Haveri News: ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸುತ್ತೇವೆ: ಸಿಎಂ ಬೊಮ್ಮಾಯಿ ಭರವಸೆ
ಆದಷ್ಟು ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸುತ್ತೇವೆ ಎಂದು ಅಂಬಿಗರ ಚೌಡಯ್ಯರ ಶರಣ ಸಂಸ್ಕೃತಿ ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಹಾವೇರಿ: ಆದಷ್ಟು ಗಂಗಾಮತ ಸಮುದಾಯ (Gangamata community) ವನ್ನು ಎಸ್ಟಿಗೆ ಸೇರಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಜಿಲ್ಲೆಯ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯರ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿ, ಎಸ್ಟಿಗೆ ಸೇರಿಸುವ ಫೈಲ್ ಕೇಂದ್ರದಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮತ್ತೊಮ್ಮೆ ಮಾತನಾಡುತ್ತೇನೆ. ಆದಷ್ಟು ಬೇಗ ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸುತ್ತೇನೆ. ಗಂಗಾಮತ ಪೀಠಕ್ಕೆ 10 ಕೋಟಿ ಕೊಡುವುದಾಗಿ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅದರ ಪೈಕಿ ಈಗಾಗಲೇ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಉಳಿದ 5 ಕೋಟಿ ರೂ. ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ನಾನು ಕೂಡ ನಿಮ್ಮವನೆ ಎಂದ ಸಿಎಂ ಬೊಮ್ಮಾಯಿ
ಕಟು ಸತ್ಯವನ್ನು ನುಡಿಯುವಂತ ಶರಣ ಅಂಬಿಗರ ಚೌಡಯ್ಯ ಭಾಗಶಃ ಸುಳ್ಳು, ಪೂರ್ಣ ಸುಳ್ಳು, ಅರ್ಧ ಸುಳ್ಳು ಎಂದು ವ್ಯಾಖ್ಯಾನ ಇದೆ. ಕಠೋರ ಸತ್ಯವನ್ನ ಹೇಳುವಂತ ಶರಣರು ಯಾರಾದ್ರು ಇದ್ರೆ ಅದು ಅಂಬಿಗರ ಚೌಡಯ್ಯ. ಕಲ್ಯಾಣ ಕ್ರಾಂತಿ ಆದಾಗ ದುಷ್ಟ ಶಕ್ತಿಗಳು ಸುಡಲು ಪ್ರಯತ್ನಿಸಿದಾಗ ವಚನಗಳನ್ನು ದೋಣಿಯಲಿ ಸಾಗಿಸಿ ರಕ್ಷಿಸಿದರು.
ಇದನ್ನೂ ಓದಿ: ಎಸ್ಸಿ, ಎಸ್ಟಿ ಜನರು ಬುದ್ಧಿವಂತರಾಗಿದ್ದಾರೆ: ಕಾಂಗ್ರೆಸ್ ಐಕ್ಯತಾ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಟಾಂಗ್
ಇಂದು ನಾವೆಲ್ಲ ವಚನಗಳನ್ನು ಓದುತ್ತಿದ್ದೇನೆ ಅಂದ್ರೆ ಚೌಡಯ್ಯನವರ ಪಾತ್ರ ಮಹತ್ವದ್ದು. ನಾನು ಕೂಡ ಗಂಗಮ್ಮನ ಮಗನೆ. ನನ್ನ ತಾಯಿಯ ಹೆಸರು ಕೂಡ ಗಂಗಮ್ಮ. ನಾನು ಕೂಡ ನಿಮ್ಮವನೆ ಎಂದರು ಸಿಎಂ ಬೊಮ್ಮಾಯಿ.
ನಮಗೆ ST ಮೀಸಲಾತಿ ನೀಡಬೇಕು: ಶ್ರೀಗಳ ಒತ್ತಾಯ
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿಕೆ ನೀಡಿದ್ದು, ಜಗತ್ತಿನಲ್ಲಿ 12 ಕ್ರಾಂತಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು. 45 ವರ್ಷದಿಂದ ಹೋರಾಟ ನಡೆಯುತ್ತಿದೆ. ST ಮೀಸಲಾತಿ ಸಿಗಬೇಕು. ಕೋಳಿ ಸಮಾಜವನ್ನ ST ಸಮುದಾಯವನ್ನ ಸೇರಿಸುವ ಭರವಸೆ ನೀಡಿದರು. ಅಂಬಿಗರು ನಾವು, ನಂಬಿಗ ಸಮಾಜ ನಮ್ಮದು. ಈ ಸಮಾಜಕ್ಕೆ ನ್ಯಾಯಕೊಡಿಸುವ ಕೆಲಸ ಮಾಡಬೇಕು. ಕುಲಶಾಸ್ತ್ರ ಅಧ್ಯಯನ ಆಗಿದೆ.
ಇದನ್ನೂ ಓದಿ: Jaya Mruthyunjaya Swami: ಪಂಚಮಸಾಲಿ ಸಮುದಾಯದ ಹೋರಾಟ ಶಿಗ್ಗಾಂವಿ ಸಿಎಂ ಮನೆಯಿಂದ ಬೆಂಗಳೂರಿಗೆ ಶಿಫ್ಟ್,
ನಮ್ಮ ಸಮಾಜಕ್ಕೆ ಮೀಸಲಾತಿ ನೀಡುವಂತೆ ಶ್ರೀಗಳು ಒತ್ತಾಯ. ಯಡಿಯೂರಪ್ಪನವರು ಐದು ಕೋಟಿ ಬಿಡುಗಡೆ ಮಾಡಿದ್ದರು. ಈ ಸಮಾಜಕ್ಕೆ ಅನ್ಯಾಯವಾಗಿದೆ. ನಮಗೆ ನ್ಯಾಯ ಬೇಕು. ನಮಗೆ ST ಮೀಸಲಾತಿ ನೀಡಬೇಕು. ನಮ್ಮ ಸಮಾಜಕ್ಕೆ ನ್ಯಾಯ ಕೊಡಲು ಸಿಎಂ ಬೊಮ್ಮಾಯಿ ಬಂದಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:58 pm, Sun, 15 January 23