ಬಗಳದಿಂದ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 5000 ಅಧಿಕ ಮಹಿಳೆಯರು ಭಾಗಿಯಾಗಿದ್ದು, ಆಯೋಜಕರು ಎಲ್ಲರಿಗೂ ಬಾಗಿನ ಕೊಡೊ‌ ವ್ಯವಸ್ಥೆ ಮಾಡಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಸೀರೆ ವಿತರಣೆಗೆ ಮುಂದಾದ ಆಯೋಜಕರು, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರಿಗೆ ಟೋಕನ್ ವ್ಯವಸ್ಥೆ ಮಾಡಿದ್ದ ಆಯೋಜಕರು, ಕಾರ್ಯಕ್ರಮ‌ ಮುಗಿಯುತ್ತಿದ್ದಂತೆ ಸೀರೆ ಪಡೆಯಲು ಸಾವಿರಾರು ಮಹಿಳೆಯರು ಮುಗಿಬಿದಿದ್ದಾರೆ.

ನೂರಾರು ಮಹಿಳೆಯರ ಮಧ್ಯೆ ತಾಯಿ ಮಗು ಸಿಲುಕಿಕೊಂಡಿದ್ದು, ಉಸಿರುಗಟ್ಟಿದ ವಾತಾವರಣದಲ್ಲಿ ಮಗು ಮೇಲೆತ್ತಿ ಗೋಳಾಡಿದ್ದಾರೆ. ಮಹಿಳೆಯರ ಮಧ್ಯೆ ಸಿಲುಕಿಕೊಂಡ ಮಗು ರಕ್ಷಿಸಲು ತಾಯಿ ಪರದಾಡಿದ್ದು, ಕಾಪಾಡಿ ಎಂದು ಬಾಯಿ ಬಡೆದುಕೊಂಡಿದ್ದಾಳೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀಧರ್‌ಗೌಡ, ಕಾರ್ಯಕ್ರಮ ಆಯೋಜಿಸಿದ್ದು, ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧುವನಾರಾಯಣ್, ಮಾಜಿಸಚಿವೆ ಉಮಾಶ್ರೀ, ಚಲಚಿತ್ರ ನಟಿಯರಾದ ಸಾನ್ವಿ ಶ್ರೀವಾತ್ಸವ್, ಮಿಲನನಾಗರಾಜ್, ಸಾಧುಕೋಕಿಲ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಹೆಣ್ಣಿನ ನಾಯತ್ವದೊಂದಿಗೆ ಕಾಂಗ್ರೆಸ್ ಹುಟ್ಟಿದೆ. ಇವತ್ತು ಕೂಡ ಕಾಂಗ್ರೆಸ್ ಹೆಣ್ಣಿನ ನಾಯಕತ್ವ ಹೊಂದಿದೆ. ಎರಡು ಬಾರಿ ಪ್ರದಾನಿ ಹುದ್ದೆ ತ್ಯಾಗಮಾಡಿದ ಹೆಣ್ಣು ಸೋನಿಯಾ ಗಾಂಧಿ. ಅವರ ಪಕ್ಷದ ಪ್ರತಿನಿದಿಯಾಗಿ ನಾನು ಬಂದಿದ್ದೆನೆ. ಮಹಿಳೆಯರಿಗೆ ಗೌರವ ಕೊಡಬೇಕು ಎನ್ನೋದು ನಮ್ಮ ಬಯಕೆ. ಯಾರೂ ಚೇರ್​ಗೆ ಅಂಟಿಕೊಂಡು ಕೂರಲು ಆಗಲ್ಲ. ನನ್ನ ಚೇರ್ ಕೂಡ ಗ್ಯಾರಂಟಿ ಅಲ್ಲಾ. ಯಾರು ಜನ ಸೇವೆ ಮಾಡ್ತಾರೋ ಅವರನ್ನು ನಾನು ಗುರ್ತಿಸಬೇಕಾಗುತ್ತೆ. ನಾನು ಯಾರಿಗೂ ಅಧಿಕಾರ ಕೊಡ್ತೀನಿ ಎಂದು ಹೇಳಿಲ್ಲ. ಜನ ಸೇವೆ ಯಾರು ಮಾಡುತ್ತಾರೆ ಅವರನ್ನು ಗುರುತಿಸಬೇಕಲ್ಲ. ಅರಕಲಗೂಡಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಯೋಜನೆ ಮಾಡಿದ ತಮ್ಮ ಪಕ್ಷದ ನಾಯಕನನ್ನ ಹೊಗಳಿದರು. ಮುಂಬರೋ ವಿದಾನಸಭೆ ಚುನಾವಣೆಗೆ ಅರಕಲಗೂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್​ಗಾಗಿ ತೀವೃ ಪೈಪೋಟಿಯಿದೆ. ತಮ್ಮ ಆಪ್ತ ಶ್ರೀಧರ್ ಗೌಡರು ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ನಿಮ್ಮನ್ನ ಹೊಗಳುತ್ತಿದ್ದೇನೆ ಎಂದು ನಾನು ನಿಮಗೆ ಸೀಟು ಕೊಡ್ತೀನಿ ಎಂದು ಹೇಳೋಕೆ ನಾನು ಬಂದಿಲ್ಲ. ನೀವು ಜನ ಸೇವೆ ಮುಂದುವರೆಸಿ. ಮುಂದೆ ಏನೆಂದು ಪಕ್ಷ ತೀರ್ಮಾನ ಮಾಡಲಿದೆ. ಮುಂದೆ ಕಾಂಗ್ರೆಸ್ ನ ಇತಿಹಾಸ ರಾಜ್ಯದಲ್ಲಿ ಸೃಷ್ಟಿ ಆಗಲಿದೆ. ನಾವು ಮಹಿಳೆಯರ ಮೇಲೆ ನಂಬಿಕೆ ಇಟ್ಟಿದ್ದೇವೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ. ನುಡಿ ದಂತೆ ನಾವು ನಡೆದಿದ್ದೇವೆ. ಸರ್ಕಾರದ ಯಾವುದೇ ಫಲಾನುಭವಿ ಇರಲಿ, ಯಾವುದೇ ಯೋಜನೆ ಇರಲಿ ಸೈಟ್, ಮನೆ ಏನೇ ಕೊಡಲಿ ಅದನ್ನು ಹೆಣ್ಣು ಮಕ್ಕಳ ಹೆಸರಿಗೆ ನೊಂದಣಿ ಮಾಡುತ್ತೇವೆ. ಇದು ನಮ್ಮ ಪ್ರಣಾಳಿಕೆ ಎಂದು ಘೋಷಣೆ ಮಾಡಿದರು. ನಮ್ಮ ಕ್ಷೇತ್ರದಲ್ಲಿ ಏಳು ಸಾವಿರ ಸೈಟ್ ಕೊಟ್ಟೆ, ಎಲ್ಲವನ್ನೂ ಮಹಿಳೆಯರ ಹೆಸರಿಗೆ ನೊಂದಣಿ ಮಾಡಿಸಿದ್ದೆ. ಇಂತಹ ಕಾನೂನನ್ನು ಮುಂದೆ ಬರೋ ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತೆ. ಸಿಎಂ ಯಾರೇ ಅಗಲಿ ಈ ಕಾನೂನು ಜಾರಿ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:08 pm, Sun, 8 May 22