ಹಾವೇರಿಯಲ್ಲಿ ಶಾರ್ಟ್ ಸರ್ಕ್ಯೂಟ್; ಪವರ್ ಗ್ರಿಡ್​ನಲ್ಲಿ ಹೊತ್ತಿ ಉರಿದ ಬೆಂಕಿ

ಶಾರ್ಟ್ ಸರ್ಕ್ಯೂಟ್​ನಿಂದ ಪವರ್ ಗ್ರಿಡ್​ನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಈ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಬಳಿ ನಡೆದಿದೆ. ಹೊತ್ತಿ ಉರಿದ ಬೆಂಕಿಯಿಂದ ಪವರ್ ಗ್ರಿಡ್​ನಲ್ಲಿದ್ದ ಕೆಲವು ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಹಾವೇರಿಯಲ್ಲಿ ಶಾರ್ಟ್ ಸರ್ಕ್ಯೂಟ್; ಪವರ್ ಗ್ರಿಡ್​ನಲ್ಲಿ ಹೊತ್ತಿ ಉರಿದ ಬೆಂಕಿ
ಪವರ್ ಗ್ರಿಡ್​ನಲ್ಲಿ ಹೊತ್ತಿ ಉರಿದ ಬೆಂಕಿ
Follow us
sandhya thejappa
|

Updated on: Apr 20, 2021 | 5:12 PM

ಹಾವೇರಿ: ಶಾರ್ಟ್ ಸರ್ಕ್ಯೂಟ್​ನಿಂದ ಪವರ್ ಗ್ರಿಡ್​ನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಈ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಬಳಿ ನಡೆದಿದೆ. ಹೊತ್ತಿ ಉರಿದ ಬೆಂಕಿಯಿಂದ ಪವರ್ ಗ್ರಿಡ್​ನಲ್ಲಿದ್ದ ಕೆಲವು ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಪವರ್ ಗ್ರಿಡ್​ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗದೆ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ತೆಲಂಗಾಣದ ನಾಚಾರಂ ಮಲ್ಲಾಪೂರ ಲೋಟಸ್ ಇಂಡಸ್ಟ್ರಿಯಲ್ ಏರಿಯಾದಲ್ಲೂ ಅಗ್ನಿ ಅವಘಡ ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಪ್ಲಾಸ್ಟಿಕ್, ಫ್ಯಾಬ್ರಿಕ್ ವಸ್ತುಗಳ ಶೇಖರಣೆಯಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಉರಿದಿದ್ದು, ಅಕ್ಕಪಕ್ಕದ ಗೋದಾಮು, ಫ್ಯಾಕ್ಟರಿಗಳಿಂದ ನೌಕರರನ್ನು ತೆರವುಗೊಳಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಇನ್ನು ನಾಲ್ಕು ಅಗ್ನಿಶಾಮಕ ಇಂಜಿನ್​ಗಳ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.

ಟಿಪ್ಪರ್ ಲಾರಿ ಡಿಕ್ಕಿ, ಎರಡು ಕಾಲುಗಳಿಗೆ ಗಾಯ ರಸ್ತೆ ದಾಟುವಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಿಪ್ಪಮ್ಮ ಎಂಬ ವೃದ್ದೆ ತೀವ್ರಗಾಯಗೊಂಡಿದ್ದಾರೆ. ಈ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ಕಾಲುಗಳು ತೀವ್ರ ಗಾಯಗೊಂಡ 69 ವರ್ಷದ ವೃದ್ಧೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಟಿಪ್ಪರ್ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ

ಮೌಂಟ್ ಅನ್ನಪೂರ್ಣ ಏರಿದ ದೇಶದ ಮೊದಲ ಮಹಿಳೆ; ಪರ್ವತಾರೋಹಿ ಪ್ರಿಯಾಂಕ ಮೊಹಿತೆ ಹೊಸ ದಾಖಲೆ

(Haveri Electricity grid burned as short Circuit has occurred in Power station)