
ಹಾವೇರಿ, ಜುಲೈ 27: ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಅಕ್ಕ ತಂಗಿ (sisters) ಪುಣೆಯಲ್ಲಿ ಪತ್ತೆ ಆಗಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹಾವೇರಿಯ (Haveri) ಅಬ್ದುಲ್ ಖಾದರ್ ಲೋಹಾರ್ ಪುತ್ರಿಯರಾದ ಉಮರ್ ಖೈರ್ ಫಾತಿಮಾ ಮತ್ತು ಉಮ್ಮಿ ಹಬೀಬಾ ನಾಪತ್ತೆಯಾಗಿದ್ದ ಅಕ್ಕ-ತಂಗಿ. ಹಾವೇರಿ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಹಾವೇರಿಯ ಲಯನ್ಸ್ ಆಂಗ್ಲ ಶಾಲೆಯಲ್ಲಿ ಓದುತ್ತಿದ್ದ ಸಹೋದರಿಯರು, ಶನಿವಾರ ಶಾಲೆ ಮುಗಿಯುತ್ತಿದ್ದಂತೆ ಕಾಣೆಯಾಗಿದ್ದರು. ಎಷ್ಟೇ ಹುಡಕಾಟ ನಡೆಸಿದರೂ ಸಿಗದ ಕಾರಣ ಆತಂಕಗೊಂಡ ಪೋಷಕರು ನಿನ್ನೆ ಹಾವೇರಿ ಮಹಿಳಾ ಠಾಣೆಯಲ್ಲಿ ಫಾತಿಮಾ ಮತ್ತು ಉಮ್ಮಿ ಹಬೀಬಾ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಅಕ್ಕ-ತಂಗಿ ಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಯುವಕನ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಮುಖ ಆರೋಪಿ ಮಹಿಮಾ ಲಾರೆನ್ಸ್ನ ಮಾಜಿ ಪ್ರಿಯತಮೆ ಎನ್ನುವುದು ಬೆಳಕಿಗೆ ಬಂದಿದೆ. ಮಹಿಮಾ ಮತ್ತು ಸುರೇಶ್ ಎಂಬುವವರು ಲಾರೆನ್ಸ್ ಕಿಡ್ನ್ಯಾಪ್ಗೆ ಸ್ಕೇಚ್ ಹಾಕಿದ್ದರು. ಅದರಂತೆ ಪೋಕರ್ ಗೇಮ್ ಆಡಲು ಇಂದಿರಾನಗರ ಪಬ್ನಲ್ಲಿದ್ದ ಲಾರೆನ್ಸ್ನ್ನು ಹೊರಗೆ ಬಾ, ನಿನ್ನ ಮೀಟ್ ಮಾಡಬೇಕು ಅಂತಾ ಮಹಿಮಾ ಕರೆ ಮಾಡಿದ್ದಾಳೆ. ಹೊರಗೆ ಬಂದ ಲಾರೆನ್ಸ್ನನ್ನ ಕಿಡ್ನ್ಯಾಪ್ ಮಾಡಲಾಗಿದೆ.
ಲಾರೆನ್ಸ್ನನ್ನ ಕಿಡ್ನ್ಯಾಪ್ ಮಾಡಿ ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ಕೂಡಿ ಹಾಕಿದ್ದಾರೆ. ಎರಡೂವರೇ ಕೋಟಿ ಹಣ ನೀಡುವಂತೆ ಪ್ರತಿದಿನ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಒಂದು ದಿನ ಲಾರೆನ್ಸ್ ಜೋರಾಗಿ ಕೂಗಿಕೊಂಡಿದ್ದಾನೆ. ಪಕ್ಕದ ಮನೆಯವರ ಮೂಲಕ ತಂಗಿಯನ್ನ ಸಂಪರ್ಕಿಸಿ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿತ್ತು.
ಇದನ್ನೂ ಓದಿ: ‘ಭೇಟಿಯಾಗೋಣ ಬಾ ಗೆಳೆಯ’ ಸ್ನೇಹಿತೆಯ ಮಾತು ನಂಬಿ ಹೋಟೆಲ್ನಿಂದ ಹೊರಬಂದ ಯುವಕ ಕಿಡ್ನ್ಯಾಪ್
ಪೊಲೀಸರು ಫೋನ್ ಲೊಕೇಶನ್ ಹುಡುಕಿ ಮನೆ ಬಳಿ ಹೋದಾಗ ಆರೋಪಿಗಳು ಕಾರಿನಲ್ಲಿ ಪರಾರಿ ಆಗಿದ್ದರು. ಬಳಿಕ ಲಾರೆನ್ಸ್ನನ್ನ ಯಶವಂತಪುರ ಬಳಿ ಇಳಿಸಿ ಹೋಗಿದ್ದರು. ಸದ್ಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿಂಗ್ ಪಿನ್ ಮಹಿಮಾ, ಸುರೇಶ್ ಸೇರಿ ಇನ್ನೂ ನಾಲ್ವರಿಗಾಗಿ ತೀವ್ರ ಹುಡುಕಾಟ ನಡೆದಿದೆ.
ವರದಿ: ಅಣ್ಣಪ್ಪ ಬಾರ್ಕಿ ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:15 pm, Sun, 27 July 25