ಛತ್ತೀಸಗಡ ಬಾಂಬ್ ದಾಳಿ ಪ್ರಕರಣ: ಹಾವೇರಿಯ ಸಿಆರ್​ಪಿಎಫ್ ಯೋಧ ಚಿಕಿತ್ಸೆ ಫಲಿಸದೆ ಸಾವು

ಛತ್ತೀಸಗಡದಲ್ಲಿ ನಡೆದಿದ್ದ ಬಾಂಬ್ ದಾಳಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಾವೇರಿ ಮೂಲಕ ಸಿಆರ್​ಪಿಎಫ್ ಯೋಧ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಛತ್ತೀಸಗಡ ಬಾಂಬ್ ದಾಳಿ ಪ್ರಕರಣ: ಹಾವೇರಿಯ ಸಿಆರ್​ಪಿಎಫ್ ಯೋಧ ಚಿಕಿತ್ಸೆ ಫಲಿಸದೆ ಸಾವು
ಹುತಾತ್ಮರಾದ ಹಾವೇರಿ ಮೂಲದ ಯೋಧ ರವಿ ಕೆಳಗಿನಮನಿ
Rakesh Nayak Manchi

Updated on: Apr 25, 2023 | 8:51 PM

ಹಾವೇರಿ: ಛತ್ತೀಸಗಡದಲ್ಲಿ ನಡೆದಿದ್ದ ಬಾಂಬ್ ದಾಳಿ ಪ್ರಕರಣದಲ್ಲಿ (Chhattisgarh bomb blast) ಗಂಭೀರವಾಗಿ ಗಾಯಗೊಂಡಿದ್ದ ಹಾವೇರಿ ಮೂಲಕ ಸಿಆರ್​ಪಿಎಫ್ (CRPF) ಯೋಧ ರವಿ ಕೆಳಗಿನಮನಿ (26) ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಮಾರ್ಚ್ ತಿಂಗಳಲ್ಲಿ ತನ್ನ ವಿವಾಹ ವಾರ್ಷಿಕೋತ್ಸ ಮುಗಿಸಿ ದೇಶ ಸೇವೆಗೆ ತೆರಳಿದ್ದ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದ ಸೈನಿಕ ರವಿ ಕೆಳಗಿನಮನಿ ಮಾರ್ಚ್ 30 ರಂದು ಛತ್ತಿಸಗಡದಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಅವರು ಹುತಾತ್ಮರಾಗಿದ್ದಾರೆ.

ಇಂದು ಬೆಳಿಗ್ಗೆ ಚಿಕಿತ್ಸೆ ಫಲಸದೆ ಛತ್ತೀಸಗಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ರವಿ ಪಾರ್ಥಿವ ಶರೀರ ನಾಳೆ ದೆಹಲಿಯಲಿಂದ ಹುಟ್ಟೂರು ಬ್ಯಾತನಾಳ ಗ್ರಾಮಕ್ಕೆ ತರಲಾಗುತ್ತದೆ. ರವಿ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಹುತಾತ್ಮ ರವಿ ಅವರ ಪತ್ನಿ ಅಶ್ವಿನಿ 2 ತಿಂಗಳ ಗರ್ಭಿಣಿಯಾಗಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ: 5 ಯೋಧರು ಹುತಾತ್ಮ, ಒಬ್ಬರಿಗೆ ಗಂಭೀರ ಗಾಯ

ಇತ್ತೀಚೆಗೆ ಪಂಜಾಬ್‌ನ ಬತಿಂಡಾ ಸೇನಾ ಘಟಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಬಾಗಲಕೋಟೆ ಮೂಲದ ಯೋಧ ಎಂ ನಾಗರಾಳ್ (25) ಹುತಾತ್ಮರಾಗಿದ್ದರು. ಬತಿಂಡಾ ಮಿಲಿಟರಿ ಸ್ಟೇಷನ್ ಒಳಗೆ ನಡೆದ ಗುಂಡಿನ ದಾಳಿಯಲ್ಲಿ ನಾಗರಾಳ್ ಹುತಾತ್ಮರಾಗಿದ್ದರು. ಘಟನೆಯಲ್ಲಿ ಯೋಧರಾದ ಸಾಗರ್ ಬನ್ನೆ (25), ಕಮಲೇಶ್ ಆರ್ (24), ಯೋಗೇಶ್‌ಕುಮಾರ್ ಜೆ (24) ಕೂಡ ಹುತಾತ್ಮರಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Tue, 25 April 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us