ಮುಷ್ಕರದಿಂದ ಹೆವಿ ಲಾಸ್.. ಪ್ರತಿಭಟನೆ ಬಿಡಿ ಕೆಲಸ ಆರಂಭಿಸಿ, ಸಂಬಳ ಹೆಚ್ಚಿಸುವ ಬಗ್ಗೆ ಆಮೇಲೆ ಮಾತ್ನಾಡುವೆ -ಲಕ್ಷ್ಮಣ ಸವದಿ

ಇನ್ನು ಈ ಬಗ್ಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಎಸ್ಮಾ ಬಗ್ಗೆಯೂ ನಾವು ಚಿಂತನೆ ಮಾಡಿಲ್ಲ. ತೆಲಂಗಾಣದ ಮಾದರಿ ಹಠಕ್ಕೆ ಬೀಳಬೇಡಿ. ಸರ್ಕಾರ ಮೃದು ಧೋರಣೆಯಲ್ಲಿದೆ. ಪ್ರತಿಭಟನೆ ಬಿಡಿ ಕೆಲಸ ಆರಂಭಿಸಿ ಸಂಬಳ ಹೆಚ್ಚು ಮಾಡುವ ಬಗ್ಗೆ ನಾವು ಮಾತನಾಡುತ್ತೇವೆ -ಲಕ್ಷ್ಮಣ ಸವದಿ

ಮುಷ್ಕರದಿಂದ ಹೆವಿ ಲಾಸ್.. ಪ್ರತಿಭಟನೆ ಬಿಡಿ ಕೆಲಸ ಆರಂಭಿಸಿ, ಸಂಬಳ ಹೆಚ್ಚಿಸುವ ಬಗ್ಗೆ ಆಮೇಲೆ ಮಾತ್ನಾಡುವೆ -ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
Follow us
ಆಯೇಷಾ ಬಾನು
|

Updated on:Apr 15, 2021 | 12:00 PM

ಬೀದರ್: ಕಳೆದ 9 ದಿನಗಳಿಂದ 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ದಿನೇದಿನೆ ಈ ಮುಷ್ಕರ ತೀವ್ರ ಗೊಳ್ಳುತ್ತಿದೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರದಿಂದ 170 ಕೋಟಿ ರೂ. ಲಾಸ್ ಆಗಿದೆ ಎಂದು ಹುಮ್ನಾಬಾದ್‌ನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ 59 KSRTC ಬಸ್‌ಗಳ ಮೇಲೆ ಕಲ್ಲು ಎಸೆಯಲಾಗಿದೆ. ಈ ರೀತಿ ಕಲ್ಲು ತೂರುವುದು ಸರಿಯಲ್ಲ. ಕಲ್ಲು ತೂರುವವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ರು. ರಾಜ್ಯದಲ್ಲಿ ಇಂದು 4,500 ಸಾರಿಗೆ ಬಸ್ ಸಂಚರಿಸಲಿವೆ. ನಾಳೆ 5 ಸಾವಿರ ಬಸ್‌ಗಳು ಓಡಾಡುವ ವಿಶ್ವಾಸ ಇದೆ. ಆದ್ರೆ ಎಲ್ಲಾ ಕಡೆ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದಲ್ಲಿ 24 ಸಾವಿರ ಖಾಸಗಿ ಬಸ್‌ಗಳು ರಸ್ತೆಗಿಳಿದಿವೆ. ಇಲ್ಲಿಯವರೆಗೆ ಮುಷ್ಕರದಿಂದ 170 ಕೋಟಿ ರೂ. ಲಾಸ್ ಆಗಿದೆ. ನಮ್ಮಲ್ಲಿ 25 ಸಾವಿರ ಬಸ್ ಇದೆ. 1.30 ಸಾವಿರ ಸಿಬ್ಬಂದಿ ಇದ್ದಾರೆ. ಖಾಸಗಿಯವರಿಗೆ ಕೊಟ್ಟರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಖಾಸಗೀಕರಣ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ.

ಎಸ್ಮಾ ಬಗ್ಗೆಯೂ ನಾವು ಚಿಂತನೆ ಮಾಡಿಲ್ಲ ಇನ್ನು ಈ ಬಗ್ಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಎಸ್ಮಾ ಬಗ್ಗೆಯೂ ನಾವು ಚಿಂತನೆ ಮಾಡಿಲ್ಲ. ತೆಲಂಗಾಣದ ಮಾದರಿ ಹಠಕ್ಕೆ ಬೀಳಬೇಡಿ. ಸರ್ಕಾರ ಮೃದು ಧೋರಣೆಯಲ್ಲಿದೆ. ಪ್ರತಿಭಟನೆ ಬಿಡಿ ಕೆಲಸ ಆರಂಭಿಸಿ ಸಂಬಳ ಹೆಚ್ಚು ಮಾಡುವ ಬಗ್ಗೆ ನಾವು ಮಾತನಾಡುತ್ತೇವೆ. ಭಿಕ್ಷಾಟನೆ ಮಾಡಿಸಿರುವುದು ಅವಮಾನಕರ. ಇದು ಖಂಡನೀಯ ಹಾಗೂ ಕಾನೂನುಬಾಹಿರ. ಮಹಿಳೆಯರು, ಮಕ್ಕಳನ್ನು ಕಳಿಸಿ ಭಿಕ್ಷಾಟನೆ ಮಾಡಿಸಿದ್ದಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು, ಇದು ಅವಮಾನಕರ ಎಂದು ಹುಮ್ನಾಬಾದ್‌ನಲ್ಲಿ ಲಕ್ಷ್ಮಣ ಸವದಿ ನೌಕರನ್ನುದ್ದೇಶಿಸಿ ಮಾತನಾಡಿದ್ರು.

ಇದನ್ನೂ ಓದಿ: KSRTC BMTC Strike: ಸಾರಿಗೆ ಸಿಬ್ಬಂದಿಯಿಂದ 60 ಬಸ್​ಗಳ ಮೇಲೆ ದಾಳಿ; ಪೊಲೀಸ್ ಕ್ರಮ ಗ್ಯಾರೆಂಟಿ ಎಂದ ಸಚಿವ ಲಕ್ಷ್ಮಣ ಸವದಿ

Published On - 11:59 am, Thu, 15 April 21