AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Politics: ಯಡಿಯೂರಪ್ಪ ಸುಮ್ಮನಿರುವುದು ದೌರ್ಬಲ್ಯವಲ್ಲ; ವಿಜಯೇಂದ್ರ

ಬಿಎಸ್ ಯಡಿಯೂರಪ್ಪ ಸುಮ್ಮನಿದ್ದಾರೆ ಅಂದರೆ ದೌರ್ಬಲ್ಯ ಅಂದುಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದ್ದಾರೆ.

Karnataka Politics: ಯಡಿಯೂರಪ್ಪ ಸುಮ್ಮನಿರುವುದು ದೌರ್ಬಲ್ಯವಲ್ಲ; ವಿಜಯೇಂದ್ರ
ಬಿವೈ ವಿಜಯೇಂದ್ರ
Ganapathi Sharma
|

Updated on: Mar 15, 2023 | 10:50 PM

Share

ಹಾವೇರಿ: ಬಿಎಸ್ ಯಡಿಯೂರಪ್ಪ (BS Yediyurappa) ಸುಮ್ಮನಿದ್ದಾರೆ ಅಂದರೆ ದೌರ್ಬಲ್ಯ ಅಂದುಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಗುಡುಗಿದ್ದಾರೆ. ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಎಸ್​ವೈ ಅವರ ಮೌನವನ್ನೇ ದೌರ್ಬಲ್ಯ ಅಂದುಕೊಂಡರೆ ಬಹಳ ಪಶ್ಚಾತ್ತಾಪ ಪಡಬೇಕಾಗಲಿದೆ. ರಾಜ್ಯದಲ್ಲಿ ಬಿಜೆಪಿಗೆ ಅಡಿಪಾಯ ಗಟ್ಟಿ ಇದೆ ಅಂದರೆ ಅದಕ್ಕೆ ಕಾರಣ ಯಡಿಯೂರಪ್ಪ. ಆದರೆ, ಅವರನ್ನು ಟೀಕೆ ಮಾಡುವ ಜನರಿದ್ದಾರೆ. ತಮ್ಮ ಕುಟುಂಬ ಬೆಳೆಸಬೇಕು ಅಂತ ಬಿಎಸ್‌ವೈ ರಾಜಕಾರಣ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಇಡೀ ಜಗತ್ತು ಮಾರ್ಗದರ್ಶನ ಮಾಡುವಂಥ ನಾಯಕನನ್ನು ಎದುರು ನೋಡುತ್ತಾ ಇತ್ತು. ನಮ್ಮ ಅದೃಷ್ಟ ಇಡೀ ಪ್ರಪಂಚ ದೇಶದ ನಮ್ಮ ಪ್ರಧಾನಿಗಳ ಕಡೆ ತಿರುಗಿ ನೋಡುತ್ತಾ ಇದೆ. ರಷ್ಯಾ – ಉಕ್ರೇನ್ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಬುದ್ಧಿ ಹೇಳಿವಂಥ ನಾಯಕ ಇರಲಿಲ್ಲ. ಆದರೆ ಮೋದಿಯವರು ಯುದ್ಧ ಬೇಡ, ಜಗತ್ತಿನ ಏಳಿಗೆಗೆ ಯುದ್ದ ಸರಿಯಲ್ಲ, ಯುದ್ಧ ನಿಲ್ಲಿಸಿ ಎಂದು ಸಲಹೆ ಕೊಟ್ಟಿದ್ದರು. ರಷ್ಯಾ ಅಣುಬಾಂಬ್ ದಾಳಿ ಮಾಡಲು ಹೊರಟಿತ್ತು. ಆಗಲೂ ಮೋದಿಯವರು ಬೇಡ ಎಂದು ತಡೆದರು. ಪರಿಣಾಮವಾಗಿ ರಷ್ಯಾ ಅಣುಬಾಂಬ್ ಪ್ರಯೋಗ ಮಾಡಲಿಲ್ಲ. ಇದು ಪ್ರಧಾನಿ ನರೇಂದ್ರ ಮೋದಿಯವರ ಸಾಹಸ ಎಂದು ವಿಜಯೇಂದ್ರ ಬಣ್ಣಿಸಿದರು.

ಇದನ್ನೂ ಓದಿ: Ticket Fight: ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಬೆಳೆಯಲು ಸಾಧ್ಯ: ಸಿ.ಟಿ ರವಿಗೆ ಟಾಂಗ್ ಕೊಟ್ಟ ವಿಜಯೇಂದ್ರ

ಕಾಂಗ್ರೆಸ್​​ನವರಿಗೆ ಈ ದೇಶದ ಬಗ್ಗೆ, ಯುವಕರ ಬಗ್ಗೆ ಚಿಂತೆಯೇ ಇಲ್ಲ. ಈ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತಿರುವ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಬಡವರು ಬಡವರಾಗಿಯೇ ಇರಬೇಕು, ಅನಕ್ಷರಸ್ಥರು ಅನಕ್ಷರಸ್ಥಾರಾಗಿಯೇ ಇರಬೇಕು ಎಂದು ಕಾಂಗ್ರೆಸ್ ಪಕ್ಷದವರು ಬಯಸುತ್ತಾರೆ. ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಬಡತನ ಕಿತ್ತು ಹಾಕೋ ಕೆಲಸ ಮಾಡಲೇ ಇಲ್ಲ ಎಂದು ಅವರು ಹೇಳಿದ್ದಾರೆ.

ಸಿಟಿ ರವಿಗೆ ಟಾಂಗ್ ಕೊಟ್ಟಿದ್ದ ವಿಜಯೇಂದ್ರ

ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ತನ್ನ ಮಗನಿಗಾಗಿ ಬಿಟ್ಟು ಕೊಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಿಸಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ಷೇಪಿಸಿದ್ದರು. ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಮನೆಯಲ್ಲಿ ನಿರ್ಧಾರವಾಗಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ವಿಜಯೇಂದ್ರ, ರಾಜ್ಯದಲ್ಲಿ ಬಿಜೆಪಿ ಕಟ್ಟಿದ್ದು ಬಿಎಸ್‌ವೈ ಎಂದು ಸಿಟಿ ರವಿಗೂ ಗೊತ್ತಿದೆ. ಈ ರೀತಿ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು