ಏಲಕ್ಕಿ ನಾಡಿನಲ್ಲಿ ಗ್ರಾಮೀಣ ಕ್ರೀಡೆ ಸಂಭ್ರಮ- ಹಾವೇರಿಯಲ್ಲಿ ಕಳೆಗಟ್ಟಿದ ಹೋರಿ ಬೆದರಿಸೋ ಸ್ಪರ್ಧೆ
ಹಾವೇರಿ: ಓಟಕ್ಕೆ ನಿಂತರೆ ಸಾಟಿಯೇ ಇಲ್ಲ. ಸಾವಿರ ಜನರಿದ್ದರೂ ಭಯದ ಮಾತೇ ಇಲ್ಲ. ಗುರಿಯತ್ತ ಮಾತ್ರ ಚಿತ್ತ. ಕೇಕೆ, ಶಿಳ್ಳೆ ಶಬ್ದ ಕೇಳಿದರಂತೂ ಇವ್ರ ಮೈಯಲ್ಲೆಲ್ಲಾ ವಿದ್ಯುತ್ ಸಂಚಾರ. ಈ ಹೀರೋಗಳ ಓಟದಿಂದ ಊರ ತುಂಬೆಲ್ಲಾ ಸಂಭ್ರಮವೋ ಸಂಭ್ರಮ. ಹಾವೇರಿ ತಾಲೂಕಿನ ಭರಡಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆಯ ಹೈವೋಲ್ಟೇಜ್ ದೃಶ್ಯಗಳಿವು. ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ಹೋರಿಗಳು ಮಿಂಚಿನಂತೆ ಓಟ ಕಿತ್ತಿದ್ವು. ಒಡೆಯ, ರಾಜ್ ಕುಮಾರ, ಪೈಲ್ವಾನ್ […]
ಹಾವೇರಿ: ಓಟಕ್ಕೆ ನಿಂತರೆ ಸಾಟಿಯೇ ಇಲ್ಲ. ಸಾವಿರ ಜನರಿದ್ದರೂ ಭಯದ ಮಾತೇ ಇಲ್ಲ. ಗುರಿಯತ್ತ ಮಾತ್ರ ಚಿತ್ತ. ಕೇಕೆ, ಶಿಳ್ಳೆ ಶಬ್ದ ಕೇಳಿದರಂತೂ ಇವ್ರ ಮೈಯಲ್ಲೆಲ್ಲಾ ವಿದ್ಯುತ್ ಸಂಚಾರ. ಈ ಹೀರೋಗಳ ಓಟದಿಂದ ಊರ ತುಂಬೆಲ್ಲಾ ಸಂಭ್ರಮವೋ ಸಂಭ್ರಮ.
ಹಾವೇರಿ ತಾಲೂಕಿನ ಭರಡಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆಯ ಹೈವೋಲ್ಟೇಜ್ ದೃಶ್ಯಗಳಿವು. ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ಹೋರಿಗಳು ಮಿಂಚಿನಂತೆ ಓಟ ಕಿತ್ತಿದ್ವು. ಒಡೆಯ, ರಾಜ್ ಕುಮಾರ, ಪೈಲ್ವಾನ್ ಹೀಗೆ ಬೇರೆಬೇರೆ ಚಲನಚಿತ್ರಗಳ ಹೆಸರು ಮತ್ತು ಚಿತ್ರನಟರ ಹೆಸರಿನ ಹೋರಿಗಳು ಅಖಾಡದಲ್ಲಿ ಖದರ್ ತೋರಿಸಿದ್ವು. ಜನ್ರನ್ನ ಸೀಳಿ ಹೋರಿಗಳು ಯಾರ ಕೈಗೂ ಸಿಗದಂತೆ ಗೆಲುವಿನ ದಡ ಮುಟ್ಟಿದ್ರೆ ಅಂತಾ ಹೋರಿಯನ್ನ ವಿಜಯಿ ಅಂತಾ ಘೋಷಿಸಲಾಗುತ್ತೆ. ಒಂದು ವೇಳೆ ಅಖಾಡದಲ್ಲಿ ಓಡೋ ಹೋರಿಯನ್ನ ಪೈಲ್ವಾನರು ಹಿಡಿದ್ರೆ ಅಂಥಾ ಹೋರಿ ಸ್ಪರ್ಧೆಯಿಂದ ಔಟ್ ಆಗುತ್ತೆ.
ಇನ್ನು ಕೊಬ್ಬರಿ ಹೋರಿ ಓಟದ ಸ್ಪರ್ಧೆಗೆ ಅಂತ್ಲೇ ಮಾಲೀಕರು ತಮ್ಮ ತಮ್ಮ ಹೋರಿಗಳನ್ನ ಭರ್ಜರಿಯಾಗಿ ಅಲಂಕಾರ ಮಾಡಿರ್ತಾರೆ. ಹೋರಿ ಕೊರಳಲ್ಲಿ ಕೊಬ್ಬರಿ ಹಾರ, ಮೈಮೇಲೆ ಜೂಲಾ, ಕೋಡಿಗೆ ಬಲೂನ್‌ಗಳನ್ನ ಕಟ್ಟಿರ್ತಾರೆ. ಮತ್ತೊಂದು ವಿಷ್ಯ ಅಂದ್ರೆ ಸ್ಪರ್ಧೆಗೆ ಅಂತ್ಲೇ ಹೋರಿಗಳಿಗೆ ಹುರುಳಿಕಾಳು, ಮೆಕ್ಕೆಜೋಳ, ಹಿಂಡಿ, ದಾನಿ ಸೇರಿದಂತೆ ವಿವಿಧ ಬಗೆಯ ಧಾನ್ಯಗಳನ್ನ ತಿನ್ನಿಸಿ ಕಟ್ಟುಮಸ್ತಾಗಿ ಬೆಳೆಸಿರ್ತಾರೆ. ಹೀಗಾಗೀ ಈ ಸ್ಪರ್ಧೆ ಇಲ್ಲಿನ ಜನ್ರಿಗೆ ಖುಷಿ ಜತೆ ಪ್ರತಿಷ್ಠೆ ಕೂಡ ಹೌದು.