ಪ್ರೀತಿ ಪ್ರೇಮ ಪ್ರಣಯ ಎಂದು ಕಾಲೇಜಿಗೆ ಚಕ್ಕರ್ ಹಾಕಿ ಹುಡುಗಿ ಹಿಂದೆ ಸುತ್ತಾಡ್ತಿದ್ದ, ಕೇರಳಕ್ಕೆ ಹೋದವನು ಹೆಣವಾಗಿ ಬಂದ

ಅಪ್ರಾಪ್ತ ಬಾಲಕ ನೋರ್ವ ಅಪ್ರಾಪ್ತ ಬಾಲಕಿ ಜೊತೆ ಪ್ರೀತಿ ಮಾಡಿ ಕೇರಳಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಲು ಮುಂದಾಗಿರುತ್ತಾನೆ, ಆಗ ಹುಡುಗಿ ಮನೆಯವರು ಹುಡುಗನ ಮನೆಯವರಿಗೆ ನಿಮ್ಮ ಮಗ ನಮ್ಮ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ ಕರೆದು ತಂದು ನಮಗೆ ಒಪ್ಪಿಸಿ. ಇಲ್ಲವಾದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಹೇಳಿರುತ್ತಾರೆ. ಆಗ ಹೆತ್ತವರು ಮಗನನ್ನು ಹುಡುಕಿ ಬುದ್ದಿ ಹೇಳಿ ಅವರ ಮಗಳನ್ನು ಅವರ ಮನೆಗೆ ಕಳಿಸಿರುತ್ತಾರೆ. ಇಷ್ಟಕ್ಕೆ ಸುಮ್ಮನಾಗಿದ್ರೆ ಈ ಪ್ರಕರಣ ಸುಖಾಂತ್ಯ ಕಾಣುತ್ತಿತ್ತು. ಆದರೆ

ಪ್ರೀತಿ ಪ್ರೇಮ ಪ್ರಣಯ ಎಂದು ಕಾಲೇಜಿಗೆ ಚಕ್ಕರ್ ಹಾಕಿ  ಹುಡುಗಿ ಹಿಂದೆ ಸುತ್ತಾಡ್ತಿದ್ದ, ಕೇರಳಕ್ಕೆ ಹೋದವನು ಹೆಣವಾಗಿ ಬಂದ
ಕಾಲೇಜಿಗೆ ಚಕ್ಕರ್ ಹಾಕಿ ಹುಡುಗಿ ಹಿಂದೆ ಸುತ್ತಾಡ್ತಿದ್ದ, ಕೊನೆಗೆ
Follow us
ಸಾಧು ಶ್ರೀನಾಥ್​
|

Updated on:Mar 19, 2024 | 4:44 PM

ಆ ಹುಡುಗನ ಮುಖದ ಮೇಲೆ ಇನ್ನೂ ಸರಿಯಾಗಿ ಮೀಸೆ ಚಿಗುರಿರಲಿಲ್ಲ. ಅದರೂ ಪ್ರೀತಿ, ಪ್ರೇಮ, ಪ್ರಣಯ ಎಂದು ಕಾಲೇಜಿಗೆ ಚಕ್ಕರ್ ಹಾಕಿ ಹುಡುಗಿ ಹಿಂದೆ ಸುತ್ತಾಡುತ್ತಿದ್ದ. ಇಷ್ಟೇ ಮಾಡಿ ಸುಮ್ಮನ್ನೇ ಇದ್ದಿದ್ದರೆ ಜೀವಂತವಾಗಿ ಇರುತ್ತಿದ್ದನೇನೋ ಗೊತ್ತಿಲ್ಲ. ಆದರೆ ಪ್ರೀತಿಸಿದ ಹುಡುಗಿ ಜೊತೆ ಮನೆ ಬಿಟ್ಟು ಕೇರಳಕ್ಕೆ ಪರಾರಿಯಾಗಿದ್ದ. ಒಂಬತ್ತು ತಿಂಗಳು ಹೆತ್ತು ಹೊತ್ತವರನ್ನು ಬಿಟ್ಟು ಹುಡುಗಿ ಹಿಂದೆ ಹೋದವನು ಹೆಣವಾಗಿ ಹೋಗಿದ್ದಾನೆ. ಒಂದಡೆ ಬಾಳಿ ಬದಕಬೇಕಾಗಿದ್ದ ಕರುಳು ಬಳ್ಳಿಯನ್ನು ಕಳೆದುಕೊಂಡು ಬಿಕ್ಕಿ, ಬಿಕ್ಕಿ ಅಳುತ್ತಿರುವ ಹೆತ್ತವರು. ಇನ್ನೊಂದಡೆ ತಂಡೋಪತಂಡವಾಗಿ ಬಂದು ಹೆಣವಾಗಿ ಮಲಗಿರುವ ಹುಡುಗನ ಕಂಡು ಮರಮರ ಮರಗುತ್ತಿರುವ ಗ್ರಾಮಸ್ಥರು. ಈ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದು ಹಾವೇರಿ ಜಿಲ್ಲೆ ಸವಣೂರು ಠಾಣಾ ವ್ಯಾಪ್ತಿಯ ಗ್ರಾಮಮೊಂದು.

ಅಪ್ರಾಪ್ತ ಬಾಲಕ ನೋರ್ವ ಅಪ್ರಾಪ್ತ ಬಾಲಕಿ ಜೊತೆ ಪ್ರೀತಿ ಮಾಡಿ ಕೇರಳಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಲು ಮುಂದಾಗಿರುತ್ತಾನೆ, ಆಗ ಹುಡುಗಿ ಮನೆಯವರು ಹುಡುಗನ ಮನೆಯವರಿಗೆ ನಿಮ್ಮ ಮಗ ನಮ್ಮ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ ಕರೆದು ತಂದು ನಮಗೆ ಒಪ್ಪಿಸಿ. ಇಲ್ಲವಾದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಹೇಳಿರುತ್ತಾರೆ. ಆಗ ಹೆತ್ತವರು ಮಗನನ್ನು ಹುಡುಕಿ ಬುದ್ದಿ ಹೇಳಿ ಅವರ ಮಗಳನ್ನು ಅವರ ಮನೆಗೆ ಕಳಿಸಿರುತ್ತಾರೆ.

ಇಷ್ಟಕ್ಕೆ ಸುಮ್ಮನಾಗಿದ್ರೆ ಈ ಪ್ರಕರಣ ಸುಖಾಂತ್ಯ ಕಾಣುತ್ತಿತ್ತು. ಆದರೆ ದ್ವೇಷ ಮತ್ತು ಹಣದಾಸೆಯಿಂದ ಪ್ರಕರಣ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಆತ್ಮಹತ್ಯೆಗೆ ಪ್ರಮುಖ ಕಾರಣ ವಕೀಲರು ಮತ್ತು ಪೊಲೀಸರು ಹಾಗೂ ಗ್ರಾಮದ ಮುಖಂಡರು ರಾಜೀಪಂಚಾಯಿತಿ ಹೆಸರಲ್ಲಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿರುವುದೇ ಕಾರಣ ಎಂದು ಹುಡುಗನ ಕಡೆಯವರು ಆರೋಪ ಮಾಡುತ್ತಿದ್ದಾರೆ.

Also Read: Doctors Negligence: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಮಗು ಸಾವು, ಕುಟುಂಬಸ್ಥರ ಆಕ್ರೋಶ

ಈ ಘಟನೆ ನಡೆದು ನಾಲ್ಕು ದಿನ ಗತಿಸಿದ್ದರೂ ಆರೋಪಿಗಳನ್ನು ಬಂಧಿಸದ ಹಿನ್ನೆಲೆ ಇಂದು ಕುಟುಂಬಸ್ಥರು ಹಾವೇರಿ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ಮಾಡಿ ತಮ್ಮ ಮಗನ ಸಾವಿಗೆ ನ್ಯಾಯ ಸಿಗುವಂತೆ ಮಾಡಲು ಒತ್ತಾಯಿಸಿದ್ದಾರೆ. ಫೊಸ್ಕೊ ಕೇಸ್ ಮಾಡುವುದಾಗಿ ಹೆದರಿಸಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುವ ಕಿರಾತಕರಿಗೆ ಶಿಕ್ಷೆ ಕೊಡಿಸಿ ಎಂದು ಒತ್ತಾಯಿಸಿದ್ದಾರೆ. ಈ ನೊಂದ ಕುಟುಂಬಕ್ಕೆ ಹಾವೇರಿಯ ಕೆಲ ಸಂಘಟನೆಗಳು ಕೈಜೋಡಿಸಿವೆ. ಬೇಗನೆ ಆರೋಪಿಗಳನ್ನು ಬಂಧಿಸದೆ ಇದ್ದರೆ ಉಗ್ರ ಹೋರಾಟದ ಎಚ್ಚೆರಿಕೆ ನೀಡಿದ್ದಾರೆ.

ಒಟ್ಟಾರೆ ಮಾಡಬಾರದ ವಯಸ್ಸಿನಲ್ಲಿ ಆಡಬಾರದ ಆಟವನ್ನು ಆಡಿದರೆ, ಆಗಬಾರದ್ದೇ ಅಗುತ್ತೆ ಎನ್ನುವಂತಾಗಿದೆ ಈ ಪ್ರಕರಣ ಸಾಕ್ಷಿ. ಈ ಸ್ಟೋರಿ ನೋಡಿಯಾದರು ಕಾಲೇಜು ವಿದ್ಯಾರ್ಥಿಗಳು ಸರಿ ದಾರಿಯಲ್ಲಿ ನಡೆಯಲಿ ಎನ್ನುವುದು ನಮ್ಮ ಆಶ್ರಯ ಜೊತೆಗೆ ಹೆಣ್ಣುಮಕ್ಕಳ ರಕ್ಷಣೆಗೆ ಇದ್ದ ಕಾಯ್ದೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ದುರುಳರಿಗೆ ಶಿಕ್ಷೆಯಾಗಲೇ ಬೇಕು ಎನ್ನುವುದು ಜನರ ಒತ್ತಾಯ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ

Published On - 4:44 pm, Tue, 19 March 24

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?