ಚಿಕ್ಕಬಳ್ಳಾಪುರದಲ್ಲಿ ಅಲೋವೆರಾ ಜ್ಯೂಸ್​ಗೆ ಭಾರಿ ಡಿಮ್ಯಾಂಡ್..

ಇಷ್ಟು ದಿನ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಕುಡಿಯುತ್ತಿದ್ದ ಜನ ಈಗ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಾರೆ. ಕಾರಣ ಅಲೋವೆರಾ ಜ್ಯೂಸ್​ನಲ್ಲಿ ಆರೋಗ್ಯಕ್ಕೆ ಬೇಕಾದ ಔಷಧಿಯ ಗುಣಗಳಿದ್ದು, ಹತ್ತು ಹಲವು ಕಾಯಿಲೆಗಳಿಗೆ ರಾಮಬಾಣ ಎನ್ನುವ ಪ್ರಚಾರ ಫಲಕ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರುಗಡೆ ಅಲೋವೆರಾ ಜ್ಯೂಸ್ ಭರ್ಜರಿಯಾಗಿ ವ್ಯಾಪಾರವಾಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಅಲೋವೆರಾ ಜ್ಯೂಸ್​ಗೆ ಭಾರಿ ಡಿಮ್ಯಾಂಡ್..
ಅಲೋವೆರಾ ಜ್ಯೂಸ್​ನ ಸವಿಯುತ್ತಿರುವ ಜನರು


ಚಿಕ್ಕಬಳ್ಳಾಪುರ: ಅಲೋವೆರಾ ಸಸ್ಯಕ್ಕೂ ಭಾರತೀಯ ಸಂಪ್ರದಾಯಕ್ಕೂ ಅದೇನೊ ಒಂಥರಾ ನಂಟು. ಹಳ್ಳಿಗಳ ಮಣ್ಣಿನ ಮನೆಯಿಂದ ದಿಲ್ಲಿಯ ಅಪಾರ್ಟ್ಮೆಂಟ್​ಗಳ ವರೆಗೂ ಅಲೋವೆರಾ ಸಾಮಾನ್ಯವಾಗಿ ಇದ್ದೆ ಇರುತ್ತದೆ. ಆದರೆ ಅಲೋವೆರಾವನ್ನು ಮನೆಯಲ್ಲಿ ಏಕೆ ಇಡುತ್ತಾರೆ. ಅದರ ಮಹತ್ವ ಏನು ಅಂತ ಬಹುತೇಕರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಹಿರಿಯರಿಗೆ ಇದರ ಮಹತ್ವ ಗೊತ್ತಿರುತ್ತದೆ. ಹಲವು ಕಾಯಿಲೆಗಳಿಗೆ ರಾಮಭಾಣವಾಗಿರುವ ಅಲೋವೆರಾ ರಸ್ತೆ ಬದಿಯಲ್ಲಿ ಜ್ಯೂಸ್ ರೀತಿಯಲ್ಲಿ ಸಿಗುತ್ತಿದೆ. ಇದು ಅಮೃತಕ್ಕೆ ಸಮಾನ ಅಂತ ಕೇಳಿದ್ದೆ ತಡ ಜಿಲ್ಲೆಯ ಜನರು ನನಗು ಇರಲಿ.. ನಮ್ಮ ಮನೆಯವರಿಗೂ ಇರಲಿ ಅಂತ ಮುಗಿಬಿದ್ದು ಅದನ್ನು ಕುಡಿಯುತ್ತಿದ್ದಾರೆ.

ಇಷ್ಟು ದಿನ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಕುಡಿಯುತ್ತಿದ್ದ ಜನ ಈಗ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಾರೆ. ಕಾರಣ ಅಲೋವೆರಾ ಜ್ಯೂಸ್​ನಲ್ಲಿ ಆರೋಗ್ಯಕ್ಕೆ ಬೇಕಾದ ಔಷಧಿಯ ಗುಣಗಳಿದ್ದು, ಹತ್ತು ಹಲವು ಕಾಯಿಲೆಗಳಿಗೆ ರಾಮಬಾಣ ಎನ್ನುವ ಪ್ರಚಾರ ಫಲಕ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರುಗಡೆ ಅಲೋವೆರಾ ಜ್ಯೂಸ್ ಭರ್ಜರಿಯಾಗಿ ವ್ಯಾಪಾರವಾಗುತ್ತಿದೆ. ಬಿರು ಬಿಸಿಲು ಅಂತ ನೀರು ಕುಡಿಯಲು ಆಚೆ ಬಂದವರು ಈಗ ಅಲೋವೆರಾ ಜ್ಯೂಸ್​ಗೆ ಮೊರೆ ಹೊಗುತ್ತಿದ್ದಾರೆ.

ಹೈದರಾಬಾದ್ ಮೂಲದ ಕೆಲವರು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದು, ಅಲ್ಲಿಂದಲೆ ಅಲೋವೆರಾ ಸಸಿಯನ್ನು ತಂದು ರಸ್ತೆ ಬದಿಯಲ್ಲಿ ಸ್ಟಾಲ್​ವೊಂದನ್ನು ಹಾಕಿ ಸ್ಥಳದಲ್ಲೆ ಅಲೋವೆರಾ ಜ್ಯೂಸ್ ಮಾಡಿ ಕೊಡುತ್ತಿದ್ದಾರೆ. ಒಂದು ಲೋಟಕ್ಕೆ 60 ರೂಪಾಯಿ ದರ ನಿಗದಿಪಡಿಸಿದ್ದು, ಜನ ಹಣಕ್ಕೆ ಬೆಲೆ ಕೊಡದೆ ಸ್ಥಳದಲ್ಲೆ ಜ್ಯೂಸ್ ಕುಡಿದು ರುಚಿ ನೋಡುತ್ತಿದ್ದಾರೆ. ಮನೆಯ ಸುತ್ತಮುತ್ತ ಅಲೋವೆರಾ ಇದ್ದರೂ ಒಂದು ದಿನ ರುಚಿ ನೋಡದ ಜನ ಈಗ ಹಣ ನೀಡಿ ಜ್ಯೂಸ್ ಕುಡಿಯುತ್ತಿದ್ದಾರೆ. ಜ್ಯೂಸ್ ಕುಡಿಯುವುದರಿಂದ ಬಿಪಿ, ಶುಗರ್, ತೂಕ ನಷ್ಟ, ಸೌಂದರ್ಯಕ್ಕೆ ಸೇರಿದಂತೆ ಹತ್ತು ಹಲವು ಕಾಯಿಲೆಗಳಿಗೆ ಉತ್ತಮ ಆಯುರ್ವೇದ ಔಷಧಿ ಅಂತ ಜನ ಅಲೋವೆರಾ ಜ್ಯೂಸ್ ಸವಿಯುತ್ತಿದ್ದಾರೆ.

ಅಲೋವೆರಾ ಜ್ಯೂಸ್ ಸ್ಟಾಲ್

ಶೇಖರಿಸಿಟ್ಟ ಅಲೋವೆರಾ

ಅತಿಯಾದರೆ ಅಮೃತವೂ ವಿಷ ಆಗುತ್ತೆ ಎನ್ನುವ ಹಾಗೆ ಅಲೋವೆರಾ ಜ್ಯೂಸ್​ನ ಅತಿಯಾಗಿ ಕುಡಿದರೆ ದೇಹದಲ್ಲಿ ಅಡ್ಡಪರಿಣಾಮಗಳು ಆಗುತ್ತದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಅದರ ಅಡ್ಡಪರಿಣಾಮಗಳನ್ನು ತಿಳಿಸದೆ ಕೇವಲ ವ್ಯಾಪಾರಕ್ಕಾಗಿ ಅದರ ಪ್ರಯೋಜನಗಳನ್ನು ಮಾತ್ರ ತಿಳಿಸಿ ಕೇಳಿದಷ್ಟು ಜ್ಯೂಸ್ ಕೊಟ್ಟು ಹಣ ಪಡೆಯುತ್ತಿದ್ದಾರೆ. ಯಾವುದಕ್ಕೂ ಆಹಾರ ಸುರಕ್ಷತಾಧಿಕಾರಿಗಳು, ಅಲೋವೆರಾ ಜ್ಯೂಸ್​ನ ಸುರಕ್ಷತೆಯ ಬಗ್ಗೆ ಪರೀಕ್ಷೆ ನಡೆಸಿ, ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಇದನ್ನೂ ಓದಿ

ರಾಜ್ಯದ ಏಕೈಕ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕಾಡುತ್ತಿದೆ ಸಿಬ್ಬಂದಿ ಕೊರತೆ

ಸಾರಿಗೆ ನೌಕರರ ಪತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ರಾಕಿಂಗ್​ ಸ್ಟಾರ್​.. ಮುಷ್ಕರಕ್ಕೆ ಕೈ ಜೋಡಿಸುತ್ತಾರಾ ಯಶ್?

(huge demand for Aloe vera juice in Chikkaballapur)

Published On - 12:36 pm, Thu, 15 April 21

Click on your DTH Provider to Add TV9 Kannada