ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು; ಕುನ್ನೂರ ಗಣಪನ ತಯಾರಿಕೆಯಲ್ಲಿ 50ಕ್ಕೂ ಅಧಿಕ ಕುಟುಂಬ ಭಾಗಿ

ಕಲಾವಿದರ ಕುಟುಂಬದವರು ಎಂಟು ನೂರರಿಂದ ಒಂದು ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಹೀಗೆ ತಯಾರು ಮಾಡಿದ ಮೂರ್ತಿಗಳನ್ನು ಕಲಾವಿದರ ಕುಟುಂಬದವರು ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಯ್ದು ಮಾರಾಟ ಮಾಡುತ್ತಾರೆ.

ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು; ಕುನ್ನೂರ ಗಣಪನ ತಯಾರಿಕೆಯಲ್ಲಿ 50ಕ್ಕೂ ಅಧಿಕ ಕುಟುಂಬ ಭಾಗಿ
ಕುನ್ನೂರ ಗಣಪ
Follow us
| Updated By: ಸಾಧು ಶ್ರೀನಾಥ್​

Updated on:Sep 07, 2021 | 5:04 PM

ಹಾವೇರಿ: ಕುನ್ನೂರು ಗಣಪತಿಯ ಹೆಸರು ಬಹುಶಃ ಕೇಳದವರೆ ಇಲ್ಲ. ಗಣೇಶ ಚತುರ್ಥಿ ಬಂತೆಂದರೆ ಈ ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಬಣ್ಣಗಳ ಹೊಳಪಿನಿಂದ ಕಂಗೊಳಿಸುವ ವಿಶೇಷತೆ ಹೊಂದಿರುವ ಗಣಪತಿ ಮೂರ್ತಿ ಎಲ್ಲೆಲ್ಲೂ ಜನಪ್ರೀಯತೆ ಪಡೆದಿದೆ. ಅದರಲ್ಲೂ ಗ್ರಾಮದ ನಾರಾಯಣಪ್ಪ ಪತ್ತಾರರ ಮನೆಯಲ್ಲಿ ತಯಾರಾಗುವ ಈ ಮೂರ್ತಿಗಳಿಗೆ ಅತಿ ಹೆಚ್ಚಿನ ಬೇಡಿಕೆ ಇದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಅಂದರೆ ಸಾಕು ಥಟ್ಟನೆ ಗಣಪತಿ ಮೂರ್ತಿಗಳು ನೆನಪಿಗೆ ಬರುತ್ತವೆ. ಕುನ್ನೂರಿನಲ್ಲಿ ತಯಾರಾಗುವ ಮೂರ್ತಿಗಳು ಹಾವೇರಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹೋಗುತ್ತವೆ. ಅನೇಕ‌ ಕಡೆಗಳಿಂದ ಬಂದು ಜನರು ಗಣಪತಿ ಮೂರ್ತಿಗಳನ್ನು ಗಣೇಶ ಚತುರ್ಥಿ ಹಬ್ಬಕ್ಕೆ ಮುನ್ನವೆ ಬುಕ್ ಮಾಡಿ ಹೋಗುತ್ತಾರೆ. ಅದರಲ್ಲೂ ಗ್ರಾಮದ ನಾರಾಯಣಪ್ಪ ಪತ್ತಾರರ ಮನೆಯಲ್ಲಿ ತಯಾರಾಗುವ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಸುಮಾರು ವರ್ಷಗಳಿಂದ ನಾರಾಯಣಪ್ಪ ಪತ್ತಾರರ‌ ಮನೆಯವರು ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಈಗ ಗ್ರಾಮದಲ್ಲಿನ ಸುಮಾರು ಐವತ್ತಕ್ಕೂ ಅಧಿಕ ಕುಟುಂಬಗಳು ಗಣಪತಿ ಮೂರ್ತಿ ತಯಾರು ಮಾಡುತ್ತಿವೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಪತಿ ಮೂರ್ತಿ ತಯಾರು ಮಾಡುವ ಕಲಾವಿದರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವರ್ಷಪೂರ್ತಿ ಕಷ್ಟಪಟ್ಟು ತಯಾರಿಸಿದ ಮೂರ್ತಿಗಳಿಗೆ ಕೊರೊನಾ ಕಾರಣಕ್ಕೆ ಉತ್ತಮ ದರ ಸಿಗದೆ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗಣಪತಿ ಮೂರ್ತಿ ತಯಾರಕರಾದ ಗೀತಾ ಚಿತ್ರಗಾರ ತಿಳಿಸಿದ್ದಾರೆ.

ಕಲಾವಿದರ ಕುಟುಂಬದವರು ಎಂಟು ನೂರರಿಂದ ಒಂದು ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಹೀಗೆ ತಯಾರು ಮಾಡಿದ ಮೂರ್ತಿಗಳನ್ನು ಕಲಾವಿದರ ಕುಟುಂಬದವರು ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಯ್ದು ಮಾರಾಟ ಮಾಡುತ್ತಾರೆ. ಕೊರೊನಾಗಿಂತ ಮುಂಚೆ ಗ್ರಾಮದ ಕಲಾವಿದರು ತಯಾರಿಸಿದ ಮೂರ್ತಿಗಳಿಗೆ ಉತ್ತಮ ದರ ಸಿಗುತ್ತಿತ್ತು. ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಆರು, ಏಳು ಅಡಿ ಎತ್ತರದ ಮೂರ್ತಿಗಳನ್ನು ತಯಾರು ಮಾಡುತ್ತಿದ್ದರು. ಆದರೆ ಕೊರೊನಾ ಶುರುವಾದ್ಮೇಲೆ ಎತ್ತರದ ದೊಡ್ಡ ದೊಡ್ಡ ಗಣಪತಿ ಮೂರ್ತಿಗಳ ತಯಾರಿಕೆ ಇಲ್ಲದಾಗಿದೆ. ಹೀಗಾಗಿ ಕಲಾವಿದರಿಗೆ ಸಂಕಷ್ಟ ಎದುರಾಗಿದೆ. ಇದರ ಜೊತೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸೋ ಮೂರ್ತಿಗಳಿಗೂ ಉತ್ತಮ ದರ ಇಲ್ಲದಾಗಿದೆ.

ganesha idol

ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು

ಆದರೂ ಕುನ್ನೂರು ಗಣಪತಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಈಗ ಇನ್ನೂರರಿಂದ ಐದು, ಹತ್ತು, ಇಪ್ಪತ್ತು ಸಾವಿರ ರೂಪಾಯಿಗೆ ಗಣಪತಿ ಮೂರ್ತಿಗಳು ಮಾರಾಟ ಆಗುತ್ತಿವೆ. ಆದರೆ ಕೊರೊನಾಗಿಂತ ಮೊದಲು ಐನೂರರಿಂದ ಐವತ್ತು ಸಾವಿರ, ಒಂದು ಲಕ್ಷ ರೂಪಾಯಿವರೆಗೂ ಗಣಪತಿ ಮಾರಾಟ ಆಗುತ್ತಿದ್ದವು. ದರದಲ್ಲಿ ಸ್ವಲ್ಪ ಇಳಿಕೆ ಕಂಡಿರುವುದು, ಎತ್ತರದ ಗಣಪತಿ ಮೂರ್ತಿಗಳ ತಯಾರಿಕೆ ಇಲ್ಲದಿರುವುದನ್ನು ಹೊರತುಪಡಿಸಿದರೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣಪತಿಗಳಿಗೆ ಅತಿಹೆಚ್ಚು ಬೇಡಿಕೆ ಬಂದಿದೆ. ಅದರಲ್ಲೂ ವಿಶೇಷತೆ ಹೊಂದಿರುವ ಬಣ್ಣದಿಂದಲ್ಲೇ ಕುನ್ನೂರು ಗಣಪತಿ‌ ಹೆಸರುವಾಸಿ ಆಗಿದೆ ಎಂದು ಪೇಂಟಿಂಗ್ ಕೆಲಸಗಾರ ರೆಹಮಾನಸಾಬ ತಿಳಿಸಿದ್ದಾರೆ.

ಗಣಪತಿ ತಯಾರಿಕೆಯಿಂದಲೆ ಕುನ್ನೂರು ಗ್ರಾಮದ ಹೆಸರು ಪ್ರಸಿದ್ಧವಾಗಿದೆ. ಆರಂಭದಲ್ಲಿ ಗ್ರಾಮದಲ್ಲಿನ ಕೆಲವೇ ಕೆಲವು ಕುಟುಂಬಗಳು ಗಣಪತಿ ಮೂರ್ತಿ ತಯಾರಿಕೆ‌ ಮಾಡ್ತಿದ್ದವು. ಆದರೆ ಈಗ ಗ್ರಾಮದ ಐವತ್ತಕ್ಕೂ ಅಧಿಕ‌ ಕುಟುಂಬಗಳು ಗಣಪತಿ ಮೂರ್ತಿ ತಯಾರು ಮಾಡುತ್ತಿವೆ. ಒಟ್ಟಿನಲ್ಲಿ ಗ್ರಾಮದಲ್ಲಿ ತಯಾರಾಗುವ ಮೂರ್ತಿಗಳು ಹೆಸರು ಮಾಡಿರುವುದರಿಂದ ಗ್ರಾಮಕ್ಕೂ ದೊಡ್ಡ ಹೆಸರು ಬಂದಿದೆ. ಕುನ್ನೂರು ಗಣಪತಿ ಅಂದರೆ ಎಲ್ಲರೂ ಕುನ್ನೂರಿನತ್ತ ಕಣ್ಣು ಹಾಯಿಸುವಂತಾಗಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ: 30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ; ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ

ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ

Published On - 7:39 am, Tue, 7 September 21

ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು