ಸಾವರ್ಕರ್ ಬಗ್ಗೆ ಇಂದಿರಾ ಗಾಂಧಿಯವರು ದೇಶದ ಶ್ರೇಷ್ಠ ಪುತ್ರ ಅಂದಿದ್ದರು, ಒಂದು ವರ್ಗಕ್ಕೆ ನೋವುಂಟು ಮಾಡಬಾರದು -ಸಿಎಂ ಬೊಮ್ಮಾಯಿ

| Updated By: ಆಯೇಷಾ ಬಾನು

Updated on: Aug 21, 2022 | 5:26 PM

ಜನರಲ್ಲಿ ಗೊಂದಲ, ಒಂದು ವರ್ಗಕ್ಕೆ ನೋವುಂಟು ಮಾಡಬಾರದು. ಸಾಮಾಜಿಕವಾಗಿ ಶಾಂತಿಯಿಂದ ಇರಬೇಕು. ದೇಶದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದರ ಬಗ್ಗೆ ಚರ್ಚೆಗಳು ನಡೆಯಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.

ಸಾವರ್ಕರ್ ಬಗ್ಗೆ ಇಂದಿರಾ ಗಾಂಧಿಯವರು ದೇಶದ ಶ್ರೇಷ್ಠ ಪುತ್ರ ಅಂದಿದ್ದರು, ಒಂದು ವರ್ಗಕ್ಕೆ ನೋವುಂಟು ಮಾಡಬಾರದು -ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಹಾವೇರಿ: ಸಾವರ್ಕರ್(Veer Savarkar) ಬಗ್ಗೆ ಇಂದಿರಾ ಗಾಂಧಿಯವರು(Indira Gandhi) ದೇಶದ ಶ್ರೇಷ್ಠ ಪುತ್ರ ಅಂದಿದ್ದರು. ಅದು ದಾಖಲೆಗಳಲ್ಲಿದೆ. ಜನರಲ್ಲಿ ಗೊಂದಲ, ಒಂದು ವರ್ಗಕ್ಕೆ ನೋವುಂಟು ಮಾಡಬಾರದು ಎಂದು ಹಾವೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಸುಲ್ತಾನ್ ಬಗ್ಗೆ ಕಾಂಟ್ರೋವರ್ಸಿ ಇದೆ. ಸಾಮಾಜಿಕವಾಗಿ ಶಾಂತಿಯಿಂದ ಇರಬೇಕು. ದೇಶದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದರ ಬಗ್ಗೆ ಚರ್ಚೆಗಳು ನಡೆಯಬೇಕು ಎಂದರು. ಇನ್ನು ಜನೋತ್ಸವ ಅಲ್ಲ ಬ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತವನ್ನು‌ ಐದು ವರ್ಷ ಜನರು ನೋಡಿ ತಿರಸ್ಕಾರ ಮಾಡಿದ್ದಾರೆ. ಬ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ದೇಶದಲ್ಲಿ ಭ್ರಷ್ಟಾಚಾರ ಆರಂಭಿಸಿದ್ದೆ ಕಾಂಗ್ರೆಸ್. ನೆಲ, ಜಲ ಏನನ್ನೂ ಬಿಡಲಿಲ್ಲ. ಇದನ್ನೆಲ್ಲ ಮಾಡಿದ್ದಕ್ಕೆ ಜನರು ನಿಮ್ಮನ್ನು ತಿರಸ್ಕಾರ ಮಾಡಿದರು. ಅವರು ಸಿದ್ದರಾಮೋತ್ಸವ ಮಾಡಿದರು. ನಾವು ಜನೋತ್ಸವ ಮಾಡ್ತಿದ್ದೇವೆ. ಜನರು ತೀರ್ಮಾನ ಮಾಡ್ತಾರೆ ಎಂದರು.

ಇನ್ನು ಇದೇ ವೇಳೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ವರದಿ ಪ್ರಗತಿಯಾಗಿದೆ. ವರದಿ ಬಂದ ಮೇಲೆ ಅದರ ಶಿಫಾರಸುಗಳು ಏನು? ಮೀಸಲಾತಿಗೆ ತನ್ನದೇಯಾದ ಕಾನೂನು, ಸುಪ್ರೀಂ ಕೋರ್ಟ್ ಜಡ್ಜಮೆಂಟ್ ಇದೆ ಎಂದರು.

ಬೆಳಗಾವಿಯಲ್ಲಿ ಸಾವರ್ಕರ್ ಹವಾ

ಇನ್ನು ಮತ್ತೊಂದು ಕಡೆ ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ಸಾವರ್ಕರ್ ಹವಾ ಇರಲಿದೆ. ಬೆಳಗಾವಿಯ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಫೋಟೋ ಹಾಕಲು ನಿರ್ಧರಿಸಲಾಗಿದೆ. 350ಕ್ಕೂ ಅಧಿಕ ಗಣೇಶೋತ್ಸವ ಮಂಡಳಿಗಳ ಮಂಟಪದಲ್ಲಿ ಸಾವರ್ಕರ್ ಫೋಟೋ ರಾರಾಜಿಸಲಿದೆ. ಪ್ರತಿಯೊಂದು ಗಣೇಶ ಮಂಟಪಗಳಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಪೋಟೋ ಹಾಕಲು‌ ಬೆಳಗಾವಿ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಬೆಂಬಲ ಸೂಚಿಸಿದ್ದಾರೆ. ಸಾವರ್ಕರ್ ಫೋಟೋ ಜೊತೆಗೆ ಅವರ ಇತಿಹಾಸ ಸಂದೇಶ ಸಾರುವ ಬರಹಗಳ ಪ್ರದರ್ಶನ ಕೂಡ ಮಾಡಲಾಗುವುದು.

ವೀರ್ ಸಾವರ್ಕರ್‌ಗೂ ಬೆಳಗಾವಿಗೂ ಇದೇ ನಂಟು

1950ರ ವೇಳೆ ಸಾವರ್ಕರ್ ಹಿಂಡಲಗಾ ಜೈಲಿನಲ್ಲಿದ್ದರು. ವಿಚಾರಣಾಧೀನ ಕೈದಿಯಾಗಿ 100 ದಿನ ಹಿಂಡಲಗಾ ಜೈಲಿನಲ್ಲಿದ್ದರು. 1950ರ ಜುಲೈ 13ರಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ರಿಲೀಸ್ ಆದ್ರು.

Published On - 4:45 pm, Sun, 21 August 22