ಕೊರೊನಾ ಹಿಮ್ಮೆಟ್ಟಿಸಲು ರಾಜ್ಯದ ಎಲ್ಲಾ ಮನೆ ಹಾಗೂ ದೇವಸ್ಥಾನಗಳಲ್ಲಿ ಅಗ್ನಿಹೋತ್ರ ಮಾಡಿಸಿ: ಚಂದ್ರಶೇಖರ ಶಿವಾಚಾರ್ಯ ಶ್ರೀ
ಅಗ್ನಿಹೋತ್ರದಿಂದ ಕೊರೊನಾ ವೈರಾಣುವನ್ನು ಹಿಮ್ಮೆಟ್ಟಿಸಲು ಸಾಧ್ಯ. ಇದನ್ನು ನಾವು ಪ್ರಯೋಗ ಮಾಡಿ ನೋಡಿದ್ದೇವೆ. ರಾಜ್ಯದ ಎಲ್ಲಾ ದೇಗುಲ, ಮನೆಗಳಲ್ಲಿ ಅಗ್ನಿಹೋತ್ರ ಮಾಡಿಸಬೇಕು. ಅಗ್ನಿಹೋತ್ರ ಮಾಡಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಬೇಕು: ಚಂದ್ರಶೇಖರ ಶಿವಾಚಾರ್ಯ ಶ್ರೀ

ಬೆಳಗಾವಿ: ದೇಶದಲ್ಲಿ ಕೊರೊನಾ ವೈರಾಣುವಿನ ಎರಡನೇ ಅಲೆ ನಿರೀಕ್ಷೆಗಿಂತಲೂ ಹೆಚ್ಚು ಆತಂಕಕಾರಿಯಾಗಿ ಪರಿಣಾಮ ಬೀರುತ್ತಿದೆ. ಒಂದೆಡೆ ಯುವ ಸಮುದಾಯದಲ್ಲಿ ಕೊರೊನಾ ಸೋಂಕು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದು, ಇನ್ನೊಂದೆಡೆ ಕೊರೊನಾ ವೈರಾಣು ಎರಡೆರೆಡು ಬಾರಿ ರೂಪಾಂತರಗೊಂಡಿದೆ ಎಂದು ಅಧ್ಯಯನಗಳು ತಿಳಿಸಿವೆ. ಕೊರೊನಾ ಹಬ್ಬುವಿಕೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣಗಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾವನ್ನು ನಿಭಾಯಿಸಲು ಅಗ್ನಿಹೋತ್ರದಿಂದ ಸಾಧ್ಯ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಅಗ್ನಿಹೋತ್ರದಿಂದ ಕೊರೊನಾ ವೈರಾಣುವನ್ನು ಹಿಮ್ಮೆಟ್ಟಿಸಲು ಸಾಧ್ಯ. ಇದನ್ನು ನಾವು ಪ್ರಯೋಗ ಮಾಡಿ ನೋಡಿದ್ದೇವೆ. ರಾಜ್ಯದ ಎಲ್ಲಾ ದೇಗುಲ, ಮನೆಗಳಲ್ಲಿ ಅಗ್ನಿಹೋತ್ರ ಮಾಡಿಸಬೇಕು. ಅಗ್ನಿಹೋತ್ರ ಮಾಡಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಬೇಕು. ಕೇಂದ್ರ ಸಚಿವ ಜೋಶಿ ಈ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ಧನ್ವಂತರಿ ಹೋಮ ಕಾರ್ಯಕ್ರಮದ ವೇಳೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಗ್ನಿಹೋತ್ರದ ಬಗ್ಗೆ ಮಾತನಾಡಿದ್ದು, ಇದು ಕೊರೊನಾವನ್ನು ಹಿಮ್ಮೆಟ್ಟಿಸಲು ಉತ್ತಮ ಮಾರ್ಗವಾಗಲಿದೆ. ಹೀಗಾಗಿ ರಾಜ್ಯದ ಎಲ್ಲಾ ಮನೆ ಹಾಗೂ ದೇವಸ್ಥಾನಗಳಲ್ಲಿ ಅಗ್ನಿಹೋತ್ರ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಕೊರೊನಾ ಆರಂಭಿಕ ಹಂತದಲ್ಲೂ ಅಗ್ನಿಹೋತ್ರ ಸೇರಿದಂತೆ ಬೇರೆ ಬೇರೆ ಧಾರ್ಮಿಕ ಕಾರ್ಯಗಳಿಂದ ಕೊರೊನಾ ಹಿಮ್ಮೆಟ್ಟಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ: ದೇಶಿ ರೂಪಾಂತರಿ.. ಭಾರತದಲ್ಲೇ ಎರಡೆರಡು ಬಾರಿ ರೂಪಾಂತರವಾಗಿದೆ ಕೊರೊನಾ ವೈರಾಣು! ಹೊಸ ಅಧ್ಯಯನದಿಂದ ಬಯಲಾಯ್ತು ಮಾಹಿತಿ
Harappan Civilization Food Culture: ಹರಪ್ಪ ನಾಗರಿಕತೆ ಕಾಲದ 4000 ವರ್ಷಗಳ ಹಿಂದಿನ ಬಹುಧಾನ್ಯಗಳ ಲಾಡು ಪತ್ತೆ