ಹಾವೇರಿ ಜಿಲ್ಲೆಯ ಯುವಕರಲ್ಲಿ ಹೆಚ್ಚುತ್ತಿದೆ ರಕ್ತದಾನದ ಅರಿವು; ಹೋರಿಯ ಹೆಸರಿನಲ್ಲಿ ರಕ್ತದಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 12, 2023 | 10:24 PM

ರಕ್ತದಾನ ಮಹಾದಾನ ಅಂತಾರೆ, ರಕ್ತದಾನ ಮಾಡುವುದರಿಂದ ಹಲವು ಉಪಯೋಗಗಳು ಇವೆ. ಆದರೆ, ಇಂದಿನ ಯುವಕರು ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ.ನಟ-ನಟಿಯರು, ರಾಜಕಾರಣಿಗಳ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ರಕ್ತದಾನ ಮಾಡುವುದು ಸಹಜ. ಆದರೆ ಹಾವೇರಿ ಜಿಲ್ಲೆಯಲ್ಲಿ ಒಂದು ವಿಶೇಷತೆ ಅಂದರೆ ಮೂಕ ಪ್ರಾಣಿ ಬಸವಣ್ಣನ ಹೆಸರಿನಲ್ಲಿ ದಾನಗಳಲ್ಲಿ ಶ್ರೇಷ್ಟವಾದ ದಾನ ರಕ್ತದಾನ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಯುವಕರಲ್ಲಿ ಹೆಚ್ಚುತ್ತಿದೆ ರಕ್ತದಾನದ ಅರಿವು; ಹೋರಿಯ ಹೆಸರಿನಲ್ಲಿ ರಕ್ತದಾನ
ಹಾವೇರಿಯಲ್ಲಿ ಹೋರಿ ಅಭಿಮಾನಿಗಳಿಂದ ರಕ್ತದಾನ
Follow us on

ಹಾವೇರಿ, ಡಿ.12: ರಕ್ತದಾನ ಮಾಡುವುದರಿಂದ ಹಲವು ಉಪಯೋಗಗಳು ಇವೆ. ಆದರೆ, ಇಂದಿನ ಯುವಕರು ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ಇನ್ನು ನಟ-ನಟಿಯರು, ರಾಜಕಾರಣಿಗಳ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ರಕ್ತದಾನ ಮಾಡುವುದು ಸಹಜ. ಆದರೆ, ಹಾವೇರಿ(Haveri) ಜಿಲ್ಲೆಯಲ್ಲಿ ಒಂದು ವಿಶೇಷತೆ ಅಂದರೆ, ಮೂಕ ಪ್ರಾಣಿ ಬಸವಣ್ಣನ ಹೆಸರಿನಲ್ಲಿ ದಾನಗಳಲ್ಲಿ ಶ್ರೇಷ್ಟವಾದ ದಾನವಾದ ರಕ್ತದಾನ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ.

ಅಭಿಮಾನದ ಹೆಸರಲ್ಲಿ ರಕ್ತದಾನದ ಶಿಬಿರಗಳ ಆಯೊಜನೆ

ಜಿಲ್ಲೆಯಲ್ಲಿ ಧನ ಬೇದರಿಸುವ ಹಬ್ಬ (ಹೋರಿ ಹಬ್ಬ) ದ ಅಭಿಮಾನಿಗಳೆ ಹೆಚ್ಚಾಗಿದ್ದು, ಅದರಲ್ಲಿ ಯುವ ಸಮುಹ ಒಂದೊಂದು ಹೋರಿಗಳಿಗೆ ಸಾವಿರಾರು ಜನ ಡೈ ಹಾಟ್​ ಪ್ಯಾನ್ಸ್ ಇರುತ್ತಾರೆ. ಹೋರಿ ಹಬ್ಬದಲ್ಲಿ ಅದರ ಓಟ, ಅದು ಪಡೆದ ಬಹುಮಾನಗಳು, ಮತ್ತಿತರ ಕಾರಣಗಳಿಂದ ಹೋರಿಗಳ ಮೇಲೆ ಯಾವ ನಟ-ನಟಿಯರಿಗೂ ಕಡಿಮೆ ಇಲ್ಲದಷ್ಟು ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದಾರೆ. ಹೋರಿಗಾಗಿ ಲಕ್ಷಾಂತರ ರೂ ಖರ್ಚು ಮಾಡುತ್ತಾರೆ. ಇದರ ಜೊತೆಗೆ ನಟ-ನಟಿಯರ ಹುಟ್ಟು ಹಬ್ಬದಂದು ಸೇರುವಷ್ಟೆ ಜನ ಸೇರಿ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ.

ಇದನ್ನೂ ಓದಿ:ರಕ್ತದಾನ ಮಾಡಿ ಉತ್ತಮ ಆರೋಗ್ಯ ಪಡೆಯಿರಿ; ಬ್ಲಡ್ ಡೊನೇಟ್ ಮಾಡದ ಪುರುಷರಲ್ಲಿ ಈ ರೋಗ ಹೆಚ್ಚಳ

ರಾಜಕಾರಣಿಗಳಿಗಿಂತ ಮೂಖಪ್ರಾಣಿ ಬಸವಣ್ಣನ ಹುಟ್ಟುಹಬ್ಬಗಳಲ್ಲಿ ನಡೆಯುತ್ತವೆ ರಕ್ತದಾನದ ಶಿಬಿರಗಳು

ಇತ್ತೀಚಿನ ದಿನಗಳಲ್ಲಿ ಹೋರಿಗಳ ಹುಟ್ಟು-ಹಬ್ಬದಂದು ರಕ್ತದಾನ, ಅನ್ನಸಂತರ್ಪಣೆ, ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. 2023 ರಲ್ಲಿ ಹಾವೇರಿ ಬ್ಲಡ್ ಬ್ಯಾಂಕ್ ಮಾಹಿತಿ ಪ್ರಕಾರ ಹಾನಗಲ್ ತಾಲೂಕಿನ ಕರೆಕ್ಯಾತನಹಳ್ಳಿ,ಯಜಮಾನ, ಹೊತನಳ್ಳಿಯ ಬಕಾಸೂರ, ಕೆರಿ ಮತ್ತಿಹಳ್ಳಿ ಹಾಗೂ ದೇವಗಿರಿ ಗ್ರಾಮದಲ್ಲಿ ರಾಕ್ಷಸ್, ಹಾವೇರಿ ನಗರದ ಶಿವಾಜಿನಗರದ ರಣ ಬೇಟೆಗಾರ ಹೋರಿಗಳ ಹುಟ್ಟುಹಬ್ಬದಂದು 150 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಪರದಾಡುವ ಸ್ಥಿತಿ ಈಗ ಇಲ್ಲ. ಹೋರಿಗಳ ಹುಟ್ಟು ಹಬ್ಬಗಳನ್ನು ಮಾಡುವ ಮೂಲಕ ರಕ್ತದಾನ ಶಿಬಿರಗಳನ್ನು ಆಯೊಜಿಸುತ್ತಾರೆ. ಇದರಿಂದ ಅವಶ್ಯಕತೆ ಇರುವ ರಕ್ತದ ಅವಶ್ಯಕತೆ ಇದ್ದವರಿಗೆ ಅನುಕೂಲ ಆಗುತ್ತಿದ್ದಾರೆ. ಇತ್ತೀಚೆಗೆ ಹೋರಿ ಹುಟ್ಟುಹಬ್ಬಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಹೆಚ್ಚುತ್ತಿದ್ದು, ಸಂತಸದ ಸಂಗತಿಯಾಗಿದೆ. ಯುವಕರು ತಮ್ಮ ಹೋರಿಗಳ ಹೆಸರಲ್ಲಿ ರಕ್ತದಾನ ಮಾಡಿ ಮತ್ತೊಂದು ಜೀವಕ್ಕೆ ಜೀವ ನಿಡುತ್ತಿದ್ದಾರೆ ಎಂದು ಸರಕಾರಿ ಆಸ್ಪತ್ರೆ ರಕ್ತ ಬಂಡಾರದ ಮುಖ್ಯ ವೈದ್ಯಾಧಿಕಾರಿ ಬಸವರಾಜ ತಳವಾರ ಹೇಳಿದರು. ಇದೇ ವೇಳೆ ಅನ್ನದಾತ ಹೋರಿಯ ಮಾಲಿಕ ಸಂತೋಷ್​ ಮಾತನಾಡಿ ‘ ನಮ್ಮ ಖುಷಿಗಾಗಿ ನಾವು ನಮ್ಮ ನಮ್ಮ ಹೋರಿ ಹುಟ್ಟು ಹಬ್ಬದಂದು ರಕ್ತದಾನ, ಅನ್ನದಾನದ ಜೊತೆಗೆ ಆರೋಗ್ಯ ಶಿಬಿರಗಳನ್ನು ಆಯೊಜನೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Tue, 12 December 23