AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು

ಹಾವೇರಿ ಜಿಲ್ಲೆ ಶಿಗ್ಗಾಂವಿಯ ಕ್ಲಾಸ್ ಒನ್ ಕಾಂಟ್ರಾಕ್ಟರ್ ಶಿವಾನಂದ ಕುನ್ನೂರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಿವಾನಂದ ಹತ್ಯೆ ಹಿಂದಿನ ಕಾರಣಗಳು ಒಂದೊಂದಾಗಿ ಬರುತ್ತಿವೆ. ಹತ್ಯೆಯಾದ ಶಿವಾನಂದ್​, ಬೇರೊಬ್ಬನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ. ಆದ್ರೆ, ಸುಪಾರಿ ನೀಡಿದ್ದ ಶಿವಾನಂದನನ್ನೇ ಬಲಿಪಡೆದುಕೊಂಡಿದ್ದಾರೆ. ಶಿವಾನಂದ ಕೊಲೆ ಮಾಡಿರುವ ಆರೋಪಿ ಮಾತನಾಡಿರೋ ಆಡಿಯೋ ಈಗ ಇಡೀ ಪ್ರಕರಣದ ಚಿತ್ರಣವನ್ನೇ ಬದಲಿಸಿದ್ದು, ಹತ್ಯೆಗೆ ರಾಸಲೀಲೆ ಫೋಟೋಗಳೇ ಕಾರಣ ಎಂದು ತಿಳಿದುಬಂದಿದೆ. ಹಾಗಾದ್ರೆ, ಹಂತಕನ ಆಡಿಯೋನಲ್ಲೇನಿದೆ?

ಸುಪಾರಿ ಕೊಟ್ಟವನನ್ನೇ ಕೊಂದರು: ಶಿಗ್ಗಾಂವಿ ಗುತ್ತಿಗೆದಾರನ ಹತ್ಯೆ ಹಿಂದೆ ರಾಸಲೀಲೆ, ವಿಡಿಯೋ ಫೋಟೋಗಳು
ಶಿವಾನಂದ, ಅಶ್ರಫ್
ರಮೇಶ್ ಬಿ. ಜವಳಗೇರಾ
|

Updated on: Jun 25, 2025 | 10:02 PM

Share

ಹಾವೇರಿ, (ಜೂನ್ 25): ಶಿಗ್ಗಾಂವಿಯಲ್ಲಿ (shiggaon) ನಿನ್ನೆ (ಜೂನ್ 24) ಮಟ ಮಟ ಮಧ್ಯಾಹ್ನ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕುನ್ನೂರ ಹತ್ಯೆ ಪ್ರಕರಣಕ್ಕೆ ( contractor Shivanand Murder Case) ಹೊಸ ತಿರುವು ಸಿಕ್ಕಿದೆ. ಕಮರ್ಷಿಯಲ್ ಸೈಟ್ ವಿಚಾರವಾಗಿ ಜಗಳ ನಡೆದು ಶಿವಾನಂದ ಕುನ್ನೂರ ಹತ್ಯೆಯಾಗಿದೆ ಎಂದೇ ಮೊದಲು ಸುದ್ದಿಯಾಗಿತ್ತು. ಆದ್ರೆ, ಇದೀಗ ಕೊಲೆ ಆರೋಪಿ ಅಶ್ರಫ್ ಮಾತನಾಡಿರೋ ಆಡಿಯೋ ಈಗ ಇಡೀ ಪ್ರಕರಣದ ಚಿತ್ರಣವನ್ನೇ ಬದಲಿಸಿದ್ದು, ಶಿವಾನಂದನನ್ನು ಏಕೆ ಕೊಲೆ ಮಾಡಲಾಯ್ತು ಎನ್ನುವುದು ಆಡಿಯೋ ಮೂಲಕ ಬೆಳಕಿಗೆ ಬಂದಿದ್ದು, ತನ್ನ ಖಾಸಗಿ ವಿಡಿಯೋ, ಫೋಟೋಗಳಿಗೆ ಅಶ್ರಪ್​​ನನ್ನು ಕೊಲ್ಲು ಸುಪಾರಿ ನೀಡಿ ಕೊನೆಗೆ ಶಿವಾನಂದ್ ಹತ್ಯೆಯಾಗಿದ್ದಾನೆ.

ಹಂತಕನ ಆಡಿಯೋನಲ್ಲೇನಿದೆ?

ಹತ್ಯೆಯಾದ ಶಿವಾನಂದ ಕುನ್ನೂರ ಆರೋಪಿಗಳಾದ ಅಶ್ರಪ್ ಹಾಗೂ ನಾಗರಾಜ್ ಸವದತ್ತಿ ಕೊಲೆಗೆ ಸುಪಾರಿ ನೀಡಿದ ವಿಚಾರ ಬಹಿರಂಗವಾಗಿದೆ. ನಿನ್ನೆ ಮಧ್ಯಾಹ್ನ ಶಿವಾನಂದ ಕೊಲೆ ಮಾಡಿ ಎಸ್ಕೇಪ್ ಆಗಿರುವ ಅಶ್ರಫ್ ತಮ್ಮ ಆಪ್ತರ ಜೊತೆ ಮಾತನಾಡಿರೋ ಆಡಿಯೋ ಇದೀಗ ವೈರಲ್ ಆಗಿದೆ. ಶಿವಾನಂದ ಕುನ್ನೂರ ಹುಬ್ಬಳ್ಳಿ ಹುಡುಗರಿಗೆ ನನ್ನನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ. ನನ್ನನ್ನು ಕಿಡ್ನಾಪ್ ಮಾಡಿ ಬೆತ್ತಲುಗೊಳಿಸಿ ಚಿತ್ರಹಿಂಸೆ ನೀಡಿದ್ದ.ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದು, ಬಳಿಕ ಸ್ನೇಹಿತರ ಜೊತೆಗೂಡಿ ಶಿವಾನಂದ ಪಾಟೀಲ್ ಗಂಟಲು ಕೊಯ್ದಿರುವುದಾಗಿ ಅಶ್ರಫ್ ಮಾತನಾಡಿರೋ ಆಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ವಿಡಿಯೋ ಇಲ್ಲಿದೆ

ತನ್ನ ಫೋಟೋ, ವಿಡಿಯೋಗಾಗಿ ಸುಪಾರಿ ನೀಡಿದ್ದ ಶಿವಾನಂದ್

ಶಿವಾನಂದ ಕುನ್ನೂರ ಹತ್ಯೆ ಬಳಿಕ ಅಶ್ರಪ್ ತಮ್ಮ ಆಪ್ತರ ಜೊತೆ ಮಾತನಾಡಿದ್ದ ಆಡಿಯೋದಲ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ. ಶಿವಾನಂದ ಕುನ್ನೂರ ಹೆಂಗಸರ ಜೊತೆಗಿದ್ದ ಫೋಟೊ, ವಿಡಿಯೋಗಳು ನನ್ನ ಬಳಿ ಇದ್ವು.ಈ ವಿಚಾರ ಗೊತ್ತಾಗಿ ಶಿವಾನಂದ ಕುನ್ನೂರ ನನ್ನ ಕೊಲೆಗೆ ಹುಬ್ಬಳ್ಳಿ ಹುಡುಗರಿಗೆ ಸುಪಾರಿ ನೀಡಿದ್ದ.ಇದರಿಂದಾಗಿಯೇ ನಾನು ಸ್ನೇಹಿತರ ಜೊತೆಗೂಡಿ ಗಂಟಲು ಕುಯ್ದಿದ್ದೇನೆ ಎಂದು ಆಪ್ತರ ಬಳಿ ಮಾತನಾಡಿದ್ದಾನೆ. ಶಿವಾನಂದ ಹತ್ಯೆ ಮಾಡಿರೋ ಆರೋಪಿಗಳಾದ ಅಶ್ರಪ್ ಹಾಗೂ ನಾಗರಾಜ್ ಸವದತ್ತಿ ಹತ್ಯೆಗೆ ಸುಪಾರಿ ನೀಡುವ ಸಂಬಂಧ ಶಿವಾನಂದ ರಹಸ್ಯ ಮೀಟಿಂಗ್ ನಡೆಸಿದ್ದ ಎನ್ನಲಾಗಿದೆ.

ಇದನ್ನೂ ಓದಿ
Image
ಯುವಕನ ಹಿಂದೆ ಬಿದ್ದ ಎರಡು ಮಕ್ಕಳ ತಾಯಿ: ಲಾಂಗ್​ ಡ್ರೈವ್ ಕೊಲೆ ರಹಸ್ಯ ಬಯಲು!
Image
ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ, ಜಾಲಿ ಜಾಲಿ ಎಂದವರು ಜೈಲಿಗೆ
Image
ಪ್ರೇಮಿಗಳ ನಡುವೆ ಕಿರಿಕ್: ಆ ವಿಡಿಯೋದಿಂದಲೇ ದುರಂತ ಸಾವುಕಂಡ ಪ್ರೇಯಸಿ
Image
ಹಾವೇರಿಯಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನ ಕೊಲೆ

ಸುಪಾರಿ ಕೊಟ್ಟಿದ್ದಕ್ಕೆ ಶಿವಾನಂದ್ ಹತ್ಯೆ

ಶಿಗ್ಗಾವಿ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಸುಪಾರಿ ಕಿಲ್ಲರ್ಸ್ ಜೊತೆ ಮೀಟಿಂಗ್ ನಡೆಸಿದ್ನಾ ಎಂಬ ಚರ್ಚೆ ನಡೆದಿದೆ.ಹೋಟೆಲ್ ನಲ್ಲಿ ಮೀಟಿಂಗ್ ಮುಗಿಸಿ ಕಂತೆ ಕಂತೆ ಹಣದ ಕವರ್ ಹಿಡಿದು ಸುಪಾರಿ ಕಿಲ್ಲರ್ಸ್ ಹೊರ ಬಂದಿದ್ದ ವಿಡಿಯೋಗಳು ಸಿಟಿಟಿವಿಗಳಲ್ಲಿ ರೆಕಾರ್ಡ್ ಆಗಿದೆ.ಹೀಗಾಗೇ ಶಿವಾನಂದ ನಮ್ಮ ಕೊಲೆಗೆ ಸುಪಾರಿ ಕೊಟ್ಟಿದ್ದಾನೆಂದು ಹೆದರಿ ಆರೋಪಿಗಳು ಶಿವಾನಂದ ಕುನ್ನೂರ ಹತ್ಯೆ ಮಾಡಿದ್ದಾರೆ.ತಮ್ಮ ಹತ್ಯೆಗೆ ಹುಬ್ಬಳ್ಳಿ ಹುಡುಗರಿಗೆ ಸುಪಾರಿ ಕೊಟ್ಟಿದ್ದಕ್ಕೆ ಶಿವಾನಂದ ಕೊಲೆ ಮಾಡಿರೋದಾಗಿ ಅಶ್ರಫ್ ಹೇಳಿರೋದು ಕೂಡಾ ಸಿಟಿಟಿವಿ ದೃಷ್ಯಾವಳಿಗಳಿಗೆ ತಾಳೆ ಆಗುತ್ತಿದೆ.

ಸದ್ಯ ತಲೆ ಮರೆಸಿಕೊಂಡಿರೋ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಸಿಕ್ಕರೆ ಮತ್ತಷ್ಟು‌ ವಿಷಯಗಳು ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಅನ್ನೋದು ಸತ್ಯಾಸತ್ಯೆ ಹೊರಬೀಳಲಿದೆ.

ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ