Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

ಹಾವೇರಿ ಜಿಲ್ಲೆಯಲ್ಲಿನ ಕೆಲವು ಪುರಾತನ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲಾಗುವುದು. ಪ್ರತಿ ತಾಲೂಕಿನ ಒಂದೊಂದು ಪಾರಂಪರಿಕ ಸ್ಮಾರಕಗಳನ್ನು ಆಯ್ಕೆ ಮಾಡಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಾವೇರಿಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ
ಶಿಲಾಶಾಸನ
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 20, 2023 | 11:31 AM

ಹಾವೇರಿ ಸೆ.18: ಹಾನಗಲ್ (Hangal) ತಾಲೂಕಿನ ಹಿರೇಕೌಂಶಿ ಗ್ರಾಮದ ಲೋಕಪರಮೇಶ್ವರಿ ದೇವಸ್ಥಾನದ ಬಳಿ ಬಾದಾಮಿ (Badami) ಚಾಲುಕ್ಯರ (Chalukya) ಕಾಲದ ಶಿಲಾಶಾಸನ ಪತ್ತೆಯಾಗಿದೆ. ಈ ಶಾಸನ 7 ನೇಶತಮಾನದಲ್ಲಿ ಆಳಿದ ಎರಡನೇ ಪುಲಕೇಶಿ ಮಗ ಆದಿತ್ಯವರ್ಮನ್ ಕಾಲದ್ದು ಎಂದು ತಿಳಿದುಬಂದಿದೆ. ಈ ಶಿಲಾ ಶಾಸನ ಆದಿತ್ಯವರ್ಮನ ಮೊದಲ ಶಿಲಾ ಶಾಸನವೆಂದು ಪರಿಗಣಿಸಲ್ಪಟ್ಟಿದ್ದು, ಅಕ್ಷರಗಳು ಕನ್ನಡದಲ್ಲಿವೆ.

ಮೈಸೂರಿನ ಶಿಲಾಶಾಸನ ತಜ್ಞರ ಪ್ರಕಾರ, ಕಗುಮಸಿ ಗ್ರಾಮದ ತೆರಿಗೆ ವಿನಾಯಿತಿ ನೀಡಿ, ವಿಷ್ಣು, ಸೂರ್ಯ ಮತ್ತು ಶಿವನ ದೇವಾಲಯ ನಿರ್ಮಾಣ ಮಾಡಲು ಜಾಗವನ್ನು ದಾನ ಮಾಡಲಾಗಿದೆ ಎಂದು ಶಿಲಾ ಶಾಸನದಲ್ಲಿ ಕೆತ್ತಲಾಗಿದೆ ಎಂದು ತಜ್ಞರು ಹೇಳಿದರು. ಕುತೂಹಲಕಾರಿ ಅಂಶವೆಂದರೇ ಆದಿತ್ಯವರ್ಮನ ಕಾಲದ ಮೊದಲ ಶಿಲಾ ಶಾಸನ ಇದಾಗಿದೆ.

ಈ ಶಿಲಾ ಶಾಸನದಲ್ಲಿ ಮೂರು ದೇವರುಗಳಿಗೆ ಸಮರ್ಪಿತವಾದ ಜಾಗದ ಬಗ್ಗೆ ಉಲ್ಲೇಖವಾಗಿದೆ. 10-13 ನೇ ಶತಮಾನಗಳಲ್ಲಿ ಕಾಳಾಮುಖರು ತ್ರಿಪುರುಷ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ರಾಜ ಆದಿತ್ಯವರ್ಮನ್​ ತನ್ನ ಮೊದಲ ಆಳ್ವಿಕೆ ವರ್ಷದಲ್ಲಿ ಹೊರಡಿಸಿದ ಕರ್ನೂಲ್ ಫಲಕಗಳ ಮೂಲಕ ನಮಗೆ ಪರಿಚಿತನಾಗಿದ್ದಾನೆ ಎಂದು ತಜ್ಞರು ತಿಳಿಸಿದರು.

ಇದನ್ನೂ ಓದಿ: ರಾಜ್ಯ, ಅಂತಾರಾಜ್ಯಗಳಲ್ಲಿ ಹಾವೇರಿಯ ಕನ್ನೂರು ಗ್ರಾಮದ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ; ಕಳೆದ 100 ವರ್ಷಗಳಿಂದ ವಿಗ್ರಹ ತಯಾರಿಕೆ

ಹಾವೇರಿ ಜಿಲ್ಲೆಯಲ್ಲಿನ ಕೆಲವು ಪುರಾತನ ಸ್ಮಾರಕಗಳನ್ನು ಪುನಃಸ್ಥಾಪಿಸಲು ಆಡಳಿತವು ಯೋಜಿಸಿದೆ. ಪ್ರತಿ ತಾಲೂಕಿಗೆ ಒಂದೊಂದು ಪಾರಂಪರಿಕ ಸ್ಮಾರಕಗಳನ್ನು ಆಯ್ಕೆ ಮಾಡಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನಾವು ಪ್ರಮುಖ ಸ್ಮಾರಕಗಳ ಪಟ್ಟಿಯನ್ನು ಮಾಡಿದ್ದೇವೆ ಮತ್ತು ಅನೇಕ ಸ್ಮಾರಕಗಳು ಮತ್ತು ಪಾರಂಪರಿಕ ರಚನೆಗಳನ್ನು ಹೊಂದಿರುವ ಹಿರೇಕೌಂಶಿಯ ಲೋಕಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹಾವೇರಿಯ ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ