ಬಿವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಶಾಸಕ ಯತ್ನಾಳ್ ವಾಗ್ದಾಳಿ

|

Updated on: Feb 11, 2024 | 9:31 PM

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗ್ರಾಮದ ಕೋಡಿಯಾಲ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಟ್ಯಾಕ್ ಮಾಡಿದ್ದಾರೆ. ಬಿವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ. ಅವರೊಂದಿಗೆ ನನ್ನದು ಯಾವುದೇ ವ್ಯವಹಾರವಿಲ್ಲ​. ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ ಎಂದು ವಾಗ್ದಾಳಿ ಮಾಡಿದ್ದಾರೆ. ​

ಬಿವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಶಾಸಕ ಯತ್ನಾಳ್ ವಾಗ್ದಾಳಿ
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಯತ್ನಾಳ್
Follow us on

ಹಾವೇರಿ, ಫೆಬ್ರವರಿ 11: ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗ್ರಾಮದ ಕೋಡಿಯಾಲ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ? ನನಗೆ ರಾಜಿ ಅವಶ್ಯಕತೆ ಇಲ್ಲ. ಬಿ.ವೈ.ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ. ವಿಜಯೇಂದ್ರ ಜತೆ ನನ್ನದು ಯಾವುದೇ ವ್ಯವಹಾರವಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಬೇಕಷ್ಟೇ. ವಿಜಯೇಂದ್ರ ಅವರ ಉದ್ದೇಶ ಏನು. ವಿ.ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ? ವಿಜಯಪುರದಲ್ಲಿ ಏನ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋಲಿಸುವುದಕ್ಕೆ ಏನು ಮಾಡಿದ್ದಾರೆ. ಇವರ ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ ಹೇಳುತ್ತೇನೆ ಎಂದು ಮತ್ತೆ ವಿಜಯೇಂದ್ರ ವಿರುದ್ಧ ಅಟ್ಯಾಕ್ ಮಾಡಿದ್ದಾರೆ.​​

ಹೆದರಿಕೊಂಡು ಓಡಿ ಹೋಗಿ ರಾಜಿ ಆದ ಅನ್ನಬೇಡಿ. ವಿಜಯೇಂದ್ರಗೂ ಅಂಜಲ್ಲ ಅವರ ಅಪ್ಪನಿಗೂ ಅಂಜಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ನಾವೇನು ಬೇರೆಯವರಿಗೆ ಓಟ್ ಹಾಕು ಅಂತ ಹೇಳಲ್ಲ. ಅವರನ್ನು ಕೇಳಿ ಯಾರ್ಯಾರಿಗೆ ಓಟ್ ಹಾಕಬೇಡಿ ಅಂತ ಹೇಳಿದ್ದರು. ಸೋಮಣ್ಣನ ಎರಡು ಕಡೆ ನಿಲ್ಲಿಸಿ ಕೆಡವಿದರು. ನನ್ನನ್ನು, ಬೊಮ್ಮಾಯಿಯನ್ನು ಸೋಲಿಸುವುದಕ್ಕೆ ಎಷ್ಟೆಷ್ಟು ದುಡ್ಡು ಕಳಿಸಿದರು ಗೊತ್ತಿದೆ ಎಂದು ಆರೋಪಿಸಿದರು.

ಬಿ.ವೈ.ವಿಜಯೇಂದ್ರ ನೇತೃತ್ವದ ಚುನಾವಣೆ ಅಲ್ಲ 

ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ಇಲ್ಲಿ ವಿಜಯೇಂದ್ರ ಪ್ರಶ್ನೆನೇ ಬರಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಹೋಗುತ್ತೇವೆ. ವಿಜಯೇಂದ್ರ ಬರಲಿ, ಬಿಡಲಿ ನಾವು ಗೆದ್ದೇ ಗೆಲ್ಲುತ್ತೇವೆ. ಇದು ನರೇಂದ್ರ ಮೋದಿಯವರ ನೇತೃತ್ವದ ಚುನಾವಣೆ. ರಾಮನ ಆಶೀರ್ವಾದದ ಮೇಲೆ‌ ನಡೀತಿರುವ ಚುನಾವಣೆ ಎಂದಿದ್ದಾರೆ.

ನಾವೇನು ಆಪರೇಶನ್ ಮಾಡುವುದು ಬೇಕಿಲ್ಲ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಪರೇಶನ್ ಕಮಲ ನಡೆದ ವಿಚಾರವಾಗಿ ಮಾತನಾಡಿದ್ದು, ನಾವೇನು ಆಪರೇಶನ್ ಮಾಡುವುದು ಬೇಕಿಲ್ಲ. ಒಮ್ಮೊಮ್ಮೆ ಆಪರೇಶನ್ ಆಗದೇ ಅವೇ ಅಬಾಷನ್ ಆಗುತ್ತವೆ. ಕಾಂಗ್ರೆಸ್​ನಲ್ಲಿ ಅಸಮಾಧಾನ ಇದೆ. ಸಿದ್ದರಾಮಯ್ಯ ಇಳಿಸಲು ಕಾಂಗ್ರೆಸ್​ನಿಂದ ಒಂದು ಗುಂಪು ಹೊರಗೆ ಬರಬಹುದು ಎಂದರು.

ಇದನ್ನೂ ಓದಿ: ಕೇಂದ್ರ ಸಚಿವ ಅಮಿತ್ ಶಾ ಸಭೆಯ ಬಗ್ಗೆ ಸಿಟಿ ರವಿ, ವಿಜಯೇಂದ್ರ ವ್ಯತಿರಿಕ್ತ ಹೇಳಿಕೆ

ಡಿಕೆ ಶಿವಕುಮಾರ್​ ಸಿಎಂ ಮಾಡಿದರೆ ರಾಜ್ಯದ ಗತಿ ಏನು ಅಂತ ನಮಗೆ ಭಯ ಇದೆ. ಡಿಕೆ ಶಿವಕುಮಾರ್​ ಯಾರ್ಯಾರ್ ಸೆಟ್ಲಮೆಂಟ್ ಮಾಡುತ್ತಾರೆ ಏನೋ? ಈ ಸಲ ಡಿಕೆ ಶಿವಕುಮಾರ್​ ಸೆಟ್ಲಮೆಂಟ್ ಆಗಲಿದೆ. ಎಲ್ಲರದು ಒಂದೊಂದು ಗುಂಪಿದೆ. ಸಿದ್ದರಾಮಯ್ಯ , ಖರ್ಗೆ, ಸೆಟ್ಲಮೆಂಟ್ ಗಿರಾಕಿದೂ ಗುಂಪಿದೆ. ಎಲ್ಲಾರು ನಾಲ್ಕು-ಐದು ಶಾಸಕರನ್ನು ತಗೊಂಡು ಇಟ್ಟಿದಾರೆ.

ಇದನ್ನೂ ಓದಿ: ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿಯೂ ಎನ್​ಡಿಎ ಗೆಲ್ಲುವ ವಿಶ್ವಾಸ: ಬಿವೈ ವಿಜಯೇಂದ್ರ

ಸಂಸತ್​ ಭವನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕಚೇರಿಗೆ ನಾನು ಹೋಗಿದ್ದೆ. ಅದೇ ವೇಳೆ ಆ ಮನುಷ್ಯನು ಅಲ್ಲಿ ಬಂದು ಕೂತಿದ್ದ, ಭೇಟಿಯಾಗಿದ್ದಾನೆ. ಬಿ.ವೈ.ವಿಜಯೇಂದ್ರರಿಂದ ಬಸನಗೌಡ ಯತ್ನಾಳ್​ಗೆ ಏನೂ ಆಗಬೇಕಿಲ್ಲ. ಭವಿಷ್ಯದಲ್ಲೂ ಏನು ಆಗಬೇಕಿಲ್ಲ ಎಂದರು.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.