ಅಂತಾರಾಷ್ಟ್ರೀಯ ಮಟ್ಟದ ವಿಷಯ ಸಂಗ್ರಹಕ್ಕಾಗಿ ಜಾನಪದ ವಿವಿ ಸ್ಥಾಪನೆ: ಸಿಎಂ ಬೊಮ್ಮಾಯಿ
ಅಂತರಾಷ್ಟ್ರೀಯ ಮಟ್ಟದ ಎಲ್ಲಾ ವಿಷಯಗಳ ಸಂಗ್ರಹ ಆಗಬೇಕು ಅನ್ನುವ ಉದ್ದೇಶದಿಂದ ಜಾನಪದ ವಿವಿ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ: ಅಂತರಾಷ್ಟ್ರೀಯ ಮಟ್ಟದ ಎಲ್ಲಾ ವಿಷಯಗಳ ಸಂಗ್ರಹ ಆಗಬೇಕು ಅನ್ನುವ ಉದ್ದೇಶದಿಂದ ಜಾನಪದ ವಿವಿ (Folklore University) ಮಾಡಲಾಗಿದೆ. ಬರುವ ದಿನಗಳಲ್ಲಿ ಯಾವುದೇ ದೇಶದ ಜಾನಪದದ ವಿಷಯ ಇಲ್ಲಿ ಸಿಗುವಂತಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Bommai) ಹೇಳಿದರು. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಜಾನಪದ ವಿವಿಯಲ್ಲಿ ಕಲಾಭವನ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಮನುಷ್ಯನ ಬೆಳವಣಿಗೆ ಸಂಪೂರ್ಣವಾಗಿ ವ್ಯಕ್ತ ಆಗಿದ್ದರೆ ಅದು ಜನಪದದಿಂದ ಮಾತ್ರ. ಆಡುಭಾಷೆಯಲ್ಲಿ ಇರುವ ಹಾಡು, ಸಂಗೀತ ಅವತ್ತಿನ ಕಾಲದ ಬದುಕಿನ ಕಥೆ ಹೇಳುತ್ತವೆ. ರೈತಾಪಿ ವರ್ಗ, ನೇಕಾರರು, ದುಡಿಯುವ ವರ್ಗದ ವಿಷಯಗಳನ್ನು ಸಂಗ್ರಹ ಮಾಡಲಾಗಿದೆ. ನಾಗರಿಕತೆಯ ಬದಲಾವಣೆ, ಜಾನಪದ ಹೇಗೆ ಅದಕ್ಕೆ ಹೊಂದಿಕೊಂಡಿತ್ತು ಎಂಬುದು ಸಂಗ್ರಹ ಆಗಿದೆ. ಇಡೀ ಉತ್ತರ ಕರ್ನಾಟದ ಕಲಾವಿದರಿಗೆ ಇಲ್ಲಿ ಅವಕಾಶ ಸಿಗಬೇಕು ಎಂದು ಹೇಳಿದರು.
ಜಾನಪದ ಪ್ರವಾಸಿ ತಾಣ ಇದಾಗಬೇಕು
ಕಲೆ ಜೀವಂತವಾಗಿರಬೇಕು ಅಂತ ಇಷ್ಟು ದೊಡ್ಡ ಕಲಾಮಂದಿರ ನಿರ್ಮಾಣ ಮಾಡಿದ್ದೇವೆ. ಇನ್ನೊಂದು ಹದಿನೈದು ದಿನಗಳಲ್ಲಿ ಕಲಾ ಮಂದಿರಕ್ಕೆ ಫರ್ನಿಚರ್ ಮಾಡಲಾಗುತ್ತದೆ. ಕೇಂದ್ರದ 1 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಮ್ ನಿರ್ಮಾಣವಾಗುತ್ತಿದ್ದು, ವಿಭಿನ್ನವಾಗಿ ಸಿದ್ದಪಡಿಸಲು ಹೇಳಿದ್ದೇನೆ. ಇದು ಜಾನಪದ ಪ್ರವಾಸಿ ತಾಣ ಇದಾಗಬೇಕು. ಜಾನಪದ ವಿವಿ ಅಡಿಗಲ್ಲು ನಾವೇ ಹಾಕಿದ್ದು. ಬಹಳ ಸಂತೋಷದಿಂದ ಕಲಾಭವನ ಇಂದು ಉದ್ಘಾಟನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: Karnataka SSLC Exam: ಮಾರ್ಚ್ 31ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರಗಳ ಸುತ್ತಮುತ ನಿಷೇಧಾಜ್ಞೆ ಜಾರಿ
ನಮ್ಮ ಸಂಸ್ಕೃತಿ ಶ್ರೀಮಂತ ಮಾಡೋ ವಿವಿ
ಜನರ ಮದ್ಯ ಇದ್ದು ತಿಳಿದುಕೊಂಡು ಕಾರ್ಯ ನಿರ್ವಹಿಸುವ ಕುಲಪತಿ ಇಲ್ಲಿದ್ದಾರೆ. ಈ ವಿವಿ ನೌಕರಿ ಸೃಷ್ಟಿ ಮಾಡೋ ವಿವಿ ಅಲ್ಲ, ನಮ್ಮ ಸಂಸ್ಕೃತಿ ಶ್ರೀಮಂತ ಮಾಡೋ ವಿವಿ. ಜಾನಪದ ವಿವಿಯಲ್ಲಿ ಓದಿದ ಮಕ್ಕಳಿಗೆ ವಿಶೇಷ ಕೆಲಸ ಮಾಡಲು ಆರ್ಥಿಕ ನೆರವು ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಎರಡನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಏನು ಬೇಕು ಅದಕ್ಕೆ ಮಂಜುರಾತಿ ನೀಡುವೆ. ಜಾನಪದ ವಿವಿ ಕ್ಯಾಪಸ್ ಇಲ್ಲ. ಕ್ಯಾಂಪಸ್ ರಹಿತ ವಿವಿ ಇದು. ಜನ ಸಮುದಾಯ ಇರೋ ಕಡೆನೇ ಈ ವಿವಿ ಇದೆ.
ಇದನ್ನೂ ಓದಿ: SSLC Exam: ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಉಚಿತ
ಜಾನಪದ ವಿವಿ ಭಾರತಕ್ಕೆ ಪ್ರಸಿದ್ದಿ ಆಗಲಿ
ಪ್ರೊಫೆಸರ್ಗಳು ಜನರ ನಡುವೆ ಹೋಗಲಿ. ನಾಗರೀಕತೆ ಬೇರೆ, ಸಂಸ್ಕೃತಿ ಬೇರೆ. ಮನೆಯಲ್ಲಿ ಮೊದಲು ಒನಕೆ, ಬಿಸಿಕಲ್ಲು ಇತ್ತು. ಈಗ ಮಿಕ್ಸಿ ಬಂತು. ಬಿಸಿಕಲ್ಲೂ ಇಲ್ಲ, ಹಾಡೂ ಇಲ್ಲ. ಈಗೆಲ್ಲಾ ಮಿಕ್ಸಿ ಬಂದಿವೆ. ಟರ್ ಟರ್ ಅನ್ನುತ್ವೆ. ಇದರಲ್ಲಿ ಯಾವ ಸಂಗೀತವೂ ಇಲ್ಲ. ನಮ್ಮತ್ರ ಏನಿದೆ ಅದು ನಾಗರಿಕತೆ. ನಾವೇನಾಗಿದೇವೆ ಅದು ಸಂಸ್ಕೃತಿ. ಜಾನಪದ ವಿವಿ ಸಂಸ್ಕೃತಿ ಉಳಿಸುವ ಕೆಲಸ ಮಾಡಲಿ. ಭಾರತಕ್ಕೆ ಪ್ರಸಿದ್ದಿ ಆಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:10 pm, Wed, 22 March 23