ಹಾಸನ: ಮಲಗಿದ್ದಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಉತ್ತರ ಪ್ರದೇಶ ಮೂಲದ ಯುವಕರು

ಕೆಲಸ ಅರಸಿ ಹಾಸನ ಜಿಲ್ಲೆಯ ಗ್ರಾಮವೊಂದಕ್ಕೆ ಉತ್ತರ ಪ್ರದೇಶದಿಂದ ಬಂದಿದ್ದ ಇಬ್ಬರು ಯುವಕರು ಮಲಗಿದ್ದ ಸ್ಥಳದಲ್ಲೇ ನಿಗೂಢವಾಗಿ ಮೃತಪಟ್ಟಿದ್ದಾರೆ.

ಹಾಸನ: ಮಲಗಿದ್ದಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಉತ್ತರ ಪ್ರದೇಶ ಮೂಲದ ಯುವಕರು
ಸಾಂದರ್ಭಿಕ ಚಿತ್ರ
Edited By:

Updated on: Jul 15, 2023 | 1:24 PM

ಹಾಸನ: ರಾತ್ರಿ ಊಟ ಮಾಡಿ ಮಲಗಿದ್ದ ಇಬ್ಬರು ಯುವಕರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಹಾಸನ(Hassan) ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. ನವಾಬ್​(24), ರಾಮಸಂಜೀವನ್​(30) ಮೃತದೇಹಗಳು ಕೊಠಡಿಯಲ್ಲಿ ಪತ್ತೆಯಾಗಿವೆ. ಉತ್ತರ ಪ್ರದೇಶದ(Uttar Pradesh) ನಯನ್​ಪುರ ಗ್ರಾಮದ ನಿವಾಸಿಗಳಾಗಿರುವ ಈ ಇಬ್ಬರು ಯುವಕರು ಕೆಲಸ ಅರಸಿ ಹಾಸನ ತಾಲೂಕಿನ ಹನುಮಂತಪುರ ಗ್ರಾಮಕ್ಕೆ ಬಂದಿದ್ದರು. ಆದ್ರೆ, ಜ್ವರ ಬಂದಿದ್ದರಿಂದ ಔಷಧಿ ಮಲಗಿದ್ದವರು ಮೇಲೆ ಎದ್ದಿಲ್ಲ. ಮಲಗಿದ್ದ ಸ್ಥಳದಲ್ಲೇ ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ.

ಹನುಮಂತಪುರ ಗ್ರಾಮದ ಮಹೇಶ್ ಎಂಬವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರೂಂ ಪಡೆದು ವಾಸವಿದ್ದರು. ಎರಡು ದಿನ ಕೆಲಸ ಮಾಡಿ ಜ್ವರದಿಂದ ಬಳಲುತ್ತಿದ್ದರಿಂದ ರಜೆ ಮಾಡಿದ್ದರು. ಅಲ್ಲದೇ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಆದ್ರೆ, ಬುಧವಾರ ರಾತ್ರಿ ಊಟ ಮುಗಿಸಿ ಔಷಧಿ ಸೇವಿಸಿ ಮಲಗಿದ್ದವರು ಮೇಲೆ ಎದ್ದಿಲ್ಲ.ಮಲಗಿದ್ದಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಒಂದು ದಿನ ಕಳೆದರೂ ರೂಮ್​ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಮನೆ ಮಾಲೀಕ, ಬಾಗಿಲು ಒಡೆದ ನೋಡಿದಾಗ ಮಲಗಿದ್ದ ಜಾಗದಲ್ಲಿಯೇ ಯುವಕರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ವಿಷಯ ತಿಳಿಸಿದು ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನು ಈ ಇಬ್ಬರು ಯುವಕರ ಸಾವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us