ಹಾವೇರಿಯಲ್ಲಿ ವರುಣನ ಆರ್ಭಟ; ಅವೈಜ್ಞಾನಿಕ ಕಾಮಗಾರಿಗೆ ತುಂಗಾ ಮೇಲ್ದಂಡೆ ಕಾಲುವೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು

| Updated By: ಆಯೇಷಾ ಬಾನು

Updated on: Oct 14, 2024 | 9:18 AM

ಹಾವೇರಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬೆಳೆ ಉಳಿಸಿಕೊಳ್ಳಲು ಹರಸಾರಸ ಪಡುತ್ತಿದ್ದಾರೆ. ಒಂದು ಕಡೆ ಮಳೆ ರಗಳೆ ಮುಂದುವರೆದರೆ, ಇನ್ನೊಂದು ಕಡೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಒಡೆದು ಹತ್ತಾರು ಅವಾಂತರ ಸೃಷ್ಟಿ ಮಾಡಿದೆ.

ಹಾವೇರಿಯಲ್ಲಿ ವರುಣನ ಆರ್ಭಟ; ಅವೈಜ್ಞಾನಿಕ ಕಾಮಗಾರಿಗೆ ತುಂಗಾ ಮೇಲ್ದಂಡೆ ಕಾಲುವೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು
ಅವೈಜ್ಞಾನಿಕ ಕಾಮಗಾರಿ, ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು
Follow us on

ಹಾವೇರಿ, ಅ.14: ಹಾವೇರಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನದಿಂದ ಸಂಜೆಯಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಸೋಯಾಬಿನ್, ಹತ್ತಿ. ಶೇಂಗಾ ಈಗಾ ಕಟಾವಿಗೆ ಬಂದಿದೆ. ಕಟಾವಿಗೆ ಸಿದ್ದವಾಗಿದ್ದು ರೈತರಿಗೆ ಮಳೆ ಅಡ್ಡಿಯಾಗುತ್ತಿದೆ. ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಕಳಪೆ ಕಾಮಗಾರಿಯಿಂದ ಮೊನ್ನೆ ರಾತ್ರಿ ಸುರಿದ ಮಳೆಗೆ ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಕನಕಾಪುರ ಬಳಿ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ. ಇದಕ್ಕೆ ಹಾವೇರಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಹಾವೇರಿ ತಾಲೂಕಿನ ಕನಕಾಪುರ ಸಮೀಪದಲ್ಲಿ ತುಂಗಾ ಮೇಲ್ದಂಡೆ ಕಾಲುವೆ ಒಡೆದ ಪರಿಣಾಮ ಕಾಲುವೆಯಿಂದ ಅಪಾರ ಪ್ರಮಾಣದ ನೀರು ರೈತರ ಹೊಲಗದ್ದೆಗಳಿಗೆ ನುಗ್ಗಿದೆ. ಹೊಲದಲ್ಲಿದ್ದ ಬೆಳೆ ಸರ್ವನಾಶವಾಗಿದೆ. ಹತ್ತಿ, ಗೋವಿನಜೋಳ, ಶೇಂಗಾ, ಸೋಯಾಬಿನ್ ಬೆಳೆ ಕೊಚ್ಚಿ ಹೋಗಿದೆ.

ಇದನ್ನೂ ಓದಿ: ರಸ್ತೆಗುಂಡಿ ಮುಚ್ಚದ ಆಡಳಿತದ ವಿರುದ್ಧ ನಾಗರಿಕರ ವಿಭಿನ್ನ ಪ್ರತಿಭಟನೆ

ಕಳಪೆ ಕಾಮಗಾರಿಯಿಂದಾಗಿ ಕಾಲುವೆ ಒಡೆದಿದೆ. ಕಾಲುವೆ ಒಡೆದು ಎರಡು ದಿನಗಳಾಗಿದ್ರು ಕಾಲುವೆ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಇಷ್ಟೋತ್ತಿಗಾಗಲೆ ಕಾಲುವೆಯಿಂದ ರೈತರ ಹೊಲಗಳಲ್ಲಿ ಹರಿಯುತ್ತಿರುವ ನೀರನ್ನ ನಿಲ್ಲಿಸಬೇಕಿತ್ತು. ಆದ್ರೆ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಲುವೆ ಸರಿಪಡಿಸುವ ಕೆಲಸ ಶುರುವಾಗಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ಹಾವೇರಿ ರೈತರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ವರುಣನ ಅವಕೃಫೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ವರ್ಷ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವಂತಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ