ಹಾವೇರಿ: 50 ಜನರಿಗೆ ಫುಡ್ ಪಾಯ್ಸನ್, ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿದ್ದ ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಅಮಾನತು
ಚಿಕಿತ್ಸೆ ಕೊಡಲು ನಿರ್ಲಕ್ಷ್ಯ ತೊರಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಪುಷ್ಪಾ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಹಾವೇರಿ: ಚಿಕಿತ್ಸೆ ಕೊಡಲು ನಿರ್ಲಕ್ಷ್ಯ ತೊರಿದ್ದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿ(Suspend) ಆದೇಶಿಸಲಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಪುಷ್ಪಾ ಸಸ್ಪೆಂಡ್ ಮಾಡಿ ಹಾವೇರಿ ಡಿಎಚ್ಓ ರಾಘವೇಂದ್ರ ಸ್ವಾಮಿ ಆದೇಶ ಹೊರಡಿಸಿದ್ದಾರೆ. ಮೇ 23ರಂದು ಫುಡ್ ಪಾಯ್ಸನ್(Food Poison) ಆಗಿ 40ಕ್ಕೂ ಹೆಚ್ಚು ಜನ ರಟ್ಟಿಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11 ಗಂಟೆಯಾದರೂ ಚಿಕಿತ್ಸೆ ನೀಡಿರಲಿಲ್ಲ. ವೈದ್ಯೆ ಪುಷ್ಪಾ ತಡವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಈ ಹಿನ್ನೆಲೆ ಅಮಾನತ್ತು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದು ವೈದ್ಯಾಧಿಕಾರಿಯನ್ನು ಅಮಾನತ್ತು ಮಾಡಿ ಡಿಎಚ್ ಓ ಆದೇಶ ಹೊರಡಿಸಿದ್ದಾರೆ.
ಘಟನೆ ಹಿನ್ನೆಲೆ
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಪ್ಪದಹಳ್ಳಿ ಗ್ರಾಮದಲ್ಲಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಮೇ 22ರ ರಾತ್ರಿ ನಡೆದ ಚಪ್ಪದಹಳ್ಳಿಯ ಶಂಕರಪ್ಪ ಹಿತ್ತಲಮನಿ ಎಂಬುವರ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ 50ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ ಶುರುವಾಗಿತ್ತು. ಹೀಗಾಗಿ ಕೂಡಲೇ ರಾತ್ರೋ ರಾತ್ರಿ ಅಸ್ವಸ್ಥಗೊಂಡವರಿಗೆ ರಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದ್ರೆ ವೈದ್ಯಾಧಿಕಾರಿ ಪುಷ್ಪಾ ಘಟನೆಗೆ ಸ್ಪಂಧಿಸದೆ ಬೇಜವಾಬ್ದಾರಿತನ ತೋರಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ತಡವಾಗಿ ಆಸ್ಪತ್ರೆಗೆ ಹಾಜರಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಸಸ್ಪೆಂಡ್ಗೆ ಒತ್ತಾಯಿಸಿದ್ದು ಜನಗಳ ಒತ್ತಾಯದ ಮೇರೆಗೆ ಹಾವೇರಿ ಡಿಎಚ್ಓ ರಾಘವೇಂದ್ರ ಸ್ವಾಮಿ ಅವರು ವೈದ್ಯಾಧಿಕಾರಿ ಪುಷ್ಪಾ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಹಾವೇರಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:25 pm, Wed, 24 May 23