ಹಾವೇರಿ: ಹೋರಿ ಹಬ್ಬದ ಆಚರಣೆ ಸಂದರ್ಭದಲ್ಲಿ ಮಿಂಚಿನ ಓಟ ಓಡುತ್ತಲೇ ಕೆರೆಗೆ ಬಿದ್ದು ಹೋರಿಯೊಂದು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ನಡೆದಿದೆ.
ಅಖಾಡದಲ್ಲಿ ಓಡಿ ಬರುತ್ತಿದ್ದ ಹೋರಿಯನ್ನು ನೋಡುತ್ತಾ ನಿಂತವರು ಯದ್ವಾತದ್ವಾ ಓಡಿದರು. ಈ ವೇಳೆ ಎತ್ತ ಓಡುವುದೆಂದು ದಿಕ್ಕು ತೋಚದೆ ಅರಳೀಕಟ್ಟಿ ಗ್ರಾಮದ ವರದನಾಯಕ ಎಂಬ ಹೆಸರಿನ ಹೋರಿ ಕೆರೆಗೆ ಜಿಗಿಯಿತು. ಹೋರಿ ಉಳಿಸಲು ಸ್ಥಳೀಯರು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಹೋರಿ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದು, ಓಟದ ವೇಳೆ ನೀರಿಗೆ ಹೋರಿ ಜಿಗಿದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published On - 6:22 pm, Sun, 27 December 20