AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ವೃತ್ತಿ ಜೊತೆಗೆ ಹಾವು ಹಿಡಿಯುವ ಪ್ರವೃತ್ತಿ; ಹಾವೇರಿ ಕಾನ್​ಸ್ಟೇಬಲ್ ಕೆಲಸಕ್ಕೆ ಸ್ಥಳೀಯರಿಂದ ಮೆಚ್ಚುಗೆ

ಕೊರೊನಾ ಕರ್ತವ್ಯದ ಜೊತೆಗೆ ರಾಮಪ್ಪ ಈಗಲೂ ಹಾವು ಇದೆ ಎಂದು ಯಾರಾದರೂ ಕರೆ ಮಾಡಿದರೆ ತಕ್ಷಣವೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಹಾವು ಇದ್ದಲ್ಲಿಗೆ ಹೋಗಿ ಹಾವು ಹಿಡಿದು ಹಾವಿನ ರಕ್ಷಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಜನರ ಪ್ರಾಣ ಕೂಡ ರಕ್ಷಣೆ ಮಾಡುತ್ತಿದ್ದಾರೆ.

ಪೊಲೀಸ್ ವೃತ್ತಿ ಜೊತೆಗೆ ಹಾವು ಹಿಡಿಯುವ ಪ್ರವೃತ್ತಿ; ಹಾವೇರಿ ಕಾನ್​ಸ್ಟೇಬಲ್ ಕೆಲಸಕ್ಕೆ ಸ್ಥಳೀಯರಿಂದ ಮೆಚ್ಚುಗೆ
ಪೊಲೀಸ್ ಕಾನ್​ಸ್ಟೇಬಲ್ ರಾಮಪ್ಪ ಹಾವು ಹಿಡಿಯುತ್ತಿರುವ ದೃಶ್ಯ
preethi shettigar
|

Updated on: May 03, 2021 | 11:10 AM

Share

ಹಾವೇರಿ: ಪೊಲೀಸ್ ಇಲಾಖೆ ಎಂದರೆ ಸಾಕು ಅದು ಬಿಡುವಿಲ್ಲದ ಕೆಲಸ ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಅದರಲ್ಲೂ ಕೊರೊನಾ ಶುರುವಾದಗಿನಿಂದಲೂ ಪೊಲೀಸರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಇಂತಹ ಬಿಡುವಿಲ್ಲದ ಪೊಲೀಸ್ ವೃತ್ತಿ ಮಾಡುತ್ತಿರುವ ಹಾವೇರಿಯ ಕಾನ್​ಸ್ಟೇಬಲ್ ಒಬ್ಬರು ತಮ್ಮ ವೃತ್ತಿ ಜೀವನದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿಯೂ ಕೂಡ ತೊಡಗಿಕೊಂಡಿದ್ದು, ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಘಟಕದಲ್ಲಿ ಕಾನ್​ಸ್ಟೇಬಲ್ ಆಗಿ ಕಳೆದ ಕೆಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ರಾಮಪ್ಪ ಹರಿಜನ. ಜಿಲ್ಲೆಯಲ್ಲಿ ಸ್ನೇಕ್ ರಾಮಪ್ಪ ಎಂದೇ ಹೆಸರುವಾಸಿ ಆಗಿದ್ದಾರೆ. ಇದಕ್ಕೆ ಕಾರಣ ರಾಮಪ್ಪ ಯಾರದೇ ತೋಟದಲ್ಲಿ ಅಥವಾ ಮನೆಗಳಲ್ಲಿ ಹಾವು ಕಾಣಿಸಿಕೊಂಡರು ಅವುಗಳನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಡುವ ಕಾರ್ಯ ಮಾಡುತ್ತಿದ್ದಾರೆ.

ಆದರೆ ಕಳೆದೊಂದು ವರ್ಷದಿಂದ ಕೊರೊನಾ ಹೆಚ್ಚಳವಾಗಿದೆ. ಅದರಲ್ಲೂ ಇತ್ತೀಚೆಗೆ ಕೊರೊನಾದ ಪ್ರಸರಣ ಮತ್ತಷ್ಟು ಹೆಚ್ಚಾಗಿದ್ದು, ಸೊಂಕು ಹರಡುವಿಕೆಯನ್ನು ಕಡಿಮೆ ಮಾಡಲು ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ. ಹೀಗಾಗಿ ಒಂದೆಡೆ ಇಲಾಖೆಯ ವೃತ್ತಿ, ಮತ್ತೊಂದೆಡೆ ಹಾವು ಹಿಡಿದು ಕಾಡಿಗೆ ಬಿಡುವ ಕಾಯಕದಿಂದ ಕಾನ್​ಸ್ಟೇಬಲ್ ರಾಮಪ್ಪನವರಿಗೆ ಈಗ ಹೆಚ್ಚಿನ ಕೆಲಸ ಶುರುವಾಗಿದೆ. ಕೊರೊನಾ ಕರ್ತವ್ಯದ ಜೊತೆಗೆ ರಾಮಪ್ಪ ಈಗಲೂ ಹಾವು ಇದೆ ಎಂದು ಯಾರಾದರೂ ಕರೆ ಮಾಡಿದರೆ ತಕ್ಷಣವೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಹಾವು ಇದ್ದಲ್ಲಿಗೆ ಹೋಗಿ ಹಾವು ಹಿಡಿದು ಹಾವಿನ ರಕ್ಷಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಜನರ ಪ್ರಾಣ ಕೂಡ ರಕ್ಷಣೆ ಮಾಡುತ್ತಿದ್ದಾರೆ.

police constable

ಪೊಲೀಸ್ ಕಾನ್​ಸ್ಟೇಬಲ್ ರಾಮಪ್ಪ

ರೈತರ ಜಮೀನಿನಲ್ಲಿರುವ ಮೆಕ್ಕೆಜೋಳದ ತೆನೆಗಳ ರಾಶಿಯಲ್ಲಿ ಹೆಚ್ಚಾಗಿ ಹಾವು ಕಾಣಿಸಿಕೊಳ್ಳುತಿವೆ. ಉಳಿದಂತೆ ಜನರ ಮನೆ, ಹಿತ್ತಿಲು ಸೇರಿದಂತೆ ಅಲ್ಲಲ್ಲಿ ಹಾವು ಕಾಣಿಸಿಕೊಳ್ಳುತ್ತಿದೆ. ನಾಗರಹಾವು, ಕೊಳಕುಮಂಡಲ, ಕೇರೆ ಹಾವು ಹೀಗೆ ಬೇರೆ ಬೇರೆ ಬಗೆಯ ಹಾವುಗಳು ಕಾಣಿಸಿಕೊಳ್ಳುತ್ತವೆ. ಜಿಲ್ಲೆಯಲ್ಲಿ ಎಲ್ಲಿಯೇ ಹಾವು ಕಾಣಿಸಿಕೊಂಡರು ಜನರು ಕಾನ್​ಸ್ಟೇಬಲ್ ರಾಮಪ್ಪಗೆ ಕರೆ ಮಾಡಿದರೆ ಸಾಕು ತಕ್ಷಣವೆ ಅಲ್ಲಿಗೆ ದಾವಿಸಿ ಹಾವು ಎಂಥದ್ದೆ ಇದ್ದರು ಅದನ್ನು ಸುರಕ್ಷಿತವಾಗಿ ಹಿಡಿತಾರೆ ಎಂದು ಶಿಕ್ಷಕ ಜಗದೀಶ ಚವಟಗಿ ಹೇಳಿದ್ದಾರೆ.

ಡಿಎಆರ್ ಆಫೀಸ್ ಮುಂದೆ ಆಫೀಸ್​ಗೆ ಬರುವ ಸಿಬ್ಬಂದಿ ಮತ್ತು ಜನರನ್ನ ತಪಾಸಣೆ ಮಾಡಿ ಒಳಗೆ ಕಳಿಸುವ ಡ್ಯೂಟಿ ಮಾಡುತ್ತಿರುವ ರಾಮಪ್ಪ ಇದರ ಜೊತೆಗೆ ಆಗಾಗ ಜನರು ಅನಗತ್ಯವಾಗಿ ಓಡಾಡದಂತೆ ತಡೆಯುವುದು, ಕೊರೊನಾ ಜಾಗೃತಿ ಮೂಡಿಸುವ ಕೆಲಸ ಹೀಗೆ ಹತ್ತು ಹಲವು ಕೆಲಸಗಳನ್ನ ನಿರ್ವಹಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಮಾತ್ರವಲ್ಲ ವೃತ್ತಿಗೆ ಸೇರಿದಾಗಿನಿಂದಲೂ ವೃತ್ತಿ ಜೊತೆಗೆ ಹಾವು ಹಿಡಿದು ರಕ್ಷಣೆ ಮಾಡುವ ಪ್ರವೃತ್ತಿಯನ್ನ ಬೆಳೆಸಿಕೊಂಡಿದ್ದಾರೆ. ಈವರೆಗೆ ಸಾವಿರಾರು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಈಗ ಕೊರೊನಾ ಸಮಯದ ಡ್ಯೂಟಿಯ ಜೊತೆಗೆ ಹಾವು ಹಿಡಿದು ಕಾಡಿಗೆ ಬಿಡುವ ಪ್ರವೃತ್ತಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ಲಸಿಕೆ ಕುರಿತು ಅಪಪ್ರಚಾರ; ಅಪರಿಚಿತ ಮುಸ್ಲಿಂ ಮಹಿಳೆ ವಿರುದ್ಧ ಕಾರವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

ಈ ಪೊಲೀಸ್ ಕಾನ್ಸ್‌ಟೇಬಲ್ ವಿವಾಹ ಆಮಂತ್ರಣ ಪತ್ರಿಕೆ ಎಲ್ಲರಿಗೂ ಮಾದರಿ! ಹೇಗೆ ಗೊತ್ತಾ?

(Haveri Police Constable getting applauds from public as he captures snakes and creating awareness about Covid)

ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು