ಕುಡಿಯುವ ನೀರಿಗೆ ಪರದಾಟ ಪಡುತ್ತಿರುವ ಹಾವೇರಿ ಜನ; ಪರಿಹಾರಕ್ಕೆ ಸ್ಥಳೀಯರ ಆಗ್ರಹ

ಹಾವೇರಿ ಜಿಲ್ಲೆಯಲ್ಲಿ ಹರಿದು ಹೋಗಿರುವ ತುಂಗಭದ್ರಾ ನದಿಯಿಂದ ಹಾವೇರಿ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಾವೇರಿ ತಾಲೂಕಿನ ಕಂಚಾರಗಟ್ಟಿ ಬಳಿ ಇರುವ ತುಂಗಭದ್ರಾ ನದಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ತುಂಗಭದ್ರಾ ನದಿಯಲ್ಲಿ ಈಗಲೂ ಸಾಕಷ್ಟು ಪ್ರಮಾಣದಲ್ಲಿ ನೀರಿದೆ.

ಕುಡಿಯುವ ನೀರಿಗೆ ಪರದಾಟ ಪಡುತ್ತಿರುವ ಹಾವೇರಿ ಜನ; ಪರಿಹಾರಕ್ಕೆ ಸ್ಥಳೀಯರ ಆಗ್ರಹ
ತುಂಗಭದ್ರಾ ನದಿ
Follow us
sandhya thejappa
|

Updated on: Apr 15, 2021 | 1:37 PM

ಹಾವೇರಿ: ಜಿಲ್ಲೆಯಲ್ಲಿ ನೀರಿಗೇನೂ ಕೊರತೆ ಇಲ್ಲ. ಆದರೂ ಹಾವೇರಿ ನಗರದ ಜನರು ಕುಡಿಯುವ ನೀರು ಸಿಗದೆ ಪರದಾಡುತ್ತಿದ್ದಾರೆ. ನಗರಕ್ಕೆ ನೀರು ಪೂರೈಕೆ ಮಾಡುವ ತುಂಗಭದ್ರಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಆದರೆ ನಗರದ ಜನತೆಗೆ ಮಾತ್ರ ಅದ್ಯಾಕೋ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಮರಳಿನ ಚೀಲ ಹಾಕಿ ನೀರು ನಿಲ್ಲಿಸುವ ಪ್ರಯತ್ನ ಮಾಡಿರುವುದು ಬಿಟ್ಟರೆ ಮರಳಿ ಅತ್ತ ಕಣ್ಣು ಹಾಯಿಸಿದಂತೆ ಕಾಣುತ್ತಿಲ್ಲ.

ಹಾವೇರಿ ಜಿಲ್ಲೆಯಲ್ಲಿ ಹರಿದು ಹೋಗಿರುವ ತುಂಗಭದ್ರಾ ನದಿಯಿಂದ ಹಾವೇರಿ ನಗರಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಾವೇರಿ ತಾಲೂಕಿನ ಕಂಚಾರಗಟ್ಟಿ ಬಳಿ ಇರುವ ತುಂಗಭದ್ರಾ ನದಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ತುಂಗಭದ್ರಾ ನದಿಯಲ್ಲಿ ಈಗಲೂ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಆದರೆ ನಗರದ ಜನತೆಗೆ ಮಾತ್ರ ಸಮರ್ಪಕವಾಗಿ ಕುಡಿಯುವುದಕ್ಕೆ ನೀರು ಸಿಗುತ್ತಿಲ್ಲ. ಕೆಲವೆಡೆ ಮೂರ್ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದರೆ, ಕೆಲವೆಡೆ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ಹೀಗಾಗಿ ನಗರದ ಜನರು ಸಮರ್ಪಕವಾಗಿ ಕುಡಿಯುವ ನೀರು ಸಿಗದೆ ಕಂಗಾಲಾಗಿದ್ದಾರೆ.

ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರಿದೆ. ಆದರೆ ನೀರು ಹರಿದು ಹೋದರೆ ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ಆಗಲಿದೆ ಅಂತಾ ನಗರಸಭೆ ಅಧಿಕಾರಿಗಳು ಮರಳಿನ ಚೀಲವನ್ನಿಟ್ಟು ನದಿಯಲ್ಲಿ ಹರಿದು ಹೋಗುವ ನೀರು ನಿಲ್ಲಿಸಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಮರಳಿನ ಚೀಲವಿಟ್ಟಿದ್ದು ಬಿಟ್ಟರೆ ಮರಳಿ ಅತ್ತ ಕಣ್ಣು ಹಾಯಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಯಾರೋ ಮರಳಿನ ಚೀಲಗಳನ್ನು ತೆಗೆದು ನೀರು ಹರಿಬಿಟ್ಟಿದ್ದಾರೆ. ಜೊತೆಗೆ ರೈತರು ತಮ್ಮ ತಮ್ಮ ಜಮೀನುಗಳಿಗೆ ನದಿಯಿಂದ ಪಂಪ್ ಸೆಟ್​ಗಳ ಮೂಲಕ ನೀರು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲಿದೆ. ಈಗಲೆ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮರಳಿನ ಚೀಲ ತೆಗೆದು ನೀರು ಹರಿಯಬಿಡದಂತೆ ನೋಡಿಕೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರದಲ್ಲಿ ಅಲೋವೆರಾ ಜ್ಯೂಸ್​ಗೆ ಭಾರಿ ಡಿಮ್ಯಾಂಡ್..

ಮೊದಲ ಬಾರಿಗೆ ಅರಬ್ ರಾಷ್ಟ್ರಕ್ಕೆ ಆಪೋಸ್ ಮಾವು; ಧಾರವಾಡ ರೈತರು ಫುಲ್ ಖುಷ್

(Haveri People struggling for drinking water and urges municipal to facilitate drinking water)