ಹಾವೇರಿ: ಮನೆ ದೋಚಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಕಂಬಕ್ಕೆ ಕಟ್ಟಿ ಧರ್ಮದೇಟು

| Updated By: ವಿವೇಕ ಬಿರಾದಾರ

Updated on: Oct 15, 2023 | 1:00 PM

ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಶನಿವಾರ ರಾತ್ರಿ ಮನೆ ದೋಚಿದ ಕಳ್ಳ ಪರಾರಿಯಾಗುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಹಾವೇರಿ: ಮನೆ ದೋಚಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಕಂಬಕ್ಕೆ ಕಟ್ಟಿ ಧರ್ಮದೇಟು
ಕಳ್ಳ
Follow us on

ಹಾವೇರಿ ಅ.15: ಮನೆ ದೋಚಲು ಬಂದ ಕಳ್ಳನಿಗೆ (Thief) ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ (Haveri) ತಾಲೂಕು ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಕಬ್ಬೂರು ಗ್ರಾಮದ ಸಿದ್ದಪ್ಪ ಒಡ್ಡಿಗೇರಿ ಎಂಬುವರು ಅನ್ಯಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಹೀಗಾಗಿ ಮನೆಗೆ ಬೀಗ ಹಾಕಲಾಗಿತ್ತು. ಇದನ್ನು ಗಮನಿಸಿದ ಕಳ್ಳರು, ಮನೆ ದೋಚಲು ಪ್ಲಾನ್​ ಮಾಡಿದ್ದರು. ಪ್ಲಾನ್​ ಪ್ರಕಾರ ನಿನ್ನೆ (ಅ.14) ರಾತ್ರಿ ಕಳ್ಳತನ ಮಾಡಲು ಮೊನೆಯೊಳಗೆ ನುಗ್ಗಿ, ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ.

ಇದೇ ವೇಳೆ ಹೊಲಗಳಿಗೆ ನೀರು ಹಾಯಿಸಲು ಹೊರಟ ರೈತರು ಇವರನ್ನು ಕಂಡಿದ್ದಾರೆ. ಇವರ ಚಲನ-ವಲನ ಕಂಡು ಅನುಮಾನ ಬಂದು, ವಿಚಾರಿಸಲು ಹೋದಾಗ ಜೊತೆಗಾರನನ್ನು ಬಿಟ್ಟು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಸಿಕ್ಕ ಓಬ್ಬ ಕಳ್ಳನನ್ನು ಎಳೆದೊಯ್ದು ಗ್ರಾಮದ ಬಸವಣ್ಣನ ದೇವಸ್ಥಾನದ ಎದುರಿಗಿನ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಗ್ರಾಮಸ್ಥರ ಕೈಗೆ ಸಿಕ್ಕ ಕಳ್ಳನ ಹೆಸರು ರಾಜಾಭಕ್ಷ್ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಟೈಲ್ಸ್ ಕೆಲಸಕ್ಕೆ ಬಂದು ಜೈನ್ ಮಂದಿರದಲ್ಲಿ ಕಳ್ಳತನ ಮಾಡಿದ್ದ ಆರೊಪಿಗಳು ಅರೆಸ್ಟ್

ಬಾಗಲಗುಂಟೆ ಠಾಣೆ ಪೋಲಿಸರಿಂದ ಕುಖ್ಯಾತ ಮನೆಗಳ್ಳನ ಬಂಧನ

ಬೆಂಗಳೂರು: ಬಾಗಲಗುಂಟೆ ಠಾಣೆ ಪೋಲಿಸರು ಕುಖ್ಯಾತ ಮನೆಗಳ್ಳನನ್ನು ಬಂಧಿಸಿದ್ದಾರೆ. ಅಬ್ಬಿಗೆರೆಯ ಅನಿಲ್ ದೇವ್ (30) ಬಂಧಿತ ಆರೋಪಿ. ಬಂಧಿತ ಕಳ್ಳನಿಂದ 2 ಲಕ್ಷ ಮೌಲ್ಯದ 38 ಗ್ರಾಂ ಚಿನ್ನಾಭರಣ 50 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಅರೋಪಿಈ ಹಿಂದೆ 8 ಮನೆಗಳವು ಪ್ರಕರಣದಲ್ಲಿ ಜೈಲು ಪಾಲಾಗಿದ್ದನು.

ಬಾಗಲಗುಂಟೆ, ಸೋಲದೇವನಹಳ್ಳಿ, ಪೀಣ್ಯಾ ಸೇರಿದಂತೆ ವಿವಿಧ ಪೊಲೀಸ್​​ ಠಾಣೆಗಳಲ್ಲಿ ಒಟ್ಟು 8 ಪ್ರಕರಣ ದಾಖಲಾಗಿತ್ತು. ಜೈಲಿಗೆ ಹೋಗಿ ಬಂದರೂ ಬುದ್ದಿ ಕಲಿಯದೆ ಹಳೆ ಚಾಳಿ ಮುಂದುವರೆಸಿದ್ದಾನೆ. ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ