ಎಸ್ಸಿ, ಎಸ್ಟಿ ಜನರು ಬುದ್ಧಿವಂತರಾಗಿದ್ದಾರೆ: ಕಾಂಗ್ರೆಸ್ ಐಕ್ಯತಾ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಟಾಂಗ್
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನ ಬುದ್ಧಿವಂತರಾಗಿದ್ದಾರೆ. ರಾಜ್ಯದಲ್ಲಿ ಇನ್ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯಲ್ಲ ಎಂದು ಕಾಂಗ್ರೆಸ್ ಐಕ್ಯತಾ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಹಾವೇರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ (SC, ST) ಜನ ಬುದ್ಧಿವಂತರಾಗಿದ್ದಾರೆ. ರಾಜ್ಯದಲ್ಲಿ ಇನ್ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (CM Bommai) ಟಾಂಗ್ ನೀಡಿದರು. ಯಾರ ಅವಧಿಯಲ್ಲಿ ಎಷ್ಟು ಕೆಲಸವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬೇಡಿಕೆಯೂ ಹೆಚ್ಚಾಗಿದೆ. ಹಾಗಾಗಿ ಮೀಸಲಾತಿ ಹೆಚ್ಚಿಸಿದ್ದೇವೆ. ವಿರೋಧ ಪಕ್ಷದವರ ಕೆಲಸ ಟೀಕೆ ಮಾಡುವುದಾಗಿ ಎಂದು ಹೇಳಿದರು.
ಅಭಿಪ್ರಾಯ ಭೇದ ಇರಬಹುದು, ಆದರೆ ಹಿಂಸೆ ಒಪ್ಪುವುದಿಲ್ಲ
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ರವಿ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿ ಅಭಿಪ್ರಾಯ ಭೇದ ಇರಬಹುದು, ಆದರೆ ಹಿಂಸೆ ಒಪ್ಪುವುದಿಲ್ಲ. ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಯಾರನ್ನೇ ಆದರೂ ಕೊಲ್ಲುವ ಕೆಲಸಕ್ಕೆ ಮುಂದಾಗಬಾರದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತೆ. ಶ್ರೀರಾಮಸೇನೆಯ ರವಿ, ಚಾಲಕನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಕ್ಷಣ ಟೆಂಡರ್ ಪರಿಶೀಲನೆ; ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಡಿಕೆಶಿ
ಸಮ್ಮೇಳನದ ಅಧ್ಯಕ್ಷತೆ ನೇತ್ರತ್ವದಲ್ಲಿ ಕನ್ನಡನಾಡಿನ ಅಭಿವೃದ್ಧಿ ಸರ್ಕಾರ ಬದ್ಧ
ಯಾಲಕ್ಕಿ ನಾಡಿನಲ್ಲಿ ಕನ್ನಡ ಹಬ್ಬ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಈ ಕುರಿತಾಗಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಇಂದಿಗೆ ಆರಂಭವಾಗಿ ಮೂರನೇ ದಿನ. ಕಳೆದೆ ಎರಡು ದಿನ ಸಾಹಿತ್ಯ ಕಂಪು ಪಸರಿಸಿದೆ. ಸಮಾರೋಪ ಸಮಾರಂಭ ಆಗುತ್ತಿದೆ.
ಇದನ್ನೂ ಓದಿ: SC, ST ಸಮುದಾಯಕ್ಕೆ ಬೊಮ್ಮಾಯಿ ದೀಪಾವಳಿ ಗಿಫ್ಟ್: ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ
ಸಮ್ಮೇಳನದ ಅಧ್ಯಕ್ಷತೆ ನೇತ್ರತ್ವದಲ್ಲಿ ಕನ್ನಡನಾಡಿನ ಅಭಿವೃದ್ಧಿ ಸರ್ಕಾರ ಬದ್ಧ. ಸಮ್ಮೇಳನ ಯಶಸ್ವಿಗೆ ಶ್ರಮಿಸಿದ ಶಿವರಾಮ್ ಹೆಬ್ಬಾರ, ಕನ್ನಡ ಸಂಸ್ಕೃತಿಯ ಸಚಿವರಿಗೆ ಜಿಲ್ಲಾಡಳಿತ ಅಭಿನಂದನೆ. ಸಾಹಿತ್ಯಗಳ ಅನಿಸಿಕೆಯನ್ನು ಸಕಾರಾತ್ಮಕ ಪರಿಗಣಿಸುತ್ತೇವೆ. ವ್ಯವಸ್ಥಿತವಾಗಿ ಸಮ್ಮೇಳನ ಮಾಡಿದ್ದಾರೆ ಎಂದುರ ತಿಳಿಸಿದರು.
ಪ್ರಧಾನಿ ಮೋದಿ ಡಿವೈಡ್ ಅಂಡ್ ರೂಲ್ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಐಕ್ಯತಾ ಸಮಾವೇಶದಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದು, ಸಂಘಟನೆ ಇಲ್ಲದೆ ಚಿದ್ರ ಚಿದ್ರ ಆದರೆ ದೇಶದಲ್ಲಿ ನಿಮ್ಮನ್ನು ಯಾರೂ ಕೇಳಲ್ಲ. ಪ್ರಧಾನಿ ಮೋದಿ ಡಿವೈಡ್ ಅಂಡ್ ರೂಲ್ ಮಾಡುತ್ತಿದ್ದಾರೆ. ಟಿಕೆಟ್ ಸಿಗಬಹುದು, ಸಿಗದೇ ಇರಬಹುದು. ಪ್ರಜಾತಂತ್ರ, ಸಂವಿಧಾನ ಉಳಿಸಬೇಕು ಎಂಬ ಗುರಿಇರಬೇಕು. ಸಂವಿಧಾನ, ಪ್ರಜಾತಂತ್ರ ಇದ್ದರೆ ತಾನೇ ನೀವು ಕೇಳುವುದು. ಸಂವಿಧಾನವೇ ಇವತ್ತು ಸಂಕಷ್ಟದಲ್ಲಿ ಇದೆ.
ಕೇಂದ್ರ ಸರ್ಕಾರದಿಂದ ಸಂವಿಧಾನ ಧಿಕ್ಕರಿಸಿ ಆಡಳಿತ ಮಾಡಲಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಅನೇಕ ಕಡೆ ಹೋಗಿದ್ದೇನು. ಲಕ್ಷಾಂತರ ಜನರು ರಾಹುಲ್ ಜತೆ ಸೇರುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ, ಬೆಲೆ ಏರಿಕೆ ಹೆಚ್ಚಿದೆ. ಈ ಬಗ್ಗೆ ಬಹಳ ಜನರಿಗೆ ಕಾಳಜಿ ಇಲ್ಲವಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.