AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೊಂದ ಬಾಲಕಿಯರೇ ಈಕೆಯ ಟಾರ್ಗೆಟ್: ಕೆಲಸ ಕೊಡಿಸುವುದಾಗಿ ಕರೆತಂದು ಹಣಕ್ಕೆ ಮಾರಾಟ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಓರ್ವ ಮಹಿಳೆ ಅಪ್ರಾಪ್ತ ಬಾಲಕಿಯನ್ನು ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದಳು. ಗ್ರಾಮಸ್ಥರು ಇದನ್ನು ಪತ್ತೆಹಚ್ಚಿ ಮಹಿಳೆಗೆ ಧರ್ಮದೇಟು ನೀಡಿದ್ದಾರೆ. ಮಹಿಳೆ ಬಾಲಕಿಯರನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದಳೆಂಬ ಆರೋಪ ಕೇಳಿಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೊಂದ ಬಾಲಕಿಯರೇ ಈಕೆಯ ಟಾರ್ಗೆಟ್: ಕೆಲಸ ಕೊಡಿಸುವುದಾಗಿ ಕರೆತಂದು ಹಣಕ್ಕೆ ಮಾರಾಟ
ಆರೋಪಿ ಲಕ್ಕವ್ವ
ವಿವೇಕ ಬಿರಾದಾರ
|

Updated on: Jul 02, 2025 | 3:45 PM

Share

ಹಾವೇರಿ, ಜುಲೈ​ 02: ಅಪ್ರಾಪ್ತ ಬಾಲಕಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿಂತ್ರಹಿಂಸೆ ನೀಡುತ್ತಿದ್ದ ಮಹಿಳೆಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ಹಾನಗಲ್ (Hangal) ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ನಡೆದಿದೆ. ಬ್ಯಾಗವಾದಿ ಗ್ರಾಮಸ್ಥರು ಇತ್ತೀಚಿಗೆ ಲಕ್ಕವ್ವಳ ಮನೆಗೆ ತೆರಳಿ ಪರಿಶೀಲಿಸಿದ್ದರು. ಈ ವೇಳೆ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರೂಮ್​ನಲ್ಲಿನ ಮಂಚದ ಕೆಳಗೆ ಕೂಡಿ ಹಾಕಿ ಲಕ್ಕವ್ವ ಚಿತ್ರಹಿಂಸೆ ಕೊಟ್ಟಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಬ್ಯಾಗವಾದಿ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ಕೊಟ್ಟು ಬಾಲಕಿಯನ್ನು ರಕ್ಷಿಸಿದ್ದಾರೆ.

ಮನೆ ಬಿಟ್ಟು ಬಂದವರು, ಬಡವರು, ಅನಾಥರು, ನೊಂದ ಯುವತಿಯರು, ಬಾಲಕಿಯರನ್ನೇ ಮಹಿಳೆ ಟಾರ್ಗೆಟ್ ಮಾಡುತ್ತಿದ್ದಳಂತೆ. ಈ ಬಾಲಕಿಯರನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿಗೆ ಮಾರಾಟ ಅಥವಾ ಮದುವೆ ಮಾಡಿಕೊಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

ಲಕ್ಕವ್ವ ಹುಬ್ಬಳ್ಳಿ, ದಾವಣೆಗೆರೆ, ಹಾವೇರಿ, ಮತ್ತಿತರ ಬಸ್ ನಿಲ್ದಾಣಗಳಲ್ಲಿ ಓಡಾಡುತ್ತಿದ್ದ ಒಂಟಿ ಬಾಲಕಿಯರನ್ನು ಪರಿಚಯಿಸಿಕೊಂಡು, ಅವರಿಗೆ ಉದ್ಯೋಗ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದಳು. ನಂತರ ಬಾಲಕಿಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಜೊತೆ ಲಕ್ಕವ್ವ ಜಗಳವಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಆಗ, ಗ್ರಾಮಸ್ಥರು ಲಕ್ಕವ್ವಗೆ ಧರ್ಮದೇಟು ನೀಡಿದ್ದರು.

ಇದನ್ನೂ ಓದಿ
Image
ಯುವತಿ ಮೈಕೈ ಮುಟ್ಟಿ ಎಳೆದಾಡಿದ್ದ ಕಾಮುಕ ಅರೆಸ್ಟ್: ಇಲ್ಲಿದೆ ಕೇಸ್​ನ ಆಳ ಅಗಲ
Image
ಶಿವಮೊಗ್ಗ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
Image
ತನ್ನ ಪ್ರೇಯಸಿಯ ಮಗಳ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿ
Image
ಸಾಂಬಾರ್​ ಮಾಡುವ ವಿಚಾರಕ್ಕೆ ಸ್ನೇಹಿತರ ನಡುವೆ ಕಲಹ, ಕೊಲೆಯಲ್ಲಿ ಅಂತ್ಯ

ಯುವತಿಗೆ ಚಿತ್ರಹಿಂಸೆ ನೀಡಿದ್ದ ಲಕ್ಕವ್ವ

ಈ ಹಿಂದೆಯೂ ಲಕ್ಕವ್ವ ಕೆಲಸ ಕೊಡಿಸುವುದಾಗಿ ಹೇಳಿ ಚಿಕ್ಕಮಗಳೂರಿನ ಓರ್ವ ಯುವತಿಯನ್ನು ಮನೆಗೆ ಕರೆದುಕೊಂಡು ಬಂದು ಕೂಡಿ ಹಾಕಿದ್ದಳು. ಯುವತಿ ಹೇಗೋ ತಪ್ಪಿಸಿಕೊಂಡು ಹೊರಟಿದ್ದ ವೇಳೆ ಆಕೆಯನ್ನು ತಡೆದು ಲಕ್ಕವ್ವ ಗಲಾಟೆ ಮಾಡಿದ್ದಿಳು. ಈ ಯುವತಿಗೆ ಹುಚ್ಚು ಹಿಡಿದಿದೆ ಎಂದು ರಂಪಾಟ ಮಾಡಿದ್ದಳು. ಆಗ, ನೊಂದ ಯುವತಿ ಆಕೆಯ ಕೃತ್ಯವನ್ನೆಲ್ಲ ಜನರ ಎದುರು ಬಿಚ್ಚಿಟ್ಟಿದ್ದಳು.

ಇದನ್ನೂ ಓದಿ: ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ

ಆಗ ಗ್ರಾಮಸ್ಥರು ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಹಿಳೆ ಹಾಗೂ ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಯುವತಿಯನ್ನು ಚಿಕ್ಕಮಗಳೂರಿಗೆ ವಾಪಾಸ್ ಕಳುಹಿಸಿದ್ದರು. ಈಗ ಮತ್ತೊಬ್ಬ ಬಾಲಕಿಯನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಪ್ರಕರಣ ಬಯಲಿಗೆ ಬಂದಿದೆ. ಆಡೂರು ಪೊಲೀಸ್ ಠಾಣೆ ದೂರು ದಾಖಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ