ಪದವೀಧರ ಚುನಾವಣೆಯಲ್ಲಿ ವೋಟ್ ಚೋರಿ ಆರೋಪ: ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಪತ್ನಿ ಮತವೇ ಚೋರಿ!

ಹಾವೇರಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ಮತದಾನ ಆರೋಪ ಕೇಳಿಬಂದಿದೆ. ಬೂತ್ ಸಂಖ್ಯೆ 85ರಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪತ್ನಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ನಕಲಿ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಮತದಾನದ ಹಕ್ಕು ಇಲ್ಲದಿದ್ದರೂ, ಮತದಾನ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ಮತ್ತು ಕ್ರಮಕ್ಕೆ ಬಿಜೆಪಿ ನಾಯಕರು ಆಗ್ರಹಿಸಲಾಗಿದೆ.

ಪದವೀಧರ ಚುನಾವಣೆಯಲ್ಲಿ ವೋಟ್ ಚೋರಿ ಆರೋಪ: ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಪತ್ನಿ ಮತವೇ ಚೋರಿ!
ನಕಲಿ ಮತದಾನ
Edited By:

Updated on: Oct 24, 2026 | 6:44 PM

ಹಾವೇರಿ, ಅಕ್ಟೋಬರ್​ 24: ರಾಜ್ಯದಲ್ಲಿ ವೋಟ್ ಚೋರಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇವಿಎಂನಲ್ಲಿ ವೋಟ್ ಚೋರಿ ಆಗುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್​​ಗೆ ಇದೀಗ ಮುಜುಗರ ಉಂಟುಮಾಡುವ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ನಿನ್ನೆಯಷ್ಟೇ ಮುಗಿದಿರುವ ಪಶ್ಚಿಮ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕೂಡ ವೋಟ್ ಚೋರಿ ಆರೋಪ ಕೇಳಿಬಂದಿದೆ. ಹಾವೇರಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ಅವರ ಪತ್ನಿ ಹೆಸರಿನಲ್ಲಿ ‘ಕೈ’ ಕಾರ್ಯಕರ್ತೆ ಅಕ್ರಮ ಮತದಾನ ಮಾಡಿರುವ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ್ ಕುಮಾರ್ ಮತ್ತು ಅವರ ಪತ್ನಿ ಪದವೀಧರ ಕ್ಷೇತ್ರದ ಮತವನ್ನು ಹೊಂದಿದ್ದರು. ನಿನ್ನೆ ಸಂಜೀವ್ ಕುಮಾರ್ ತಮ್ಮ ಮತ ಚಲಾಯಿಸಿದ್ದಾರೆ. ಆದರೆ ಅಪರ ಪತ್ನಿ ಆಶಾ ಪಾಟೀಲ್ ಮತಗಟ್ಟೆಗೆ ಬಂದು ಮತಹಾಕಿಲ್ಲ. ಆದರೆ ಕಾಂಗ್ರೆಸ್ ಎಸ್​​ಟಿ ಮೋರ್ಚಾದ ನಾಯಕಿ ಶಿಲ್ಪಾ ಬಡಮ್ಮನವರ್ ಅವರು ಮತ ಚಲಾಯಿಸಿದ್ದಾರೆಂದು ಆರೋಪಿಸಿಲಾಗಿದೆ. ಹಾವೇರಿಯ ಎಸಿ ಕಚೇರಿಯ ಕೋರ್ಟ್ ಹಾಲ್​ನಲ್ಲಿದ್ದ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ನಾಯಕರ ಆರೋಪ ಏನು?

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಜೊತೆ ಆಗಮಿಸಿದ್ದ ಶಿಲ್ಪಾ, ಆಶಾ ಪಾಟೀಲ್ ತಾನೇ ಅಂತ ಮತ ಹಾಕಿದ್ದಾರೆ ಅಂತ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ‘ಚುನಾವಣಾ ಸಿಬ್ಬಂದಿ, ಆಶಾ ಪಾಟೀಲ್ ಅಂತ ಹೆಸರು ಕರೆದಾಗ ಈ ಶಿಲ್ಪಾ ಗುಡೆಮ್ಮನವರ ಹೋಗಿ ಮತ ಹಾಕಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ವೋಟ್ ಚೋರಿ ಆರೋಪ ಮಾಡುತ್ತದೆ. ಆದ್ರೆ ಇಲ್ಲಿ ಕಾಂಗ್ರೆಸ್ ಸಾಕ್ಷಿ ಸಮೇತ ವೋಟ್ ಚೋರಿ ಮಾಡಿದೆ’ ಅಂತ ಆರೋಪಿಸಿದ್ದಾರೆ. ಮತ ಹಾಕಿರುವ ಶಿಲ್ಪಾ, ಗ್ಯಾರಂಟಿ ಸಮಿತಿ ಸದಸ್ಯಯಾಗಿದ್ದಾಳೆ. ಶಿಲ್ಪಾ, ಪದವೀಧರ ಕ್ಷೇತ್ರಕ್ಕೆ ವೋಟ್ ಹೊಂದಿಲ್ಲ, ಆದರೂ ಮತಹಾಕಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲೂ ವೋಟ್ ಚೋರಿ ಆರೋಪ

ನಿನ್ನೆ ಹುಬ್ಬಳ್ಳಿ ನಗರದ ಪಾತೀಮಾ ಶಾಲೆಯಲ್ಲಿ ಸೈಯದ್ ಇರ್ಪಾನ್ ಬೆಳಗಾವಿ ಎನ್ನುವವರ ಮತವನ್ನು ಬೇರೊಬ್ಬರು ಹಾಕಿದ್ದಾರೆ. ಬಿಜೆಪಿ ವೋಟ್ ಚೋರಿ ಮಾಡಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಜೊತೆಗೆ ಸರ್ವೋದಯ ಸರ್ಕಲ್​ನಲ್ಲಿ ದಿಢೀರನೆ ಪ್ರತಿಭಟನೆ ಕೂಡ ಮಾಡಿದ್ದರು. ನಂತರ ಚುನಾವಣಾ ಸಿಬ್ಬಂದಿ, ಸೈಯದ್ ಇರ್ಪಾನ್ ಬೆಳಗಾವಿ ಅವರಿಗೆ ಚಾಲೆಂಜ್ ಮತ ಹಾಕಲು ಅವಕಾಶ ನೀಡಿದ್ದರು.

ಇದನ್ನೂ ಓದಿ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಗಿಫ್ಟ್ ಕೂಪನ್, ಹಣ ಹಂಚಿಕೆ ಆರೋಪ

ಒಟ್ಟಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಇದೀಗ ವೋಟ್ ಚೋರಿ ಆರೋಪ ಪ್ರತ್ಯಾರೋಪ ಹೆಚ್ಚಾಗಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದೆ.

Fake Voting In West Graduates Election, Congress Leader Allegedly Casts Proxy Vote in Haveri

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us