ಮಾನಹಾನಿ ಆರೋಪ: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ FIR

ಪ್ರಶಾಂತ್​ ಸಂಬರಗಿ ವಾಟ್ಸಾಪ್​​ ಗ್ರೂಪ್​​ನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ. ಹೀಗಾಗಿ, ದೇವನಾಥ್​ ದೂರು ಆಧರಿಸಿ ಪ್ರಶಾಂತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.

ಮಾನಹಾನಿ ಆರೋಪ: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ FIR
ಪ್ರಶಾಂತ್ ಸಂಬರಗಿ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 27, 2020 | 7:06 PM

ಬೆಂಗಳೂರು: ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಹೆಸರು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹೆಚ್ಚು ಬಡ್ಡಿ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದ ಆರೋಪದ ಮೇಲೆ ಪ್ರಶಾಂತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.

ವೆಸ್ಟ್​​ ಆಫ್​​ ಕಾರ್ಡ್​​ ರೋಡ್​ ನಿವಾಸಿ ವೈ.ಕೆ. ದೇವನಾಥ್​ ಎಂಬುವವರು ಪ್ರಶಾಂತ್​ ಬಳಿ ಬಡ್ಡಿಗೆ ಸಾಲ ಪಡೆದುಕೊಂಡಿದ್ದರಂತೆ. ಶ್ಯೂರಿಟಿಗಾಗಿ ತಮ್ಮ ಆಸ್ತಿ ಪತ್ರಗಳನ್ನ ದೇವನಾಥ್​​ ಅಡವಿಟ್ಟಿದ್ದರು. ಬಡ್ಡಿ ಸಮೇತ ಹಣ ನೀಡಿದ್ದರೂ ಪ್ರಶಾಂತ್​ ಸಂಬರಗಿ ದಾಖಲೆ ಹಿಂದಿರುಗಿಸಿಲ್ಲ ಎನ್ನಲಾಗಿದೆ.

ಸಾಲವನ್ನು ಬಡ್ಡಿ ಸಮೇತ ಹಣ ಹಿಂದಿರುಗಿಸಿದ ನಂತರವೂ, ತೆಗೆದುಕೊಂಡ ಸಾಲಕ್ಕೆ ಶೇ 10ರಷ್ಟು ಬಡ್ಡಿ ನೀಡುವಂತೆ ಸಂಬರಗಿ ಬೇಡಿಕೆ ಇಟ್ಟಿದ್ದಾರೆ. ಬಡ್ಡಿ ಕೊಡಲು ಒಪ್ಪದಿದ್ದಾಗ ದೇವನಾಥ್​​ ವಿರುದ್ಧ ಪ್ರಶಾಂತ್​ ಸಂಬರಗಿ ವಾಟ್ಸಾಪ್​​ ಗ್ರೂಪ್​​ನಲ್ಲಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ. ಹೀಗಾಗಿ, ದೇವನಾಥ್​ ದೂರು ಆಧರಿಸಿ ಪ್ರಶಾಂತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ವಿಚಾರ ಮೊದಲ ಬಾರಿಗೆ ಸುದ್ದಿಯಾದಾಗ ಪ್ರಶಾಂತ್​ ಸಂಬರಗಿ ಮುನ್ನಲೆಗೆ ಬಂದಿದ್ದರು. ಸಾಕಷ್ಟು ನಟ-ನಟಿಯರ ವಿರುದ್ಧ ಡ್ರಗ್​ ಸೇವನೆಯ ಆರೋಪ ಮಾಡಿದ್ದರು. ಸರ್ಜಾ ಕುಟುಂಬಕ್ಕೆ ಸಂಬರಗಿ ಆಪ್ತರಾಗಿದ್ದಾರೆ.

ಸಂಬರಗಿ ಮತ್ತೊಂದು Bomb: ಇಬ್ಬರು ದೊಡ್ಡ ನಟರ ವಿವರ ಬಹಿರಂಗಪಡಿಸುತ್ತೇನೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada