ಹಾವೇರಿ: ಬಾವುಟ ಕಟ್ಟುವ ವಿಚಾರದಲ್ಲಿ ಹಿಂದೂ ಮುಸ್ಲಿಂ ಗಲಾಟೆ
ಬಾವುಟ ಕಟ್ಟುವ ವಿಚಾರದಲ್ಲಿ ಹಿಂದೂ ಮುಸ್ಲಿಂ ಯುವಕರ ನಡುವೆ ಗಲಾಟೆ ನಡೆದ ಘಟನೆ ಹಾವೇರಿ ನಗರದ ಸುಭಾಷ್ ಸರ್ಕಲ್ನಲ್ಲಿ ನಡೆದಿದೆ. ಕೇಸರಿ ಬಾವುಟಕ್ಕಿಂತ ದೊಡ್ಡ ಹಸಿರು ಬಾವುಟಗಳನ್ನು ಕಟ್ಟಲಾಗಿದೆ. ಈ ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದಿದೆ.
ಹಾವೇರಿ, ಸೆ.22: ಬಾವುಟ ಕಟ್ಟುವ ವಿಚಾರದಲ್ಲಿ ಹಿಂದೂ ಮುಸ್ಲಿಂ ಯುವಕರ ನಡುವೆ ಗಲಾಟೆ ನಡೆದ ಘಟನೆ ಹಾವೇರಿ (Haveri) ನಗರದ ಸುಭಾಷ್ ಸರ್ಕಲ್ನಲ್ಲಿ ನಡೆದಿದೆ. ಕೇಸರಿ ಬಾವುಟಕ್ಕಿಂತ ದೊಡ್ಡ ಹಸಿರು ಬಾವುಟಗಳನ್ನು ಕಟ್ಟಲಾಗಿದೆ. ಈ ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದಿದೆ.
ಗಣೇಶ ಹಬ್ಬದ ಪ್ರಯುಕ್ತ ಸರ್ಕಲ್ ತುಂಬ ಕೇಸರಿ ಬಾವುಟ ಕಟ್ಟಲಾಗಿತ್ತು. ಸರ್ಕಾರಿ ಸ್ವಾಮ್ಯದ ಟವರ್ ಹಾಗೂ ಮರಗಳ ಮೇಲೂ ಕೇಸರಿ ಧ್ವಜ ಕಟ್ಟಲಾಗಿತ್ತು. ಆದರೆ ಕೆಲವು ಮುಸ್ಲಿಂ ಯುವಕರು ಕೇಸರಿ ಧ್ವಜಕ್ಕಿಂತ ಎತ್ತರವಾಗಿ ಹಸಿರು ಧ್ವಜ ಕಟ್ಟಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ
ಮುಸ್ಲಿಮರು ಬಾವುಟ ಕಟ್ಟಿದ ಹಿನ್ನೆಲೆ ಎರಡು ಕೋಮುಗಳ ಯುವಕರ ನಡುವೆ ವಾಗ್ವಾದ ನಡೆದಿದೆ. ಇದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪರಿಸ್ಥಿತಿ ತಲುಪುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮನವೋಲಿಸಲು ಹರಸಾಹಪಟ್ಟರು.
ಸರ್ಕಾರಿ ಸ್ವಾಮ್ಯದಲ್ಲಿ ಕಟ್ಟಲಾದ ಕೇಸರಿ ಝೆಂಡಾ ತೆರವಿಗೆ ಮುಸ್ಲಿಂ ಯುವಕರು ಪಟ್ಟು ಹಿಡಿದರೆ, ಇತ್ತ ನಮ್ಮ ಹಬ್ಬ ಇದೆ ನಾವು ಝೆಂಡಾ ಇಳಿಸಲ್ಲ ಅಂತ ಹಿಂದೂ ಯುವಕರ ಪಟ್ಟು ಹಿಡಿದರು. ಕೊನೆಗೆ ಟವರ್ ಮೇಲಿದ್ದ ಎರಡು ಬಾವುಟಗಳನ್ನು ಪೊಲೀಸರು ಕೆಳಗಿಳಿಸಿದರು. ಸದ್ಯ ಸ್ಥಳದಲ್ಲಿ ಹಾವೇರಿ ಡಿವೈಎಸ್ಪಿ, ಸಿಪಿಐ ಹಾಗೂ ನೂರಕ್ಕೂ ಹೆಚ್ಚು ಪೊಲೀಸರು ಬಿಡು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ